ವೇದಾಂತ ಡ್ರಿಪ್ ನಿಂದ ರೈತರಿಗೆ ಹನಿ ನೀರಾವರಿ ಅಳವಡಿಗೆ ಕುರಿತು ಕಾರ್ಯಗಾರ
ಚಾಮರಾಜನಗರ: ರೈತರು ಕಡಿಮೆ ನೀರು ಬಳಕೆ ಮಾಡಿ, ಬೇಸಾಯ ಮಾಡುವ ನೂತನ ಪದ್ದತಿಯಾದ ಹನಿ ನೀರಾವರಿ ತಂತ್ರಜ್ಞಾನದಿಂದ ಹೆಚ್ಚಿನ ಇಳುವರಿಯನ್ನು ಪಡೆದು ಆರ್ಥಿಕ ಅಭಿವೃದ್ದಿ ಹೊಂದಲು ಸಾಧ್ಯವಿದೆ ಎಂದು ತೋಟಗಾರಿಕೆಯ ಇಲಾಖೆಯ ಉಪ ನಿರ್ದೇಶಕ ಶಿವಪ್ರಕಾಶ್ ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದಲ್ಲಿ ಮುಂಭಾಗ ನಡೆದ ಫಲಪುಷ್ಪ ಪ್ರದರ್ಶನ ಕಾರ್ಯಕ್ರಮದಲ್ಲಿ ವೇದಾಂತ ಡ್ರೀಪ್ ವತಿಯಿಂದ ನಡೆದ ರೈತರಿಗೆ ಹನಿ ನೀರಾವರಿ ಪದ್ದತಿ ಅಳವಡಿಕೆ ಹಾಗೂ ತಾಂತ್ರಿಕ ಸಲಹೆ ಮತ್ತು ನಿರ್ವಹಣಾ ಕುರಿತು ಕಾರ್ಯಕ್ರಮದಲ್ಲಿ ರೈತರಿಗೆ ಕೈಪಿಡಿ ಹಾಗೂ ಪ್ರಮಾಣ ಪತ್ರವನ್ನು ವಿತರಿಸಿ ಅವರು ಮಾತನಾಡಿದರು.
ರೈತರು ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಪ್ರಮುಖವಾಗಿ ಹನಿ ನೀರಾವರಿ ಪದ್ದತಿಯನ್ನು ಅಳವಡಿಸಿಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ಹನಿ ನೀರಾವರಿಯಲ್ಲಿ ವೇದಾಂತ ಡ್ರಿಪ್ ಕಂಪನಿಯವರು ಬಹಳ ಉತ್ಕøಷ್ಟವಾದ ವಿನೂತನ ಶೈಲಿಯಲ್ಲಿ ಉಪಕರಣಗಳನ್ನು ತಯಾರು ಮಾಡಿದ್ದಾರೆ. ಜೊತೆಗೆ ರೈತರಿಗೆ ನೂತನ ತಂತ್ರಜ್ಞಾನ ದ ಪರಿಚಯ, ರೈತರ ತಾಕುಗಳಲ್ಲಿ ಹನಿ ನೀರಾವರಿ ಅಳವಡಿಕೆ ಬಗ್ಗೆ ಮಾಹಿತಿ ಮತ್ತು ಸಮರ್ಪಕ ನಿರ್ವಹಣೆಯನ್ನು ಸಹ ತಿಳಿಸಿಕೊಡಲಿದ್ದಾರೆ. ಹೀಗಾಗಿ ರೈತರು ನೀರು ಲಭ್ಯತೆಯನ್ನು ಅನುಸರಿಸಿ, ಹನಿ ನೀರಾವರಿ ಅಳವಡಿಸಿಕೊಂಡು ವ್ಯವಸಾಯ ಮಾಡಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಇಲಾಖೆಯ ವ್ಯವಸ್ಥಾಪಕ ಯೋಗೇಶ್, ವೇದಾಂತ ಡ್ರಿಪ್‍ನ ಅಧಿಕೃತ ಮಾರಾಟಗಾರರಾದ ಬೇಡರಪುರ ಮಹೇಶ್, ರೈತರಾದ ಡಿ, ಪುಟ್ಟಯ್ಯ, ದುಂಡಯ್ಯ, ಪ್ರಸಾದ್, ಎಲ್. ಸುರೇಶ್ ಮೊದಲಾದವರು ಇದ್ದರು.