ಚಾಮರಾಜನಗರ ಸುಂದರ ನಗರವಾಗಿಸಲು ಸಹಕರಿಸಿ : ಪರಶುರಾಮ ಛಲವಾದಿ

  • ಬೀದಿಬದಿ ವ್ಯಾಪಾರಿಗಳಿಗೆ ಸ್ವಚ್ಚತಾ ತಿಳುವಳಿ ನೋಟೀಸ್
  • ಒಣಕಸ,ಹಸಿ ಕಸ ಪ್ರತ್ಯೇಕಿಸಿ ನಗರಸಭಾ ಕಸದ ವಾಹನಗಳಿಗೆ ನೀಡಿ.

ಚಾಮರಾಜನಗರ : ನಗರಸಭಾ ಪೌರಾಯುಕ್ತ ಪರಶುರಾಮ ಛಲವಾದಿ ಅಧಿಕಾರಿ, ಸಿಬ್ಬಂದಿಗಳೊಂದಿಗೆ  ಮಂಗಳವಾರ ಸಂಜೆ ದಿಢೀರ್ ಕಾರ್ಯಚರಣೆ ನಡೆಸಿ ಬೀದಿಬದಿ ವ್ಯಾಪಾರಿಗಳು, ಜ್ಯೂಸ್ ಕಾರ್ನರ್ ಚಾಟ್ಸ್ ಮಳಿಗೆ ಮಾಲೀಕರಿಗೆ ಸ್ವಚ್ಚತಾ ಬಗ್ಗೆ ಜಾಗೃತಿ ಮೂಡಿಸಿ ಅಂಗಡಿ ಸುತ್ತ ಶುಚಿಯಾಗಿಟ್ಟುಕೊಳ್ಳುವಂತೆ ಅಂಗಡಿ ಮಾಲೀಕರಿಗೆ  ಸ್ವಚ್ಚತಾ ತಿಳುವಳಿಕೆ ನೋಟೀಸ್ ನೀಡಿದರು.
ನಗರದ ರಥ ಬೀದಿ,  ಚಾಮರಾಜೇಶ್ವರ ಉದ್ಯಾನವನ ಮುಂಭಾಗ, ಅಗ್ರಹಾರ ಬೀದಿ, ಚಿಕ್ಕಂಗಡಿ ಬೀದಿ, ನಗರಸಭಾ ಕಚೇರಿ ಮುಂಭಾಗದಲ್ಲಿ ಬೀದಿ ವ್ಯಾಪಾರಸ್ಥರಿಗೆ ಸ್ವಚ್ಚತೆ ಕಾಪಾಡಿಕೊಳ್ಳುವಂತೆ ಅರಿವು ಮೂಡಿಸಿ ಮಾಲೀಕರಿಗೆ ತಿಳುವಳಿಕೆ ನೋಟೀಸ್ ನೀಡಿ ಒಣಕಸ ಹಸಿಕಸ ಪ್ರತ್ಯೇಕ ವಾಗಿ ನಗರಸಭೆ ವಾಹನಗಳಿಗೆ ನೀಡುವ ಮೂಲಕ ಚಾಮರಾಜನಗರವನ್ನು ಒಂದು ಸುಂದರ ನಗರವನ್ನಾಗಿಸಲು ನಗರದ ಜನತೆ ನಗರಸಭೆಯೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
  ಈ ಸಂದರ್ಭದಲ್ಲಿಹಿರಿಯ ಆರೋಗ್ಯ ಅಧಿಕಾರಿ ಮಂಜುನಾಥ್, ನಗರಸಭಾ  ಸಮಯದಾಯ ಸಂಚಾಲಕರಾದ  ಪವಿತ್ರ, ಶೈಲಜಾ, ಶೀಲಾ, ಸುನೀತಾ, ರಾಜೇಶ್ವರಿ, ಕಾವ್ಯ ,ಪ್ರಕೃತಿ, ಸುಮ, ಮಹದೇವಮ್ಮ,  ಸಿಬ್ಬಂದಿ ಗಳಾದ ಸಿ.ಡಿ.ವೆಂಕಟೇಶ್, ತಂಗವೇಲು, ಮಣಿಕಂಠ ಹಾಜರಿದ್ದರು.

Leave a Reply

Your email address will not be published. Required fields are marked *