ಚಾಮರಾಜನಗರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್(ರಿ) ವತಿಯಿಂದ ಡಾ.ಡಿ. ವೀರೇಂದ್ರ ಹೆಗ್ಗಡೆರವರು ಹಾಗೂ ಮಾತೃಶ್ರೀ ಅಮ್ಮನವರ ಆಶಯದಂತೆ ನಾಗವಳ್ಳಿ ವಲಯದ ನಾಗವಳ್ಳಿ ಗ್ರಾಮದಲ್ಲಿ ಯಾರು ನೋಡಿಕೊಳ್ಳದ್ದ ನಿರ್ಗತಿಕ ಮಾಸಾಶನ ಫಲಾನುಭವಿಯಾದ ಕಾಳಮ್ಮ ಅವರಿಗೆ ಕಳೆದ 4 ವರ್ಷಗಳಿಂದ ತಿಂಗಳಿಗೆ 1 ಸಾವಿರ ರೂ. ಮಾಸಾಶನ ನೀಡುತ್ತಿದ್ದು ಅವರುಗುಡಿಸಲಿನಲ್ಲಿ ಜೀವನ ಸಾಗುಸುತ್ತಿದ್ದು ಯೋಜನೆ ವತಿಯಿಂದ ಅವರಿಗೆ ವಾತ್ಸಲ್ಯ ಮನೆ ಹಸ್ತಾಂತರ ಮಾಡಲಾಯಿತು.
ಜಿಲ್ಲಾ ನಿರ್ದೇಶಕ ಎ. ದಿನೇಶ್ ಮಾತನಾಡಿ ಮಾತೃಶ್ರೀ ಅಮ್ಮನವರ ಕನಸಿನ ಕೂಸಾದ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಈ ವಾತ್ಸಲ್ಯ ಮನೆ ನಿರ್ಮಾಣ ಮಾಡಲಾಗಿದೆ.ಈ ಮನೆಯಲ್ಲಿ ಸುಖ-ಶಾಂತಿ ನೆಮ್ಮದಿ ಆರೋಗ್ಯವಾಗಿ ಜೀವನ ನಡೆಸಲಿ ಎಂದು ಶುಭ ಹಾರೈಸಿದರು. ವಾತ್ಸಲ್ಯ ಮನೆ ನಾಮಫಲಕ ಅನಾವರಣವನ್ನು ಊರಿನ ಗೌಡರಾದ ಪುಟ್ಟಸ್ವಾಮಿರವರು ನೆರವೇರಿಸಿದರು.ಗ್ರಾಮ ಪಂಚಾಯಿತಿ ಪಿಡಿಓ ಭಾಸ್ಕರ್ ಮನೆ ಮುಂಬಾಗಿಲು ರಿಬ್ಬನ್ ಬಿಡಿಸುವ ಮೂಲಕ ಮನೆ ಒಳಗೆ ಪ್ರವೇಶಿಸಿ ಶುಭ ಕೋರಿದರು. ಮಂಜುನಾಥ ಸ್ವಾಮಿಗೆ ಪೂಜೆ ನಡೆಸಿ ಹಾಲು ಉಕ್ಕಿಸಲಾಯಿತು.
ಕಾರ್ಯಕ್ರಮದಲ್ಲಿ ತಾಲ್ಲೂಕು ಯೋಜನಾಧಿಕಾರಿ
ಹರೀಶ್ ಕುಮಾರ್‌ಶೆಟ್ಟಿ,ಮುಖಂಡರಾದ ರಂಗಸ್ವಾಮಿ, ಸುಂದರ, ಬಸವಣ್ಣ, ಚಿಕ್ಕಣ್ಣನಾಯಕ, ಬಂಗಾರಸ್ವಾಮಿ, ಒಕ್ಕೂಟ ಅಧ್ಯಕ್ಷರು ವಲಯದ ಮೇಲ್ವಿಚಾರಕರು, ಜ್ಞಾನ ವಿಕಾಸ ಸಮನ್ವಯಾಧಿಕಾರಿ, ಸೇವಾಪ್ರತಿನಿಧಿ, ಒಕ್ಕೂಟ ಪದಾಧಿಕಾರಿಗಳು ,ಸಂಘದ ಸದ್ಯಸರು ಹಾಜರಿದ್ದರು.