ಡಾ.ಕೆ.ಬಿ.ಗಣಪತಿ ಅವರ ನಿಧನಕ್ಕೆ ಭಾವಪೂರ್ಣ ಶ್ರದ್ಧಾಂಜಲಿ

ಚಾಮರಾಜನಗರ:  ಸ್ಟಾರ್ ಆಫ್ ಮೈಸೂರು ಹಾಗೂ ಮೈಸೂರು ಮಿತ್ರ ಪತ್ರಿಕೆ ಸಂಸ್ಥಾಪಕ ಸಂಪಾದಕ ಕೆ.ಬಿ.ಗಣಪತಿ  ಅವರ ನಿಧನದ ಹಿನ್ನೆಲೆಯಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿ
ಸಲ್ಲಿಸಲಾಯಿತು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಕೆ.ಬಿ.ಗಣಪತಿ ಅವರ ಭಾವಚಿತ್ರಕ್ಕೆ  ಮೊದಲಿಗೆ ಪುಷ್ಪಾರ್ಚನೆ ಮಾಡಲಾಯಿತು. ಬಳಿಕ ಒಂದು ನಿಮಿಷ ಮೌನಾಚರಿಸಲಾಯಿತು.
ಈ ಸಂದರ್ಭದಲ್ಲಿ   ಸಂಘದ ಜಿಲ್ಲಾಧ್ಯಕ್ಷ ದೇವರಾಜು ಕಪ್ಪಸೋಗೆ ಮಾತನಾಡಿ, ಕೆ.ಬಿ.ಗಣಪತಿ ಅವರು ಭಾರತೀಯ ಪತ್ರಿಕೋದ್ಯಮದಲ್ಲಿ ದಂತ ಕಥೆಯಾಗಿ ದ್ದಾರೆ. ಇವರು 50 ವರ್ಷಗಳ ಕಾಲ ಸುದೀರ್ಘವಾಗಿ ಪತ್ರಕರ್ತರಾಗಿದ್ದರು. ತಮ್ಮ ಕೊನೆಯುಸಿರು ಇರುವ ತನಕ ಪತ್ರಿಕೋದ್ಯಮವನ್ನೇ ಉಸಿರಾಗಿಸಿಕೊಂಡಿದ್ದರು ಎಂದರು.ಇವರ ಹೊಸ ಚಿಂತನೆಗಳು, ವಸ್ತುನಿಷ್ಟೆ ವಿಮರ್ಶೆಗಳು ಜನರ ಗಮನ ಸೆಳೆಯುತ್ತಿದ್ದವು. ಶಿಸ್ತು, ಸಂಯಮ ರೂಢಿಸಿಕೊಂಡಿದ್ದ ಗಣಪತಿ ಅವರು ಎಲ್ಲರ ಮೆಚ್ಚುಗೆಗೆ ಕಾರಣರಾಗಿದ್ದರು. ಇವರ ಅಗಲಿಕೆಯಿಂದ ಪತ್ರಿಕೋದ್ಯಮಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಮೃತರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಆ ದೇವರು ನೀಡಲಿ ಎಂದರು.

ಹಿರಿಯ ಪತ್ರಕರ್ತ ಕೆ.ಎಸ್.ಬನಶಂಕರಾ ಆರಾಧ್ಯ ಮಾತನಾಡಿ, ಆಂದೋಲನ ಪತ್ರಿಕೆಯ ಸಂಪಾದಕರಾದ ರಾಜಶೇಖರಕೋಟಿ,
ಮೈಸೂರು ಮಿತ್ರ ಪತ್ರಿಕೆ ಸಂಸ್ಥಾಪಕ ಸಂಪಾದಕರಾದ ಕೆ.ಬಿ.ಗಣಪತಿ ಅವರು ಈ ಭಾಗದ ಪತ್ರಿಕೋದ್ಯಮವನ್ನು ರಾಜ್ಯದ ಬೇರೆ ಎಲ್ಲ ಜಿಲ್ಲೆಗಳಿಗಿಂತ ಬಹಳ ಭಿನ್ನವಾಗಿ ರೂಪಿಸಿದಂತವರು. ಕೆ.ಬಿ.ಗಣಪತಿಯವರು ಶ್ರೀಮಂತ ಕುಟುಂಬದಿಂದ ಬಂದವರು.ರಾಜಶೇಖರಕೋಟಿ ಬಡಕುಟುಂಬದಿಂದ ಬಂದವರು. ಅವರಿಬ್ಬರು ಬೇರೆಬೇರೆ ಹಿನ್ನಲೆಯಿಂದ ಬಂದರು ಕೂಡ ಅವರ ನೋಡಿದ ರೀತಿಯಲ್ಲಿ ಅವರ ದೃಷ್ಟಿಕೋನದಲ್ಲಿ ಪತ್ರಿಕೆಗಳನ್ನು ಬೆಳೆಸಿದರು ಎಂದರು.

ಹಿರಿಯ ಪತ್ರಕರ್ತ ಅಬ್ರಹಾಂ ಡಿ.ಸಿಲ್ವ, ರಾಜಶೇಖರ ಕೋಟಿ ಅವರ ಮೂಲಕ ಕೆ.ಬಿ.ಗಣಪತಿ ಯವರ ಪರಿಚಯವಾಯಿತು.  ಪತ್ರಿಕೆಗಳನ್ನು ಬೃಹತ್ ಮಟ್ಟದಲ್ಲಿ ಬೆಳೆಸಲು ಅಪಾರವಾಗಿ ಶ್ರಮಿಸಿದರು. ಅವರ ಸೇವೆ ಸಾರ್ಥಕ ವಾಯಿತು ಎಂದರು.
ನನಗೆ ಅನ್ನದಾತರು : ಮೈಸೂರು ಮಿತ್ರ ಪತ್ರಿಕೆ ಜಿಲ್ಲಾ ವರದಿಗಾರ ಸಿದ್ದಲಿಂಗಸ್ವಾಮಿ ಮಾತನಾಡಿ, ಮೈಸೂರು ಮಿತ್ರ ಪತ್ರಿಕೆ ಸಂಸ್ಥಾಪಕ ಸಂಪಾದಕರಾದ ಕೆ.ಬಿ.ಗಣಪತಿ ಅವರು ನನಗೆ ಅನ್ನದಾತರು. ತಮ್ಮ ಪತ್ರಿಕೆಯಲ್ಲಿ ನನಗೆ ಪತ್ರಿಕೆಯಲ್ಲಿ ಕೆಲಸ ಕೊಟ್ಟರು. 21 ವರ್ಷದಿಂದ ಅವರ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಅವರ ನಿಧನದ ಸುದ್ದಿ ತಿಳಿದು ತುಂಭಾ ನೋವು ಉಂಟಾಯಿತು. ಭಗವಂತ ಅವರ ಆತ್ಮಕ್ಕೆ ಶಾಂತಿ ದೊರಕಿಸಲಿ,  ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಆ ದೇವರು ನೀಡಲಿ ಎಂದರು.

ರಾಜ್ಯ ಸಮಿತಿ ಸದಸ್ಯ ಗೂಳಿಪುರ ನಂದೀಶ್, ಹಿರಿಯ ಪತ್ರಕರ್ತರಾದ  ರಾಜೇಶ್ ಬೆಂಡರವಾಡಿ ಮಾತನಾಡಿದರು.

ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಕ್ಕೂರು ಪ್ರಸಾದ್, ಹಿರಿಯ ಪತ್ರಕರ್ತರಾದ ಎಸ್.ಎಂ.ನಂದೀಶ್, ಕೆ.ಎಸ್
ಫಾಲಲೋಚನ ಆರಾಧ್ಯ, ಬಾಲಚಂದ್ರ, ಮಹೇಂದ್ರ, ರೇಣುಕೇಶ್, ಪ್ರಸಾದ್, ಗಂಗಾಧರ್, ರಾಜೇಂದ್ರ, ಉಲ್ಲಾಸ್, ರಂಗೂಪುರ ಶಿವಕುಮಾರ್, ಹೊಮ್ಮ ನಂಜುಂಡನಾಯಕ, ಚರಣ್, ಬಸವರಾಜು ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *