ಚಾಮರಾಜನಗರ: ತಾಲೂಕಿನ ಕೋಡಿಮೋಳೆ ಗ್ರಾಮದ ಉಪ್ಪಾರ ಸಮುದಾಯ ಭವನದಲ್ಲಿ ಗ್ರಾಮಸ್ಥರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಅರಿವು ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಗ್ರಾಮದ ಉಪ್ಪಾರ ಸಮುದಾಯ ಭವನದಲ್ಲಿ ಹೆಲ್ಪ್ ಏಜ್ ಇಂಡಿಯಾ ಹಾಗೂ ಎಸ್‍ಎಮ್‍ಎಫ್‍ಜಿ ಹಾಗೂ ಭಗತ್‍ಸಿಂಗ್ ಯುವ ಸೇನೆ ಸಹಯೋಗದೊಂದಿಗೆ ಆಯೋಜಿಸಿಲಾಗಿದ್ದ ಕಾರ್ಯಕ್ರಮವನ್ನು ಡಾ.ವಿಶಾಲ್ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಗ್ರಾಮದ ಪುರುಷರು, ಮಹಿಳೆಯರು, ವಯೋವೃದ್ಧರು, ಮಕ್ಕಳು ಎಲ್ಲರೂ ಕೂಡಾ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸಗಳು ಕಂಡುಬಂದರೂ ಕೂಡಾ ತಕ್ಷಣವೇ ಹತ್ತಿರ ಇರುವ ಪ್ರಾಥಮಿಕ ಆರೋಗ್ಯಕೇಂದ್ರಗಳಿಗೆ ಭೇಟಿ ನೀಡಿ ಔಷಧಗಳನ್ನು ಪಡೆಯಬೇಕು ಎಂದು ಸಲಹೆ ನೀಡಿದರು.
ಶಿಬಿರದಲ್ಲಿ ಜನತೆಗೆ ಬಿಪಿ, ಮಧುಮೇಹ, ಅಲರ್ಜಿ, ದಮ್ಮು, ಗ್ಯಾಸ್ಟ್ರಿಕ್, ಜ್ವರ ಇನ್ನಿತರ ಲಕ್ಷಣಗಳನ್ನು ಉಚಿತ ತಪಾಸಣೆ ಮಾಡಲಾಯಿತು. ಅವಶ್ಯಕತೆ ಇದ್ದವರಿಗೆ ಔಷಧಿಗಳ ವಿತರಣೆಯನ್ನು ಸಹ ಮಾಡಲಾಯಿತು.
ಈ ಸಂದರ್ಭದಲ್ಲಿ ಫಾರ್ಮಸ್ಟಿಕ್ ಸರ್ವ ಮಂಗಳ, ಸೋಶಿಯಲ್ ವರ್ಕರ್ ರವೀಂದ್ರ, ಸಂಸ್ಥೆಯ ಎಸ್ಪಿಓ ಪ್ರಕಾಶ್ , ಗ್ರಾಮದ ಯುವ ಸೇನೆ ಅಧ್ಯಕ್ಷ ಕಾಂತರಾಜು, ನಾಗೇಶ್, ಶಿವು, ವಿಜಯ್, ಗ್ರಾಮದ ಯಜಮಾನರಾದ ರಂಗಸ್ವಾಮಿ, ಗ್ರಾಮದ ಮುಖಂಡರು ಸೇರಿದಂತೆ ಮತ್ತಿತರರಿದ್ದರು.