- ತಪ್ಪು ಅರಿವಾಗುವ ವೇಳೆಗೆ ಅಪ್ಪ ಇಲ್ಲವಾಗಿದ್ದರು
ಆತನ ಹೆಸರು ಹರೀಶ (ಹೆಸರು ಬದಲಾಯಿಸಲಾಗಿದೆ) ಊರು ಇಲ್ಲೆ ಮಂಡ್ಯದ ಜಿಲ್ಲೆಯ ಯುವಕ. ತನ್ನ ೨೪ನೇ ವಯಸ್ಸಿನಲ್ಲಿ ಕುಡಿತದ ಚಟಕ್ಕೆ ದಾಸನಾದ ಹರೀಶನಿಗೆ ಈಗ ೪೦ ವರ್ಷ. ಅಂದರೆ ಕಳೆದ ೨೬ ವರ್ಷಗಳಿಂದ ವ್ಯಸನಕ್ಕೆ ಬಲಿಯಾಗಿದ್ದ. ವಯಸ್ಸಿನಲ್ಲಿದ್ದಾಗ ಕುತೂಹಲಕ್ಕೆಂದು ಸ್ನೇಹಿತರೊಂದಿಗೆ ಹಂಟಿಸಿಕೊಂಡ ಹವ್ಯಾಸ ಚಟವಾಗಿ ಬದಲಾಗಿತ್ತು. ಮನೆಯವರಿಗೆ ಹರೀಶನ ಕುಡಿತದ ವಿಷಯಗೊತ್ತಾಗುವ ವೇಳೆಗೆ ವ್ಯಸನ ಹರೀಶನನ್ನು ಸಂಪೂರ್ಣವಾಗಿ ಆವರಿಸಿಕೊಂಡಿತ್ತು. ಬಾಲ್ಯದಿಂದಲೂ ಎಲ್ಲರಿಂದಲೂ ಒಳ್ಳೆ ಹುಡುಗ ಎನಿಸಿಕೊಂಡಿದ್ದ ಹರೀಶ ವ್ಯಸನದ ಕೂಪಕ್ಕೆ ಬಲಿಯಾಗಿದ್ದ. ಅವನಿಗೆ ಬದುಕಿನ ಹೊಸ ದಾರಿ ನಿರ್ಮಾಣ ಮಾಡಿಕೊಟ್ಟಿದ್ದು, ಮೈಸೂರಿನ ಬವಸಮಾರ್ಗ ವ್ಯಸನಮುಕ್ತ ಮತ್ತು ಪುನರ್ವಸತಿ ಕೇಂದ್ರ.
ಹರೀಶನ ಸಮಸ್ಯೆಗೆ ಪ್ರಾರಂಭದ ದಿನಗಳಲ್ಲಿ ಕಡಿವಾಣ ಹಾಕಲು ಹೆತ್ತವರು ಇನ್ನಿಲ್ಲದ ಪ್ರಯತ್ನ ಮಾಡಿದರು. ಆಣೆ, ಪ್ರಮಾಣ ಮಾಡಿಸಿದರೂ ಬದಲಾಗಲಿಲ್ಲ. ದೇವರಿಗೆ ಅರಿಕೆ ಕಟ್ಟಿಕೊಂಡರೂ ಪ್ರಯೋಜನವಾಗಲಿಲ್ಲ. ಪಾಲಕರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲೇ ಇಲ್ಲ. ಕುಡಿಬೇಡ ಮಗ ಎಂದುಕಣ್ಣೀರು ಹಾಕುತ್ತ ಬುದ್ದಿವಾದ ಹೇಳುತ್ತಿದ್ದ ಹೆತ್ತವ್ವ, ಹರೀಶಕಣ್ಣಿಗೆದೊಡ್ಡ ವಿಲ್ಲನ್ ಆಗಿಹೋದಳು. ಹರೀಶನಿಗೆಅಲ್ಲಿಂದತಾಯಿ ಮೇಲೆ ಶುರುವಾಯಿತು ದ್ವೇಷದಕರಿಛಾಯೆ. ಪಾಪ ಹರೀಶನಿಗೂಗೊತ್ತಿಲ್ಲತಾನುತಾಯಿಯನ್ನೇಕೆಇಷ್ಟೊಂದುದ್ವೇಷ ಮಾಡುತ್ತೇನೆಎಂದು. ಒಬ್ಬನೆಇದ್ದಾಗ ಅವನಿಗೂ ಮನವರಿಕೆಯಾಗುತ್ತಿತ್ತು. ತನ್ನತಾಯಿ ಹೇಳುವುದು ಒಳ್ಳೆಯದಕ್ಕೆ ಅಲ್ಲವೇ !ಆದರೂಯಾಕೆತಾಯಿಯನ್ನುಇಷ್ಟೊಂದುದ್ವೇಷ ಮಾಡುತ್ತೇನೆಎಂದುಒಬ್ಬನೆಕಣ್ಣೀರು ಸುರಿಸುತ್ತಿದ್ದ.
ಹರೀಶನ ಬಗ್ಗೆ ಅಪ್ಪ ಮೃದುಧೋರಣೆ ಹೊಂದಿದ್ದರು. ಮಗ ಇಂದಲ್ಲ ನಾಳೆ ಸರಿಯಾಗುತ್ತಾನೆಎಂದು ಭರವಸೆಇಟ್ಟುಕೊಂಡಿದ್ದರು. ತನಗೆ ವಯಸ್ಸಾಗಿದ್ದರೂ, ಮೈತುಂಬ ಕಾಯಿಲೆ ಇದ್ದರೂದುಡಿದು ಮನೆಯ ಸಂಸಾರ ಸಾಗಿಸುತ್ತಿದ್ದರು. ಆದರೆ ಹರೀಶನಕಾರಣದಿಂದ ಮನೆಯಲ್ಲಿಕಿಂಚಿತ್ತು ನೆಮ್ಮದಿ ಇರಲಿಲ್ಲ. ನಿತ್ಯ ಜಗಳ, ಕಲಹದಿಂದ ಮನೆಯವರೆಲ್ಲ ಬೇಸತ್ತು ಹೋಗಿದ್ದರು. ಹೆತ್ತವ್ವಕಣ್ಣೀರು ಹಾಕುತ್ತ, ತನ್ನಜನ್ಮವನ್ನು ಶಪಿಸುತ್ತಿದ್ದಳು. ಮೂಲೆಯಲ್ಲಿ ಕುಳಿತು ಬಿಕ್ಕಿ, ಬಿಕ್ಕಿ ಅಳುತ್ತಿದ್ದಳು. ದೇವರನ್ನುಅಂಗಲಾಚಿ ಮೊರೆ ಇಡುತ್ತಿದ್ದಳು. ಇನ್ನೂ ಹರೀಶನಅಣ್ಣ, ತಮ್ಮನ ವರ್ತನೆಗಳಿಂದ ಬೇಸತ್ತು ಹೋಗಿದ್ದ. ಹರೀಶನ ಕಾಟ ತಾಳಲಾಗದೆ ಉದ್ಯೋಗ ಅರಸಿ ಬೆಂಗಳೂರಿನ ಕಡೆಗೆ ಮುಖ ಮಾಡಿಬಿಟ್ಟಿದ್ದ.

ಹರೀಶನಿಗೆ ಮೀಸೆ ಚಿಗುರದಿದ್ದರೂತನ್ನ ವಯಸ್ಸಿಗೂ ಮೀರಿದವರಜೊತೆಯಲ್ಲಿ ಸರಿ ಸಮಾನವಾಗಿ ಮದ್ಯ ಸೇವನೆ ಮಾಡುತ್ತಿದ್ದ. ಅವರಜತೆಕಂಠಪೂರ್ತಿಕುಡಿಯುತ್ತಿದ್ದ. ಮತ್ತಿನಲ್ಲಿಜೊತೆಗಿದ್ದವರನ್ನೆ ಬೈಯುತ್ತಿದ್ದ, ಅವರೊಂದಿಗೆ ಜಗಳವಾಡುತ್ತಿದ್ದ. ಒಂದೊಂದು ಬಾರಿ ಕೈಕೈ ಮಿಲಾಯಿಸುವ ಹಂತಕ್ಕೂ ಹೋಗುತ್ತಿದ್ದ. ಹರೀಶನ ಮನೆಯವರು ಉಳ್ಳವರೇನು ಅಲ್ಲ. ಕೂಲಿ, ನಾಲಿ ಮಾಡಿ ಬಂದ ಅಷ್ಟೋ, ಇಷ್ಟೋ ಹಣದಲ್ಲಿ ಹೇಗೊ ಜೀವನ ಮಾಡುತ್ತಿದ್ದರು. ಮನೆಯಲ್ಲಿ ಕಷ್ಟ, ಬಡತನಇದ್ದರೂಅದ್ಯಾವುದನ್ನೂ ಹರೀಶ ಮತ್ತುಅವರಣ್ಣನಿಗೆಗೊತ್ತಾಗದರೀತಿಯಲ್ಲಿ ಬೆಳಸಿ ದೊಡ್ಡವರನ್ನಾಗಿ ಮಾಡಿದ್ದರು. ಆದರೆ ಹರೀಶ ಮಾತ್ರತನ್ನ ಮನೆಯ ಪರಿಸ್ಥಿತಿಯನ್ನು ಎಳ್ಳಷ್ಟೂ ಅರ್ಥ ಮಾಡಿಕೊಳ್ಳಲಿಲ್ಲ. ತಂದೆ, ತಾಯಿಯನ್ನು ಹಣಕ್ಕಾಗಿ ಪೀಡಿಸುತ್ತಿದ್ದ. ಹಣಕೊಡದಿದ್ದರೆ ಜಗಳ ಮಾಡುತ್ತಿದ್ದ, ಆಗಲು ಕೊಡದಿದ್ದರೆ ಮನೆಯಲ್ಲೇ ಕಳ್ಳತನ ಮಾಡುತ್ತಿದ್ದ. ಇಂತದೊಂದು ಕಳ್ಳತನದ ಚಾಳಿ ಹರೀಶನನ್ನುತಪ್ಪುದಾರಿಗೆ ಎಳೆದು ತಂದು ಬಿಟ್ಟಿತ್ತುಎಂದರೆ ವ್ಯಸನ ಎಷ್ಟೊಂದುಅಪಾಯಕಾರಿ ಅನ್ನುವುದನ್ನು ಯೋಚಿಸಿಬೇಕು.!
ಹರೀಶನಅಣ್ಣ ಕೆಲಸಕ್ಕೆ ಸೇರಿ ಶ್ರದ್ಧೆಯಿಂದದುಡಿದಕೈತುಂಬ ಸಂಪಾದನೆ ಮಾಡುತ್ತಿದ್ದ. ತನ್ನನ್ನು ಸಾಕಿ, ಸಲಹಿ ದೊಡ್ಡವನನ್ನಾಗಿ ಮಾಡಿದತನ್ನತಂದೆ, ತಾಯಿ ಮಾಡಿದ ಸಾಲಗಳನ್ನು ತೀರಿಸಿದ. ಊರಲ್ಲಿಅವರಿಗೊಂದು ಸೂರು ಕಟ್ಟಿಸಿದ. ಅವರು ಕೊನೆ ದಿನಗಳನ್ನು ನೆಮ್ಮದಿಯಾಗಿ ಕಾಲ ಕಳಿಯಬೇಕು ಎಂದು ಆಸೆ ಪಟ್ಟ. ಇರುವಒಬ್ಬತಮ್ಮಕುಡಿತದಚಟದಿಂದ ಹೊರ ಬಂದು ಒಳ್ಳೆ ಜೀವನ ಮಾಡಬೇಕುಎಂದು ಸಾಕಷ್ಟು ಪ್ರಯತ್ನ ಪಟ್ಟ. ಬುದ್ದಿವಾದ ಹೇಳಿದ. ಆತನಿಗೂಒಂದು ಮದುವೆ ಮಾಡಿ ನೆಲೆ ಕಲ್ಪಿಸಿಕೊಡಬೇಕು ಎಂದುಚಿಂತಿಸುತ್ತಿದ್ದ. ಆದರೆ ಹರೀಶಇದ್ಯಾವುದನ್ನುಅರ್ಥ ಮಾಡಿಕೊಳ್ಳಲಿಲ್ಲ. ಕುಡಿತದಚಟಕ್ಕೆ ಬಲಿಯಾಗಿ, ತನ್ನನ್ನು ಸುಟ್ಟುಕೊಳ್ಳುವುದರೊಂದಿಗೆ, ಮನೆ, ಮಂದಿಯವರುಆ ಬೆಂಕಿಯಕೆನ್ನಾಲಿಗೆಯಲ್ಲಿ ಬೇಯುವಂತೆ ಮಾಡಿದ. ವ್ಯಸನದ ಕಾಯಿಲೆ ಇಂತಹ ಕೆಲಸಗಳನ್ನು ಹರೀಶನಕೈಯಿಂದ ಮಾಡಿಸುತ್ತಿತ್ತುಎಂದರೆಯಾರೂ ನಂಬಲು ಸಾಧ್ಯವಿಲ್ಲ.
ಇಂದು ಸರಿಯಾಗುತ್ತಾನೆ, ನಾಳೆ ಸರಿಯಾಗುತ್ತಾನೆಎಂದು ಭರವಸೆಇಟ್ಟುಕೊಂಡಿದ್ದವರು ಹರೀಶನ ಆಟಾಟೋಪಗಳನ್ನು ನೋಡಿ ಬೇಸತ್ತು ಹೋಗಿದ್ದರು. ಹರೀಶ ಮಾಡಿಕೊಂಡು ಬರುತ್ತಿದ್ದ ಅಷ್ಟೂ ಅವಾಂತರಗಳಿಗೆ ತಾಯಿ ಮತ್ತುಅಣ್ಣ ಬೆಲೆ ತೆರಬೇಕಾಗುತ್ತಿತ್ತು. ಹಾದಿ, ಬೀದಿಯಲ್ಲಿ ಜಗಳಕ್ಕೆ ಬಿದ್ದರೆ ಮಗನನ್ನುಜೋಪಾನವಾಗಿ ಮನೆ ಬಾಗಿಲಿಗೆ ಕರೆದುಕೊಂಡು ಬರಬೇಕಾಗಿತ್ತು. ಮಗನನ್ನು ವ್ಯಸನದಕೂಪದಿಂದ ಹೊರತರಬೇಕುಎಂದು ನಿರ್ಧರಿಸಿದ ತಾಯಿ, ಊರಿನದೊಡ್ಡವರು, ಸಂಬಂಧಿಕರಿಂದ ಬುದ್ದಿವಾದ ಹೇಳಿಸಿದಳು. ಆದರೆ ಅಗ ಮಾತ್ರತಲೆಆಡಿಸುತ್ತಿದ್ದ ಹರೀಶ ಮರುಕ್ಷಣವೆಕುಡಿದುಅಂತಾಂತರ ಮಾಡುತ್ತಿದ್ದ. ಮನೆ ಮಂದಿಯರನ್ನು ಬೀದಿಗೆ ತರುತ್ತಿದ್ದ.
“ಮಗನಿಗೆ ಮದುವೆ ಮಾಡಿ, ಹೆಂಡತಿ ಬಂದರೆಆತನಿಗೆ ಮೂಗು ದಾರ ಹಾಕುತ್ತಾಳೆ ಎಂದು’ ಯಾರೋ ಸಲಹೆ ಕೊಟ್ಟರು. ಅವರ ಸಲಹೆ ಏನೋ ಸರಿ. ಆದರೆ, ಹರೀಶನಿಗೆಕುಡಿತದಚಟ, ಕೈಯಲ್ಲಿ ಬೇರೆಯಾವುದೇ ಕೆಲಸವಿಲ್ಲ, ಯಾರು ಹೆಣ್ಣುಕೊಡುತ್ತಾರೆ
ಎನ್ನುವುದುದೊಡ್ಡಚಿಂತೆಯಾಗಿಕಾಡುತ್ತಿತ್ತು ಆ ಮಹಾತಾಯಿಗೆ. ಆದರೂದೇವರುಇದ್ದಾನೆಎಂದು ಮನಗಂಡು ಹೆಣ್ಣು ನೋಡಲು ಪ್ರಾರಂಭ ಮಾಡಿಯೇ ಬಿಟ್ಟಳು. ಒಂದೆರಡುಕಡೆ ಹೆಣ್ಣಿನ ಮನೆಯವರನ್ನು ವಿಚಾರಿಸಿದರು. ಆದರೆ ಹರೀಶನ ಅವಾಂತರಗಳು ಎಲ್ಲೆಡೆಜಗಜ್ಜಾಯಿರಾಗಿದ್ದರಿಂದಯಾರು ಹೆಣ್ಣುಕೊಡಲು ಮುಂದೆ ಬರಲಿಲ್ಲ. ಈ ಬೆಳವಣಿಗೆಗಳಿಂದ ತಂದೆ, ತಾಯಿ ಮತ್ತಷ್ಟುಚಿಂತೆಗೀಡಾದರು. ದೊಡ್ಡ ಮಗನ ರೀತಿ ಹೆಂಡತಿ, ಮಕ್ಕಳ ಜತೆ ಸುಖವಾಗಿ ಇರಬೇಕಿದ್ದಕಿರಿಯ ಮಗ ಕುಡಿತದಜಟಕ್ಕೆದಾಸನಾಗಿತನ್ನಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾನಲ್ಲ ಎಂದುಕೊರಗಿ, ಕೊರಗಿ ಸೊರಗಿ ಹೋಗಿದ್ದರು.
ಈ ನಡುವೆಯೇ ಹರೀಶ, ಹೆಣ್ಣೊಂದನ್ನು ಮನಸಾರೆ ಪ್ರೀತಿ ಮಾಡುತ್ತಿದ್ದ. ಆ ಹುಡುಗಿಯೂಕೂಡ ಹರೀಶನ ಬಗ್ಗೆ ಎಲ್ಲವೂಗೊತ್ತಿದ್ದರೂಆತನ ನಿಷ್ಕಲ್ಮಶ ಪ್ರೇಮಕ್ಕೆ ಮನಸೋತು ಹೋಗಿದ್ದಳು. ಕೊನೆಗೂ ಈ ವಿಷಯ ಮನೆಯವರಿಗೆಗೊತ್ತಾಯಿತು. ಆದರೆ ಹೆಣ್ಣು ಕೇಳವ ಧೈರ್ಯವನ್ನುಯಾರು ಮಾಡಲಿಲ್ಲ. ಯಾಕೆಂದರೆ ಹರೀಶನ ಬುದ್ದಿಯನ್ನು ಮನೆಯವರು, ಸಂಬಂಧಿಕರುಚೆನ್ನಾಗಿಅರ್ಥ ಮಾಡಿಕೊಂಡಿದ್ದರು. ಒಂದು ವೇಳೆ ಮದುವೆ ನಂತರವೂಈತಕುಡಿತದಚಟ ಮುಂದುವರಿಸಿದರೆ, ಒಂದು ಹೆಣ್ಣಿನಜೀವನವೇ ಹಾಳಾಗಿ ಹೋಗುತ್ತದೆಎನ್ನುವುದುಅವರೆಲ್ಲರಿಗೂಚೆನ್ನಾಗಿ ಮನವರಿಕೆಯಾಗಿತ್ತು. ಆದರೂ ಹರೀಶನದೊಡ್ಡಪ್ಪನ ಮಗ, ಹರೀಶನ ಮೇಲೆ ಭರವಸೆಇಟ್ಟು, ಹೆಣ್ಣು ಕೇಳುವ ಧೈರ್ಯ ಮಾಡಿದರು. ಕೊನೆಗೆ ಹುಡುಗಿಯ ಮನೆಯವರನ್ನು ಒಪ್ಪಿಸಿ ಮಧುವೆ ಮಾಡಿ ಮುಗಿಸಿದರು. ಜೀವನ ಮಾಡಿಕೊಂಡು ಹೋಗಲಿ ಎಂದು ಬದುಕಿಗೆಒಂದುದಾರಿ ಮಾಡಿಕೊಟ್ಟರು. ವರ್ಷತುಂಬುವಷ್ಟರಲ್ಲಿ ಮುದ್ದಾದ ಮಗು ಕೂಡಆಯಿತು.
ಆದರೆ ಮದುವೆಯ ನಂತರವೂ ಹರೀಶ ಬದಲಾಗಲಿಲ್ಲ. ತನ್ನ ಹಳೆ ಚಾಳಿಯನ್ನೆ ಮುಂದುವರಿಸುತ್ತಿದ್ದ. ಮನೆಗೆ ಮಗ ಬಂದರೂಕುಡಿದು ಬಂದುಗಲಾಟೆ ಮಾಡುತ್ತಿದ್ದ. ಆ ಮುಗುವಿಗೆ ಅಪ್ಪನ ಪ್ರೀತಿತೋರೆದೆ ವ್ಯಸನದ ಕೂಪಕ್ಕೆ ಬಲಿಯಾಗಿದ್ದ. ಇದನ್ನುಕಂಡು ಬೇಸತ್ತಕುಟುಂಬಸ್ಥರು ಬಸವಮಾರ್ಗ ವ್ಯಸನಮುಕ್ತ ಮತ್ತು ಪುನರ್ವಸತಿಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಿದರು. ಚಿಕಿತ್ಸೆಯ ಸಮಯದಲ್ಲಿತನ್ನ ತಪ್ಪುಗಳನ್ನು ಅರ್ಥ ಮಾಡಿಕೊಂಡ. ಹರೀಶ ಬದಲಾಗಬೇಕುಎಂದು ಮನಸ್ಸು ಮಾಡಿದ. ಕೊನೆಗೆ ಇಲ್ಲಿಂದ ಬದಲಾಯಿತುಆತನ ಬದುಕು. ಈಗ ಹರೀಶಕುಟುಂಬಸ್ಥರಜೊತೆಅನ್ಯೂನ್ಯವಾಗಿದ್ದಾನೆ. ಜವಾಬ್ದಾರಿಯುತ ವ್ಯಕ್ತಿಯಾಗಿ ಸಂಸಾರ ಮಾಡುತ್ತಿದ್ದಾನೆ. ಹೆಂಡತಿ, ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾನೆ. ಇಷ್ಟು ದಿನ ಬರಿ ದ್ವೇಷ ಮಾಡುತ್ತಿದ್ದತಾಯಿಯನ್ನುದೇವರಂತೆಆರಾಧಿಸುತ್ತಿದ್ದಾನೆ. ಅಣ್ಣನಿಗೆ ಒಳ್ಳೆಯ ತಮ್ಮನಾಗಿಆತನ ಮಾರ್ಗದರ್ಶನದಲ್ಲಿ ಹೆಜ್ಜೆಗೆ ಹೆಜ್ಜೆ ಹಾಕುತ್ತಿದ್ದಾನೆ. ಆದರೆತಂದೆಯನ್ನುಯಾವಾಗಲು ನೆನಪಿಸಿಕೊಳ್ಳುತ್ತಾನೆ ಹರೀಶ. ನಾನು ಕುಡಿತದಚಟಕ್ಕೆ ಬಲಿಯಾಗಿದ್ದಾಗಅಪ್ಪ ಹೇಳುತ್ತಿದ್ದ ಬುದ್ದಿವಾದದ ಮಾತುಗಳು ಅರ್ಥ ವಾಗಲಿಲ್ಲ. ಕುಡಿತ ಬಿಟ್ಟು ಈಗ ಒಳ್ಳೆಯ ಮನಷ್ಯನಾಗಿದ್ದೇನೆ. ಇದನ್ನು ನೋಡಲುಅಪ್ಪ ನನ್ನೊಂದಿಗಿಲ್ಲ. ” ಮಗ ಒಂದಲ್ಲ ಒಂದು ದಿನ ಬದಲಾಗುತ್ತಾನೆಎಂದು ಭರವಸೆಇಟ್ಟುಕೊಂಡಿದ್ದಅಪ್ಪನ ನಂಬಿಕೆ ಸುಳ್ಳಾಗಲಿಲ್ಲ’. ಅಪ್ಪಇಂದುಇರಬೇಕಿತ್ತುಎಂದುಕಣ್ಣಲ್ಲಿ ನೀರು ತುಂಬಿಕೊಳ್ಳುತ್ತಾನೆ ಹರೀಶ.
ಹರೀಶ ಮಾಡಿದ ತಪ್ಪುಗಳನ್ನು ನೀಡುವು ಮಾಡಬೇಡಿ. ಶುಭವಾಗಲಿ.

ಎಸ್.ಬಸವರಾಜು
ಸಂಸ್ಥಾಪಕರು
ಬಸವಮಾರ್ಗ ವ್ಯಸನಮುಕ್ತ ಮತ್ತು ಪುನರ್ವಸತಿ ಕೇಂದ್ರ
ಮೈಸೂರು