ಕರ್ನಾಟಕ ರಾಜ್ಯ ಭೀಮಸೇನೆ ಸಮಿತಿಯಿಂದ ಡಿಸಿಗೆ ಸನ್ಮಾನ

ಚಾಮರಾಜನಗರ:  ನೂತನ ಜಿಲ್ಲಾಧಿಕಾರಿ ಶ್ರೀರೂಪ ಅವರನ್ನು ಕರ್ನಾಟಕ ರಾಜ್ಯ ಭೀಮಸೇನೆ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
ನಗರದ ಜಿಲ್ಲಾಡಳಿತ ಭವನದಲ್ಲಿ ಸಮಿತಿ ರಾಜ್ಯಾಧ್ಯಕ್ಷ ಸರ್ವೇಶ್  ಅವರ ನೇತೃತ್ವದಲ್ಲಿ  ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಶಾಲು ಹೊದಿಸಿ, ಹಾರಹಾಕಿ ಮಕರ ಸಂಕ್ರಾಂತಿ ಹಬ್ಬದ ಶುಭಾಶಯ ಕೋರಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಮಹೇಶ್,  ಚಾಮರಾಜನಗರ ಜಿಲ್ಲಾ ಗೌರವ ಅಧ್ಯಕ್ಷ ದೊರೆಸ್ವಾಮಿ, ಅಧ್ಯಕ್ಷ ಸತೀಶ್ ಹೆಗ್ಗೋಠಾರ,  ಉಪಾಧ್ಯಕ್ಷ ಮಹದೇವಮೂರ್ತಿ ಸೋಮಹಳ್ಳಿ, ತಾಲೂಕು ಅಧ್ಯಕ್ಷ ಗುರುಸ್ವಾಮಿ ಕೆರೆಹಳ್ಳಿ, ಉಪಾಧ್ಯಕ್ಷ ಮೂಡ್ನಾಕೂಡು ರಘು, ಗುಂಡ್ಲುಪೇಟೆ ತಾಲೂಕು ಅಧ್ಯಕ್ಷ ಶಿವಕುಮಾರ್ ಕೊಡಸೋಗೆ, ಪಿರಿಯಾಪಟ್ಟಣ ತಾಲೂಕು ಅಧ್ಯಕ್ಷ ರಾಜಣ್ಣ, ಮೈಸೂರು ಜಿಲ್ಲಾ ಉಪಾಧ್ಯಕ್ಷ ರಾಜಣ್ಣ , ಮಹೇಶ್ ಹಾಜರಿದ್ದರು.

Leave a Reply

Your email address will not be published. Required fields are marked *