ಚಾಮರಾಜನಗರ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಟಾಪರ್ ಆದ ವಿದ್ಯಾರ್ಥಿನಿ ಮಹಾದೇವಿಯನ್ನು ಸಮಾಜ ಸೇವಕರಾದ ಸುರೇಶ್ ಗೌಡ, ಡಾ.ಪರಮೇಶ್ವರಪ್ಪ ಸಮಾಜ ಸೇವಕರು ಹಾಗೂ ಸಂಜೀವಿನಿ ಟ್ರಸ್ಟ್ ನ ವತಿಯಿಂದ ಆರ್.ಸತೀಶ್ ಕುಮಾರ್ ಅವರು ಸನ್ಮಾನಿಸಿ ಗೌರವಿಸಿದರು.
ಸಮಾಜ ಸೇವಕ ಸುರೇಶ್ ಗೌಡ ಮಾತನಾಡಿ, ಗುಂಡ್ಲುಪೇಟೆ ತಾಲೂಕಿನ ಬೇಗೂರು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ನಿಟ್ರೆ ಗ್ರಾಮದ ಮಹಾದೇವಿ ಎಂಬ ವಿದ್ಯಾರ್ಥಿನಿ 600 ಕ್ಕೆ 591 ಅಂಕವನ್ನು ಪಡೆದು ಜಿಲ್ಲೆಗೆ ಟಾಪರ್ ಆಗಿರುವುದು ಹೆಮ್ಮೆಯ ವಿಷಯ ಎಂದರು.
ಮಹಾದೇವಿ ವಿದ್ಯಾರ್ಥಿನಿಯ ತಂದೆ ಕೂಲಿ ಕಾರ್ಮಿಕನಾಗಿದ್ದು, ಅತ್ಯಂತ ಕಡು ಬಡತನದಲ್ಲಿ ಕಷ್ಟಪಟ್ಟು ಓದುವ ಮೂಲಕ ಜಿಲ್ಲೆಗೆ ಟಾಪರ್ ಆಗಿ ಹೊರ ಹೊಮ್ಮಿರುವ ಈಕೆಯ ಮುಂದಿನ ಭವಿಷ್ಯ ಉಜ್ವಲವಾಗಲೆಂದು ಹಾರೈಸಿದರು.
ಮಹಾದೇವಿಯ ಶಿಕ್ಷಕಿಯಾಗುವ ಕನಸ್ಸನು ಕಂಡಿದ್ದು, ಅದಕ್ಕಾಗಿ ಮುಂದಿನ ದಿನಗಳಲ್ಲಿ ತಮ್ಮ ಕೈಲಾದಷ್ಟು ಸಹಾಯ ಮಾಡುವುದಾಗಿ ತಿಳಿಸಿದರು.