
ಚಾಮರಾಜನಗರ: ಜಿಲ್ಲಾ ಬಿಜೆಪಿ ಎಸ್‌ಸಿ ಮೋರ್ಚಾದ ಕಾರ್ಯದರ್ಶಿಯಾಗಿ ರಾಮಸಮುದ್ರ ಹೇಮಂತ್‌ಕುಮಾರ್ ಬಿ. ನೇಮಕಗೊಂಡಿದ್ದಾರೆ.
ನಿಮಗೆ ನೀಡಿರುವ ಜವಾಬ್ದಾರಿಯನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಬೇಕು. ಮುಂಬರುವ ಎಲ್ಲಾ ರೀತಿಯ ಸವಾಲುಗಳನ್ನು ಎದುರಿಸಿ ಪಕ್ಷದ ವರ್ಚಸ್ಸುನ್ನು ಹೆಚ್ಚಿಸಲು ಶ್ರಮಿಸುವಂತೆ ಜಿಲ್ಲಾಧ್ಯಕ್ಷ ಮೂಡಹಳ್ಳಿ ಮೂರ್ತಿ ಆದೇಶಪತ್ರ ಆಶಿಸಿ, ನಗರದ ಕುಲುಮೆ ರಸ್ತೆಯಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಆದೇಶಪತ್ರ ವಿತರಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೂಡಕೂಡುಪ್ರಕಾಶ್, ಎಸ್‌ಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಮುತ್ತಿಗೆಮೂರ್ತಿ, ಮುಖಂಡರಾದ ಮಾಂಬಳ್ಳಿರಾಮಣ್ಣ, ವೇಣುಗೋಪಾಲ್, ಟಗರಪುರ ರೇವಣ್ಣ, ಹೊನ್ನೂರು ಮಹದೇವಸ್ವಾಮಿ, ಕಾಡಹಳ್ಳಿ ಕುಮಾರ್, ವರಹಾಸ್ವಾಮಿ, ಸೋಮಣ್ಣ ಉಪ್ಪಾರ್, ಪರಶಿವಮೂರ್ತಿ, ರಾಜಪ್ಪ ಇತರರು ಹಾಜರಿದ್ದರು.