- ತೆರಿಗೆದಾರ, ತೆರಿಗೆಸಲಹೆಗೆಗಾರರೊಂದಿಗೆ ಸಂವಾದ
ಚಾಮರಾಜನಗರ : ತೆರಿಗೆದಾರರು, ತೆರಿಗೆ ಸಲಹೆಗಾರರು ಯಾವುದೇ ಹಿಂಜರಿಕೆ
ಇಲ್ಲದೆ ನಿಮ್ಮ ತೊಂದರೆ, ಸಂದೇಶಗಳು, ಸಲಹೆ, ಸೂಚನೆಗಳನ್ನು ತಮ್ಮ ಗಮನಕ್ಕೆ ತಂದರೆ ಮೇಲಾಧಿಕಾರಿಗಳು, ಕೇಂದ್ರ ಸರ್ಕಾರದ ಗಮನಕ್ಕೆ ತಂದು ಪರಿಹರಿಸಲು ಪ್ರಯತ್ನ ಮಾಡಲಾಗುವುದು ಎಂದು ಕೇಂದ್ರೀಯ ತೆರಿಗೆ ಸಹಾಯಕ ಆಯುಕ್ತ
ಟಿ.ಜಿ.ಸುರೇಶ್ ಹೇಳಿದರು.
ನಗರದ ಭುಜಂಗೇಶ್ವರ ಬಡಾವಣೆಯಲ್ಲಿರುವ ಕೇಂದ್ರೀಯ ತೆರಿಗೆ ಅಧೀಕ್ಷಕರ ಕಾರ್ಯಾಲಯದಲ್ಲಿ ತರಿಗೆ ಇಲಾಖೆ ವತಿಯಿಂದ ತೆರಿಗೆದಾರರು, ತೆರಿಗೆ ಸಲಹೆಗಾರಿಗೆ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಜಿಎಸ್‌ಟಿ ಅರಂಭವಾಗುವ ಸಂದರ್ಭದಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವು. ಹೊಸ ತೆರಿಗೆ ಪದ್ಧತಿ ಆಗಿದ್ದರಿಂದ ಅದರ ಬಗ್ಗೆ ತಿಳಿಸಿಕೊಡಲು ಎಲ್ಲ ಕಡೆ ಸಾಕಷ್ಟು ಅರಿವು ಕಾರ್ಯಕ್ರಮಗಳನ್ನು ಮಾಡಿದ್ದೇವು. ಜಿಎಸ್‌ಟಿ ಬಂದು 9 ವರ್ಷಗಳು ಕಳೆದಿದೆ. ಆದರೂ ಇನ್ನೂ ಸಾಕಷ್ಟು ಅರಿವು ಅಗತ್ಯವಾಗಿದೆ ಎಂದರು.
ತೆರಿಗೆ ಪದ್ಧತಿ ಅನುಷ್ಟಾನದಲ್ಲಿ ಸಾಕಷ್ಟು ತೊಂದರೆಗಳನ್ನು ಅನುಭವಿಸಿದ್ದೀರಿ. ಸಿಸ್ಟಂ ಸಮಸ್ಯೆಗಳು ಸಾಕಷ್ಟು ಇದ್ದಾವೆ. ಅದಕ್ಕೆ ಕೇಂದ್ರ ಸರ್ಕಾರದವರು ಏನು ಮಾಡಿದರೆ ಅಂದರೆ ಪ್ರತಿ ಎರಡು, ಮೂರು, ಆರು ತಿಂಗಳೊಮ್ಮೆ ತೆರಿಗೆದಾರರೊಡನೆ ಸಂವಾದ ಕಾರ್ಯಕ್ರಮಗಳನ್ನು ಏರ್ಪಡಿಸಿ ತೆರಿಗೆ ಪದ್ಧತಿ, ಅನುಷ್ಠಾನದಲ್ಲಿ ಕುಂದು-ಕೊರತೆಗಳು ಇರಬಹುದು ಅದರ ಬಗ್ಗೆ ಅವರಿಂದ ಸಲಹೆ, ಸೂಚನೆಗಳನ್ನು ಪಡೆದು ಸಂದೇಹಗಳನ್ನು ಪರಿಹರಿಸಲು ಸಂವಾದ ಕಾರ್ಯಕ್ರಮಗಳನ್ನು ಅಯೋಜಿಸುವಂತೆ ಆದೇಶಿಸಿದರು. ಅದರಂತೆ ಸಂವಾದಗಳನ್ನು ನಡೆಸಿಕೊಂಡು ಬರಲಾಗುತ್ತಿದ್ದು,
ಮೈಸೂರಿನಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನು ಮಾಡಲಾಗಿದೆ. ಆದರೆ ಚಾಮರಾಜನಗರದಲ್ಲಿ ಸೇರಿರುವ ತೆರಿಗೆದಾರರು, ಆಡಿಟರ್ ನೋಡಿ ತುಂಬಾ ಖಷಿಯಾಗಿದೆ. ಇಂತಹ ಸ್ಪಂದನೆ ಮೈಸೂರಿನಲ್ಲಿ ಸಿಗಲಿಲ್ಲ. ಅದಕ್ಕಾಗಿ. ನಿಮಗೆಲ್ಲರಿಗೂ ಅಭಿನಂದನೆ ತಿಳಿಸುತ್ತೇವೆ. ನೀವು ಸಲಹೆ ಸೂಚನೆಗಳು ಸಂದೇಶ ಕೊಟ್ಟರೆ ಮೇಲಾಧಿಕಾರಿಗಳ ಗಮನಕ್ಕೆ ತಂದು ಪರಿಹರಿಸಲು ಪ್ರಯತ್ನ. ಮಾಡುತ್ತೇನೆ ಎಂದರು.
ಸಹಾಯಕ ಆಯುಕ್ತರಾದ ರಮೇಶ್‌ಕಂಚಿಬೈಲ್, ರಘುರಾಜು, ಶಿವಶಂಕರ್, ಮಾತನಾಡಿದರು. ಸಂವಾಧದಲ್ಲಿ ತೆರಿಗೆ ಸಲಹೆಗಾರರು ಸಲಹೆ, ಸೂಚನೆಗಳನ್ನು ನೀಡಿದರು. ಸಂವಾದದಲ್ಲಿ ತೆರಿಗೆ ಇಲಾಖೆಯ ಅಧೀಕ್ಷಕರಾದ ಪ್ರಸನ್ನಕುಮಾರ್, ಎಸ್.ವಿ.ಕೃಷ್ಣನ್ , ವೆಂಕಟಕೃಷ್ಣ , ಇನ್ಸ್ ಪೆಕ್ಟರ್ ಜಗದೀಶ್, ತೆರಿಗೆದಾರರು, ತೆರಿಗೆ ಸಲಹೆಗಾರರು ಭಾಗವಹಿಸಿದ್ದರು. ಆಡಿಟರ್ ವೆಂಕಟೇಶ್ ಪ್ರಾರ್ಥಿಸಿದರು.