
ಚಾಮರಾಜನಗರ: ಮಕ್ಕಳ ಕಲಿಕಾ ಪ್ರಕ್ರಿಯೆ ಮೊದಲು ಮನೆಯಿಂದಲೇ ಆರಂಭವಾಗುವುದರಿಂದ ಮನೆಯೆ ಮೊದಲ ಪಾಠಶಾಲೆಯಾಗಿದ್ದು, ಪೋಷಕರು ಮೊದಲ ಗುರುಗಳಾಗಿದ್ದಾರೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಅವರು ತಿಳಿಸಿದರು.
ತಾಲ್ಲೂಕಿನ ಚಂದಕವಾಡಿಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿಂದು ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ಹಾಗೂ ಚಂದಕವಾಡಿ ಕರ್ನಾಟಕ ಪಬ್ಲಿಕ್ ಶಾಲೆ ಸಂಯುಕ್ತಾಶ್ರಯದಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಪೆÇೀಷಕ - ಶಿಕ್ಷಕರ ಮಹಾಸಭೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳು ಹುಟ್ಟಿನಿಂದಲೇ ಕಲಿಕೆಯನ್ನು ಆರಂಭಿಸುತ್ತಾರೆ. ಆದರೆ ಶಾಲಾ ಹಂತದಲ್ಲಿ ಸರಿ ತಪ್ಪುಗಳನ್ನು ಶಿಕ್ಷಕರು ತಿದ್ದಲಿದ್ದಾರೆ. ಮಕ್ಕಳ ಕಲಿಕೆಯ ಬೆಳವಣಿಗೆಯ ಅರಿವು ಪೋಷಕರಿಗೆ ಇರಬೇಕು. ಮಕ್ಕಳ ಆದ್ಯತೆಯ ಬಗ್ಗೆ ಪೆÇೀಷಕರು ನಿಗಾ ವಹಿಸಬೇಕು. ಮಕ್ಕಳ ಭವಿಷ್ಯದ ಕನಸುಗಳಿಗೆ ಪೂರಕವಾದ ವಾತಾವರಣ ನಿರ್ಮಿಸಿಕೊಡಲು ಪೋಷಕರು ಮುಂದಾಗಬೇಕು. ಮಕ್ಕಳು ಭವಿಷ್ಯದ ಪ್ರಜೆಗಳಾಗಿದ್ದು, ಸೃಜನಶೀಲ ವಿದ್ಯಾಭ್ಯಾಸದಿಂದ ಉನ್ನತ ಹುದ್ದೆ ಅಲಂಕರಿಸಲು ಗುಣಮಟ್ಟದ ಶಿಕ್ಷಣದ ಮೂಲಕ ಓದು ಬರಹ ಕಲಿಯಬೇಕು ಎಂದು ತಿಳಿಸಿದರು.
ಪೆÇೀಷಕ ಮತ್ತು ಶಿಕ್ಷಕರ ಸಭೆಯಲ್ಲಿ ಪ್ರತಿಯೊಬ್ಬ ಪೆÇೀಷಕರು ಭಾಗವಹಿಸಿ ಮಕ್ಕಳ ಕಲಿಕಾ ಸಾಮಥ್ರ್ಯದ ಬಗ್ಗೆ ತಿಳಿದುಕೊಳ್ಳಬೇಕು. ಆಗಮಾತ್ರ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯಲ್ಲಿನ ಸಮಸ್ಯೆಗಳು ಪೋಷಕರಿಗೆ ತಿಳಿಯಲಿದೆ. ಪೆÇೀಷಕರು ಮಕ್ಕಳು ಶಾಲೆಗೆ ಹೋಗುತ್ತಾರೆಂದು ಅಂದುಕೊಂಡಿರುತ್ತಾರೆ ಆದರೆ ಕೆಲ ವಿದ್ಯಾರ್ಥಿಗಳು ಶಾಲೆ ತೊರೆದು ದುಶ್ಚಟಗಳಿಗೆ ದಾಸರಾಗುವುದುಂಟು. ಇದನ್ನು ಪರಿಣಮಕಾರಿಯಾಗಿ ತಡೆಯಲು ಪೋಷಕರು ಸಭೆಯಲ್ಲಿ ಪಾಲ್ಗೊಳ್ಳುವ ಅವಶ್ಯವಿದೆ. ಜಿಲ್ಲೆಗೆ ಉತ್ತಮವಾದ ಶಿಕ್ಷಕ, ವೈದ್ಯ ಹಾಗೂ ಉನ್ನತ ಅಧಿಕಾರಿಗಳ ಅವಶ್ಯಕತೆ ಇದ್ದು, ವಿದ್ಯಾರ್ಥಿಗಳು ಉನ್ನತ ಹುದ್ದೆಗಳನ್ನು ಅಲಂಕರಿಸಿ ಜಿಲ್ಲೆಗೆ ಕೀರ್ತಿ ತರಬೇಕು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಎಂದು ಹೇಳಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಚಂದ್ರಪಾಟೀಲ್ ಅವರು ದೇಶದ ಮೊದಲ ಪ್ರಧಾನಮಂತ್ರಿ ನೆಹರು ಹುಟ್ಟುಹಬ್ಬದ ಅಂಗವಾಗಿ ರಾಷ್ಟ್ರಾದ್ಯಂತ ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಈ ಪ್ರಯುಕ್ತ ರಾಜ್ಯಸರ್ಕಾರವು ಪ್ರತಿ ಶಾಲೆಯಲ್ಲಿ ಶಿಕ್ಷಕ-ಪೆÇೀಷಕ ಮಹಾಸಭೆಯನ್ನು ನಡೆಸುವುದರ ಮೂಲಕ ಮಕ್ಕಳ ಓದಿನ ಗುಣಮಟ್ಟದ ಬಗ್ಗೆ ತಿಳಿದುಕೊಳ್ಳಲು ಪೆÇೀಷಕ ಶಿಕ್ಷಕರ ಮಹಾ ಸಮ್ಮೇಳನ ಸಭೆಯನ್ನು ನಡೆಸುತ್ತಿದೆ. ಮಕ್ಕಳ ಬೆಳವಣಿಗೆಗೆ ಶಾಲೆ ಮತ್ತು ಪೆÇೀಷಕರ ಜವಾಬ್ದಾರಿ ಪ್ರಮುಖವಾಗಿದೆ ಎಂದು ತಿಳಿಸಿದರು.
ಆಧುನಿಕ ಜಗತ್ತು ಸ್ಪರ್ಧಾತ್ಮಕದಿಂದ ಕೂಡಿದ್ದು, ಮಕ್ಕಳಿಗೆ ಕೌಶಲ್ಯ ತರಬೇತಿಗಳು ಶಾಲಾ ಹಂತದಿಂದಲೇ ಆರಂಭವಾಗಬೇಕು. ಆರನೇ ತರಗತಿಯಿಂದ ಕೌಶಲ್ಯಕ್ಕೆ ತಕ್ಕಂತೆ ಗುಣಮಟ್ಟದ ಪಾಠ ಪ್ರವಚನಗಳನ್ನು ಮುಂದಿನ ವರ್ಷದಿಂದ ಪ್ರಾರಂಬಿಸಲಾಗುವುದು. 9ನೇ ತರಗತಿಯಿಂದ ಮಾದರಿ ವಿಜ್ಞಾನ ಅಳವಡಿಸಲಾಗುವುದು. ಸ್ವಂತಜೀವನ ನಡೆಸಲು ಬೇಕಾದ ಕೌಶಲ್ಯಗಳನ್ನು ಸರ್ಕಾರಿ ಶಾಲೆಗಳಲ್ಲಿ ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ಕಲಿಸಲಾಗುವುದು. ತಿಂಗಳಲ್ಲಿ ಕನಿಷ್ಠ ಒಂದು ದಿನವಾದರೂ ಮಕ್ಕಳ ಕಲಿಕಾ ಶಕ್ತಿಯ ಬಗ್ಗೆ ತಿಳಿದುಕೊಳ್ಳಲು ಪೋಷಕರು ಶಾಲೆಗೆ ಬರಬೇಕು ಎಂದು ಚಂದ್ರಪಾಟೀಲ್ ಅವರು ಹೇಳಿದರು.
ಪೆÇೀಷಕರ ಪರವಾಗಿ ಶಾಲಾ ಎಸ್.ಡಿ.ಎಂ.ಸಿ ಸದಸ್ಯರಾದ ವಿಜಯಕುಮಾರಿ ಅವರು ಮಾತನಾಡಿದರು. ಇದೇ ವೇಳೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ಸಂಜನಾ ಮತ್ತು ಸ್ನೇಹ ಇವರಿಗೆ ನಗದು ಬಹುಮಾನ ವಿತರಿಸಲಾಯಿತು. ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ನೆನಪಿನ ಕಾಣಿಕೆ ನೀಡಲಾಯಿತು.
ಡಯಟ್ ಪ್ರಾಂಶುಪಾಲರಾದ ಕಾಶೀನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಶೆಟ್ಟಿ, ಬಿಸಿಯೂಟ ಯೋಜನೆ ಶಿಕ್ಷಣಾಧಿಕಾರಿ ರೇವಣ್ಣ, ಶಾಲೆಯ ಪ್ರಾಂಶುಪಾಲರಾದ ಸ್ವಾಮಿ, ಉಪಪ್ರಾಂಶುಪಾಲರಾದ ಚಂದ್ರಶೇಖರ್. ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.