ನಾಯಿ ಕಡಿತ : ಮುಂಜಾಗ್ರತಾ ಕ್ರಮಗಳ ಪಾಲನೆಗೆ ಆರೋಗ್ಯ ಇಲಾಖೆ ಸಲಹೆ

ಚಾಮರಾಜನಗರ: ನಾಯಿ ಕಡಿದಾಗ ಸಾರ್ವಜನಿಕರು ಉದಾಸೀನ ಮಾಡದೇ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು ಎಂದು ಆರೋಗ್ಯ ಇಲಾಖೆ ಸಲಹೆ ಮಾಡಿದೆ. 

ಮನುಷ್ಯರಿಗೆ ನಾಯಿ ಕಚ್ಚುವುದರಿಂದ ರೇಬೀಸ್ ಎಂಬ ಮಾರಣಾಂತಿಕ ಕಾಯಿಲೆಯು ಬರುವ ಸಂಭವವಿರುವುದರಿಂದ ಸಾರ್ವಜನಿಕರು ಮುಂಜಾಗ್ರತಾ ಕ್ರಮಗಳನ್ನು ತಪ್ಪದೇ ಪಾಲಿಸಬೇಕು. 

ನಾಯಿ ಕಡಿತವನ್ನು 3 ವರ್ಗಗಳನ್ನಾಗಿ ವಿಂಗಡಿಸಬಹುದು. ನಾಯಿಯ ಎಂಜಿಲನ್ನು ಮುಟ್ಟುವುದು ಅಥವಾ ನಾಯಿಯ ಎಂಜಿಲನ್ನು ಮುಟ್ಟಿ ಆಹಾರ ತಿನ್ನಿಸುವುದು, ಮನುಷ್ಯರ ತರಚು ಗಾಯದ ಮೇಲೆ ನಾಯಿಯು ನೆಕ್ಕುವುದರಿಂದ ಹಾಗೂ ಒಂದು ಅಥವಾ ಹಲವಾರು ಕಡೆ ನಾಯಿಯು ಆಳವಾಗಿ ಮನುಷ್ಯರನ್ನು ಕಚ್ಚುವುದು, ಆಳವಾದ ಗಾಯದ ಮೇಲೆ ನಾಯಿಯು ನೆಕ್ಕುವುದು ಹಾಗೂ ಮನುಷ್ಯರ ಎಂಜಲಿನೊಂದಿಗೆ ನಾಯಿಯ ಜೊಲ್ಲು ರಸವು ಮಿಶ್ರವಾಗುವುದು. ಈ ಮೂರು ವರ್ಗಗಳ ನಾಯಿ ಕಡಿಯುವಿಕೆಯಿಂದ ಸಾರ್ವಜನಿಕರು ಮುಂಜಾಗ್ರತ ಕ್ರಮ ಅನುಸರಿಸಬೇಕು.

ನಾಯಿ ಕಚ್ಚಿದ ಜಾಗವನ್ನು ಹರಿಯುವ ಅಥವಾ ರಭಸವಾದ ನೀರಿನಿಂದ ಸಾಬೂನಿನೊಂದಿಗೆ ಚೆನ್ನಾಗಿ ತೊಳೆಯಬೇಕು. ನಾಯಿ ಕಚ್ಚಿದ ಜಾಗವನ್ನು ಯಾವುದೇ ತರಹದ ಪದಾರ್ಥಗಳಿಂದ ಮುಚ್ಚಬಾರದು ಅಥವಾ ಬಟ್ಟೆಗಳಿಂದ ಕಟ್ಟಬಾರದು. ನಾಯಿ ಕಚ್ಚಿದ ತಕ್ಷಣ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ಆಥವಾ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರ ಸಲಹೆಯಂತೆ ಸಂಪೂರ್ಣ ಚಿಕಿತ್ಸೆ ಪಡೆಯಬೇಕು. ಸಾಕು ನಾಯಿಗಳಿಗೆ ರೇಬೀಸ್ ಕಾಯಿಲೆ ಬರದಂತೆ ಲಸಿಕೆ ಹಾಕಿಸಬೇಕು. ಚಿಕ್ಕ ಮಕ್ಕಳನ್ನು ನಾಯಿಯ ಹತ್ತಿರ ಆಟವಾಡಲು ಒಂಟಿಯಾಗಿ ಬಿಡದೆ ಮುಂಜಾಗ್ರತೆ ಕ್ರಮ ವಹಿಸಬೇಕು ಎಂದು ಜಿಲ್ಲಾ ಸರ್ವೇಕ್ಷಣ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *