ಆರೋಗ್ಯ ತಪಾಸಣಾ ಶಿಬಿರದಿಂದ ಜನರಿಗೆ ಅನುಕೂಲ :  ಸಿ.ಮಂಜುನಾಥ್ ಪ್ರಸನ್ನ

  • ನಂದೀಶ್ ಮೂಡ್ಲುಪುರ ಹುಟ್ಟುಹಬ್ಬ:  ಉಚಿತ ಆರೋಗ್ಯ ತಪಾಸಣಾ ಶಿಬಿರ

ಚಾಮರಾಜನಗರ:  ಉಚಿತ ಆರೋಗ್ಯ ತಪಾಸಣಾ ಶಿಬಿರದಿಂದ ಜನರಿಗೆ ಅನುಕೂಲಕರವಾಗಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕ ಸಿ.ಮಂಜುನಾಥ ಪ್ರಸನ್ನ ಹೇಳಿದರು.
  ನಗರದ ರೋಟರಿ ಭವನದಲ್ಲಿ ಅಖಿಲ ಭಾರತೀಯ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಮೂಡ್ಲುಪುರ ನಂದೀಶ್ ಅವರ ಹುಟ್ಟುಹಬ್ಬದ ಅಂಗವಾಗಿ ನಂದಿಬ್ರಿಗೇಡ್, ಜೆಎಸ್‌ಎಸ್ ವೈದ್ಯಕೀಯ ಸಂಸ್ಥೆ, ಜೆಎಸ್ಎಸ್ ನರ್ಸಿಂಗ್ ಕಾಲೇಜು, ರೋಟರಿ ಸಂಸ್ಥೆ ವತಿಯಿಂದ ಅಯೋಜಿಸಿದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಆರೋಗ್ಯ ಸೇವೆ ಒಂದು ಅತ್ಯುತ್ತಮವಾದ ಸೇವೆಯಾಗಿದೆ. ಪವಿತ್ರಕ್ಕೆ ಹೆಸರಾದ ಒಂದು ಸೇವೆಯಾಗಿದೆ. ಯುಳ್ಳವರು ದೊಡ್ಡದೊಡ್ಡ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಾರೆ. ಆದರೆ ಸಾಮಾನ್ಯ ಜನರು ಬಡವರಿಗೆ ಇಂತಹ ಉಚಿತ ಆರೋಗ್ಯ ಶಿಬಿರಗಳು ತುಂಬಾ ಪರಿಣಾಮಕಾರಿಯಾಗಿ ಉಪಯೋಗ ಆಗುತ್ತದೆ ಎಂದರು.
ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷರಾದ ಮೂಡ್ಲು ಪುರ ನಂದೀಶ್ ಅವರು ಎಲ್ಲ ಸಮಾಜದ ಮುಖಂಡರೊಂದಿಗೆ  ಪ್ರೀತಿ,ವಿಶ್ವಾಸದಿಂದ ಇದ್ದು ಅನೇಕ  ಸಮಾಜಮುಖಿ ಸೇವಾ ಕಾರ್ಯಗಳನ್ನು ಮಾಡುತ್ತಿದ್ದಾರೆ. ಅವರ ಹುಟ್ಟುಹಬ್ಬದ ಅಂಗವಾಗಿ ನಂದಿ ಬ್ರಿಗೇಡ್ ಆರೋಗ್ಯ ಶಿಬಿರ ಹಮ್ಮಿಕೊಂಡು ಜನರಿಗೆ ಅನುಕೂಲ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ ವಿಚಾರ. ನಂದೀಶ್ ಮೂಡ್ಲು ಪುರ ಅವರಿಗೆ ಒಳಿತಾಗಲಿ ಎಂದು ಶುಭ ಕೋರಿದರು.
   ಅಧ್ಯಕ್ಷತೆ ವಹಿಸಿದ್ದ ರೋಟರಿ ಅಧ್ಯಕ್ಷ ಕಾಗಲವಾಡಿ ಚಂದ್ರು ಮಾತನಾಡಿ,  ಹುಟ್ಟಹಬ್ಬವನ್ನು ಸಡಗರದಲ್ಲಿ ಆಚರಣೆ ಮಾಡಿಕೊಳ್ಳುವುದು ಅಲ್ಲ. ಜನೋಪಯೋಗಿಯೊಂದಿಗೆ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುವುದಿಂದ ನೂರಾರು ವರ್ಷಗಳ ಕಾಲ ಅವರ ನೆನಪು ಉಳಿಯುತ್ತದೆ. ಅಂತಹ ಕಾರ್ಯಕ್ರಮವನ್ನು ಮೂಡ್ಡು ಪುರ ನಂದೀಶ್ ಅವರ ಹುಟ್ಟುಹಬ್ಬದ ಅಂಗವಾಗಿ ನಂದಿ ಬ್ರಿಗೇಡ್ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿರುವುದು ಒಂದು ಅರ್ಥಪೂರ್ಣ ಕಾರ್ಯಕ್ರಮವಾಗಿದೆ. ಭಗವಂತ ಮೂಡ್ಡು ಪುರನಂದೀಶ್ ಅವರಿಗೆ ಹೆಚ್ಚಿನ ಆರೋಗ್ಯ, ಆಯಸ್ಸು ಕರುಣಿಸಲಿ ಎಂದು ಶುಭ ಕೋರಿದರು.
  ಪರಿಸರಪ್ರೇಮಿ  ಸಿ.ಎಂ.ವೆಂಕಟೇಶ್ ಮಾತನಾಡಿ,
ರಕ್ತದೊತ್ತಡ, ಮಧುಮೇಹ, ಇಸಿಜಿ, ಹಾಗೂ ಇನ್ನಿತರ ತಪಾಸಣೆ ನಡೆಸಲಾಯಿತು.
 ಕಾರ್ಯಕ್ರಮದಲ್ಲಿ ಡಾ.ಅಜಯ್,  ಅರುಷಿ, ರಾಧಿಕ, ನಿವೃತ್ತ ಶಿಕ್ಷಕ  ಶಿವಕುಮಾರ್, ನಂದಿ ಬಿಗ್ರೇಡ್ ಮುಖ್ಯಸ್ಥ  ಶಿವರಾಜ್ ಸಿದ್ದಯ್ಯನಪುರ, ಗುರುಪ್ರಸಾದ್, ಹರಿಪ್ರಸಾದ್, ಮಂಜೇಶ್, ಅಶೋಕ, ಭೂಮಿಕ ಮಂಜು, ರವಿ, ನಂದೀಶ್, ಅರ್ಜುನ, ಗಿರೀಶ್ ಪುಣಜನೂರು, ಆಟೋ ನಾಗೇಂದ್ರ ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *