- ಹೆಗ್ಗವಾಡಿಪುರದ ಹೆಚ್‌ಎಂಸಿ ಕುಟುಂಬದಿಂದ ಅರವಟ್ಟಿಗೆ
- ಅರವಟ್ಟಿಗೆ ಬೀದಿಗೆ ಮೂಲಸೌಕರ್ಯ ಕಲ್ಪಿಸಲು ಹೆಗ್ಗವಾಡಿಪುರ ಮಹೇಶ್‌ಕುಮಾರ್ ಒತ್ತಾಯ
ಮುಡುಕುತೊರೆ : ಐತಿಹಾಸಿಕ ಮುಡುಕುತೊರೆ ಜಾತ್ರಾ ಮಹೋತ್ಸವವು ಸಾಂಪ್ರಾದಾಯಿಕ ಹಾಗೂ ಧಾರ್ಮಿಕ ಪೂಜಾ ಕಾರ್ಯಕ್ರಮದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು, ಸರತಿಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಪುನೀತರಾದರು.
ಮುಡುಕುತೊರೆಯ ಅರವಟ್ಟಿಗೆ ಬೀದಿಯಲ್ಲಿ ಚಾಮರಾಜನಗರ ತಾಲೂಕಿನ ಹೆಗ್ಗವಾಡಿಪುರ ದೇಶವಳ್ಳಿ ಮಹೇಶ್‌ಕುಮಾರ್, ರಾಜು, ಶ್ರೀಕಂಠಶರ್ಮಾ ಕುಟುಂಬವರ್ಗದ ವತಿಯಿಂದ ಪ್ರತಿವರ್ಷದಂತೆ ಈ ಬಾರಿಯು ಅರವಟ್ಟಿಗೆ ನಡೆಯಿತು. ದಾಸೋಹದಲ್ಲಿ ಸಹಸ್ರಾರು ಜನರು ಭಾಗವಹಿಸಿ ಕಡ್ಲೆ ಕಾಳುಹುಳಿ, ಪಾಯಸ ಸವಿದರು.
ಮುತ್ತೈದೆಯರಿಗೆ ಬಾಗಿನ ಅರ್ಪಣೆ : ಹೆಗ್ಗವಾಡಿಪುರ ದೇಶವಳ್ಳಿ ಮಹೇಶ್‌ಕುಮಾರ್, ರಾಜು, ಶ್ರೀಕಂಠಶರ್ಮಾ ಕುಟುಂಬವರ್ಗ
ನೂರಾರು ಮುತ್ತೈದೆಯರಿಗೆ ಬಾಗಿನ ಅರ್ಪಿಸಿ ನಮಿಸಿದರು.
ಹೆಗ್ಗವಾಡಿಪುರ ಮಹೇಶ್‌ಕುಮಾರ್ ಮಾತನಾಡಿ, ಮೂಡುಕುತೊರೆಯಲ್ಲಿ ವಿಶ್ವಮಾತೆ ಭ್ರಮರಾಂಭಿಕದೇವಿ ಸಮೇತ ವಿಶ್ವದಾತ ಮಲ್ಲಿಕಾರ್ಜುನಸ್ವಾಮಿ ಬೆಟ್ಟವು ಯಾತ್ರಸ್ಥಳವಾಗಿದ್ದು, ಭಕ್ತರ ಇಷ್ಟಾರ್ಥ ಈಡೇರಿಸುವ ಆರಾಧ್ಯದೈವವಾಗಿರುವ ಭ್ರಮರಾಂಭ ಮಲ್ಲಿಕಾರ್ಜುನಸ್ವಾಮಿ ಬೆಟ್ಟವಾಗಿದೆ. ಇಲ್ಲಿ ನಮ್ಮ ಪೂರ್ವಜರು ಎರಡು ಶತಮಾನಗಳಿಂದಲ್ಲೂ ಇಲ್ಲಿ ಬಂದು ಅರವಟ್ಟಿಗೆ ಮಾಡಿಕೊಂಡು ಬಂದಿದ್ದಾರೆ. ತಾವು ಹೊಲದಲ್ಲಿ ಬೆಳೆದ ಪದಾರ್ಥಗಳನ್ನು ಶೇಖರಣೆ ಮಾಡಿ ತಂದು ದಾಸೋಹ ಮಾಡಿ ಜನರಿಗೆ ಬಡಿಸುವುದು ಮಾಡಿಕೊಂಡು ಬಂದಿದ್ದು ಅ ಪದ್ಧತಿಯನ್ನು ನಾವು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ ಎಂದರು. ಸರ್ಕಾರ ಅರವಟ್ಟಿಗೆ ಬೀದಿಗೆ ಮೂಲಭೂತ ಸೌಕರ್ಯ ಒದಗಿಸಬೇಕು ಎಂದು ಒತಾಯಿಸಿದರು.
ಈ ಸಂದರ್ಭದಲ್ಲಿ ಶೈಲಜಾ ಶ್ರೀಕಂಠಶರ್ಮಾ, ರಾಜೇಶ್ವರಿ ವೃಷಬೇಂದ್ರಸ್ವಾಮಿ ನಾಗರತ್ನಮ್ಮ, ಬಾಲಮಣಿ, ಲೀಲಾವತಿಶ್ರೀಕಂಠಸ್ವಾಮಿ, ಎಚ್.ಸಿ.ಸುಧಾ, ಮಂಜುಳ ಶ್ರೀಧರ್, ಜ್ಞಾನಾಂಭ, ಉಷಾಮಹೇಶ್ವರಿ, ಉಮಾಸತೀಶ್, ರಮ್ಯಶ್ರೀಕಾಂತ್, ಮೌನಶ್ರೀ ಅಜಯ್, ಹೆಚ್.ಎಂ ಓಂಕಾರ್, ಎಸ್.ಭಾಗ್ಯ, ಎಸ್ .ಶೀಲಾ ಕುಟುಂಬ ವರ್ಗ. ಇತರರು.