ಚಾಮರಾಜನಗರ: ನಗರದಲ್ಲಿ ಹನುಮ ಜಯಂತೋತ್ಸವ ಯಶಸ್ವಿಯಾಗಿ ನಡೆದ ಹಿನ್ನೆಲೆಯಲ್ಲಿ ಹನುಮ ಜಯಂತೋತ್ಸವ ಸಮಿತಿಯು ಅಭಿನಂದನೆ ಸಲ್ಲಿಸಲಾಯಿತು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಅಧ್ಯಕ್ಷ ರಾಜು ಮಾತನಾಡಿ, ಶ್ರೀ ಹನುಮ ಜಯಂತೋತ್ಸವ ಸಮಿತಿ ವತಿಯಿಂದ ನಡೆದ 4ನೇ ವರ್ಷದ ಹನುಮ ಜಯಂತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಪೋಲಿಸ್ ಇಲಾಖೆ, ಕೆಇಬಿ, ನಗರಸಭೆ, ಮಾಧ್ಯಮ ಮಿತ್ರರು, ಸಂಘ, ಸಂಸ್ಥೆಗಳ ಮುಖ್ಯಸ್ಥರು, ಎಲ್ಲ ಗಣ್ಯರು, ಎಲ್ಲಾ ಕೋಮಿನ ಯಜಮಾನರು, ಮುಖಂಡರು ಗ್ರಾಮಸ್ಥರಿಗೆ ಈ ಮೂಲಕ ಅಭಿನಂದನೆ ಸಲ್ಲಿಸಿದರು
ಶ್ರೀ ಹನುಮ ಜಯಂತೋತ್ಸವ ಸಮಿತಿ ಉಪಾಧ್ಯಕ್ಷ ಹರ್ಷದ್ ಗೌಡ ಮಾತನಾಡಿದರು.
ಶ್ರೀ ಹನುಮ ಜಯಂತೋತ್ಸವ ಸಮಿತಿ ಉಪಾಧ್ಯಕ್ಷ ಶಿವು, ಸಂಚಾಲಕ ಪ್ರವೀಣ್ ಎಲ್.ಪ್ರಧಾನ ಕಾರ್ಯದರ್ಶಿ ಪೃಥ್ವಿ ರಾಜ್, ಕಾರ್ಯದರ್ಶಿ ಗಳಾದ ಲೋಹಿತ್, ಯಶವಂತ್, ಮಹೇಂದ್ರ, ಮಧುಸೂದನ್, ಜೆರಾಕ್ಸ್ ಮಂಜು, ಮನು,ಭಾನು, ಸಿದ್ದು ಹಾಜರಿದ್ದರು.