ಅಂತರಾಷ್ಟ್ರೀಯ ಅಥ್ಲೆಟಿಕ್ಸ್‌ನಲ್ಲಿ ಬೆಳ್ಳಿಪದಕ ಗೆದ್ದ ಹೊಮ್ಮದ ಹೆಚ್.ಎಲ್.ಚಂದ್ರಶೇಖರ್‌ಗೆ ಸನ್ಮಾನ

ಚಾಮರಾಜನಗರ: ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್‌ನಲ್ಲಿ ಬೆಳ್ಳಿಪದಕ ಗೆದ್ದು ಬಂದ ತಾಲೂಕಿನ ಹೊಮ್ಮ ಗ್ರಾಮದ ಸಂತೇಮರಹಳ್ಳಿ ರೇಷ್ಮೆ ಇಲಾಖೆ ಸಿಲ್ಕ್ ಫಿಲೇಚರ್ ಅಧಿಕ್ಷಕ ಹೆಚ್.ಎಲ್.ಚಂದ್ರಶೇಖರ್ ಅವರನ್ನು ದೊಡ್ಡಮೋಳೆ ಗ್ರಾಮದ ಉಪ್ಪಾರ ಯುವ ಮುಖಂಡ ಹನುರಾಜು ಹಾಗೂ ಗೆಳೆಯರ ಬಳಗದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.
ನಗರದ ಪ್ರವಾಸಿಮಂದಿರದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಚಂದ್ರಶೇಖ‌ರ್ ಅವರಿಗೆ ಶಾಲು ಹೊದಿಸಿ, ಮೈಸೂರುಪೇಟ ತೊಡಿಸಿ, ಫಲತಾಂಬೂಲ ಕೊಟ್ಟು ಸನ್ಮಾನಿಸಲಾಯಿತು.
ಹಿರಿಯ ರಂಗಕರ್ಮಿ ಕೆ.ವೆಂಕಟರಾಜು ಸನ್ಮಾವಿಸಿ ಮಾತನಾಡಿ, ನಮ್ಮ ತಾಲೂಕಿನ ಆಲೂರುಹೊಮ್ಮ ಗ್ರಾಮದ ಹೆಚ್.ಎಲ್.ಚಂದ್ರಶೇಖರ್ ಅವರು ಥೈಲ್ಯಾಂಡಿನಲ್ಲಿ ಇತ್ತೀಚಿಗೆ ನಡೆದ ಅಂತಾರಾಷ್ಟ್ರೀಯ ಮಟ್ಟದ ಮಾಸ್ಟ್ರ್ಸ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ಕ್ರೀಡಾಕೂಟದಲ್ಲಿ ಭಾಗವಹಿಸಿ ಬೆಳ್ಳಿಪದಕ ಗೆದ್ದು ದೇಶ, ರಾಜ್ಯ, ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಅವರಿಗೆ ಸ್ನೇಹಿತರು ಸೇರಿ ಅವರನ್ನು ಸನ್ಮಾನಿಸಿರುವುದು ಒಳ್ಳೆಯ ಕೆಲಸವಾಗಿದೆ. ಅವರು ದೇಶದಿಂದ ಪ್ರತಿನಿಧಿಸಿ ಕ್ರೀಡಾಕ್ಷೇತ್ರದಲ್ಲಿ ಹೆಸರು ಮಾಡಿರುವುದು ಬಹಳ ಅಪರೂಪವಾದದ್ದು. ಜಿಲ್ಲೆಯಲ್ಲಿ ಸಾಂಸ್ಕೃತಿ ಕ್ಷೇತ್ರದಲ್ಲಿ ಸ್ವಲ್ಪ ಮಟ್ಟದಲ್ಲಿ ಹೆಸರು ಮಾಡಿರುವವರು ಇದ್ದಾರೆ. ಸ್ವಾತಂತ್ರ್ಯಪೂರ್ವದಿಂದಲ್ಲೂ ವಾಲಿಬಾಲ್, ಬಾಲ್‌ ಬ್ಯಾಡ್ಮಿಂಟನ್ ಇತ್ತು. ಶಾಲಾ, ಕಾಲೇಜುಗಳಲ್ಲಿ ಅಥ್ಲೆಟಿಕ್ ಇತ್ತು, ಇತ್ತೀಚಿತ ದಿನಗಳಲ್ಲಿ ನಶಿಸಿ ಹೋಗಿವೆ ಇದನ್ನು ಪುನರ್ ಬೆಳೆಸಬೇಕಾಗಿದೆ. ಚಂದ್ರಶೇಖರ್ ಅವರ ಸನ್ಮಾನ ಕ್ರೀಡಾ ಚಟುವಟಿಕೆಗೆ ನಾಂದಿಯಾಗಲಿ, ಗ್ರಾಮೀಣ ಯುವಕರನ್ನು ಅಥ್ಲೆಟಿಕ್ಸ್‌ಗೆ ಕರೆದುತಂದು ಬೆಳೆಸುವಂತಾಗಲಿ ಎಂದರು.
ಚಿನ್ನದ ಪದಕ ಗೆಲ್ಲುವ ಗುರಿ : ಸನ್ಮಾನ ಸ್ವೀಕರಿಸಿದ ಹೆಚ್.ಎಲ್.ಚಂದ್ರಶೇಖರ
ಮಾತನಾಡಿ, ಸ್ನೇಹಿತರು ತಮ್ಮನ್ನು ಗುರುತಿಸಿ ಸನ್ಮಾನಿಸಿರುವುದು ತುಂಬಾ ಖುಷಿತಂದಿದೆ. ಅದಕ್ಕಾಗಿ ಅಬಾರಿಯಾಗಿದ್ದೇನೆ. ಜನಪ್ರತಿನಿಧಿಗಳು, ಮುಖಂಡರು ಅಧಿಕಾರಿಗಳು ಪ್ರೋತ್ಸಾಹ ನೀಡಿದರೆ ಜಿಲ್ಲೆಯ ಯುವಕರು ಹೆಚ್ಚಿನ ಮಟ್ಟದಲ್ಲಿ ಜಿಲ್ಲೆ ಕೀರ್ತಿ ಪತಾಕೆಯನ್ನು ರಾಜ್ಯ, ದೇಶ ಮಟ್ಟದಲ್ಲಿ ಪಸರಿಸಲು ಸಾಧ್ಯವಾಗುತ್ತದೆ. ಮುಂದಿನ ದಿನಗಳಲ್ಲಿ ಚಿನ್ನದ ಪದಕ ಗೆದ್ದು ದೇಶ, ರಾಜ್ಯ ಜಿಲ್ಲೆಗೆ ಕೀರ್ತಿ ತರುವ ಗುರಿಹೊಂದಿದ್ದೇನೆ ಎಂದು ಆಶಯ ಇಂಗಿತ ವ್ಯಕ್ತ ಪಡಿಸಿದರು.
ಚಿನ್ನದಪದಕ ಮುಡಿಗೇರಿಸಿಕೊಳ್ಳಲಿ
: ದೊಡ್ಡಮೋಳೆ ಗ್ರಾಮದ ಉಪ್ಪಾರ ಯುವ ಮುಖಂಡ
ಹನುರಾಜು ಮಾತನಾಡಿ, ಸ್ನೇಹಿತರಾದ ಹೆಚ್.ಎಲ್.ಚಂದ್ರಶೇಖರ್ ಥೈಲ್ಯಾಂಡಿನಲ್ಲಿ ಇತ್ತೀಚೆಗೆ ನಡೆದ ಅಂತಾರಾಷ್ಟ್ರೀಯ ಮಟ್ಟದ ಮಾರ್ನ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ಕ್ರೀಡಾಕೂಟದಲ್ಲಿ ಭಾಗವಹಿಸಿ ಬೆಳ್ಳಿ ಪದಕ ಗೆದ್ದಿರುವುದು ತುಂಬಾ ಹೆಮ್ಮೆ ಆಗುತ್ತಿದೆ ಮುಂದಿನ ದಿನಗಳಲ್ಲಿ ನಡೆಯುವ ಕ್ರೀಡಾಕೂಟದಲ್ಲಿ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡು ದೇಶ, ರಾಜ್ಯ, ಜಿಲ್ಲೆಗೆ ಕೀರ್ತಿ ತರುವಂತಾಗಲಿ ಎಂದು ಆಶಿಸಿದರು.
ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಹೆಚ್. ಮುತ್ತುರಾಜು, ತಾ.ಪಂ.ಮಾಜಿ ಸದಸ್ಯ ಆ‌ರ್.ಮಹದೇವು ಮಾತನಾಡಿ ಶುಭ ಕೋರಿದರು. ಈ ಸಂದರ್ಭದಲ್ಲಿ ಚಿನ್ನಸ್ವಾಮಿ, ಸಿ.ಎಸ್.ನಾಗರಾಜು, ಜೆ.ಬಿ.ಮಹದೇವಶೆಟ್ಟಿ, ಚೆನ್ನಂಜನಾಯಕ, ಕೂಡರು ಬಾಲುರಾಜು, ಮಂಜು, ಚಂದ್ರು, ಸೂರ್ಯ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *