ಹೆಜ್ಜಾಲ ರೈಲ್ವೆ ಮಾರ್ಗವನ್ನ ಕಲ್ಪಿಸಿಕೊಡಿ: ಲೋಕಸಭಾ ಸದಸ್ಯ ಸುನೀಲ್ ಬೋಸ್

ಜಿಲ್ಲೆಯಲ್ಲಿ ಸ್ಥಗಿತಗೊಂಡಿರುವ ರೈಲ್ವೆ ಯೋಜನೆಗಳಿಗೆ ಚಾಲನೆ ನೀಡಲು ಲೋಕಸಭೆಯಲ್ಲಿ ಗಮನ ಸೆಳೆದ ಸುನೀಲ್ ಬೋಸ್

ಚಾಮರಾಜನಗರ: ಚಾಮರಾಜನಗರ ಜಿಲ್ಲೆಯಲ್ಲಿ ಸ್ಥಗಿತಗೊಂಡಿರುವ ರೈಲ್ವೆ ಯೋಜನೆಗಳಿಗೆ ಚಾಲನೆ ನೀಡಿ ಚಾಮರಾಜನಗರ ಲೋಕಸಭಾ ಕ್ಷೇತ್ರದ ರೈಲ್ವೆ ವ್ಯವಸ್ಥೆಯನ್ನು ಬಲಪಡಿಸುವ ಮೂಲಕ ಜನಸಾಮಾನ್ಯರಿಗೆ ನ್ಯಾಯ ಒದಗಿಸಬೇಕು ಎಂದು ಚಾಮರಾಜನಗರ ಲೋಕಸಭಾ ಕ್ಷೇತ್ರದ ಸದಸ್ಯರಾದ ಸುನೀಲ್ ಬೋಸ್ ಅವರು ಲೋಕಸಭೆಯಲ್ಲಿ ಗಮನ ಸೆಳೆದಿದ್ದಾರೆ.

ಚಾಮರಾಜನಗರ ಜಿಲ್ಲೆಯಲ್ಲಿ ದಿನನಿತ್ಯ ನೂರಾರು ಕಾರ್ಮಿಕರು ನಗರದಿಂದ ಬೆಂಗಳೂರಿಗೆ ಕೆಲಸಕ್ಕೆ ಹೋಗುತ್ತಾರೆ.ನಗರದಿಂದ ಮೈಸೂರು, ಮೈಸೂರಿಂದ ಬೆಂಗಳೂರಿಗೆ ಪ್ರಯಾಣ ಮಾಡುತ್ತಿದ್ದಾರೆ.ಅವರ ಬಹುದಿನಗಳ ಬೇಡಿಕೆ ಹೆಜ್ಜಾಲ ರೈಲ್ವೆ ಮಾರ್ಗವನ್ನ ಕಲ್ಪಿಸಿಕೊಡಬೇಕು.ಇದು ದಶಕಗಳ ಬೇಡಿಕೆ ಅಂದರೂ ತಪ್ಪಾಗಲ್ಲ. ಹೆಜ್ಜಾಲದಿಂದ ನಗರಕ್ಕೆ ಸುಮಾರು 140 ಕಿಲೋಮೀಟರ್ ರಷ್ಟು ಇದೆ.ಆದರೆ ನಮ್ಮಲ್ಲಿ ರೈಲ್ವೆ ಮಾರ್ಗಗಳು ಕಡಿಮೆಇದೆ.
ನನ್ನ ಕ್ಷೇತ್ರ ಸುಮಾರು ಶೇ.51 ಅರಣ್ಯ ವ್ಯಾಪ್ತಿಯಲ್ಲಿ ಇರುವುದರಿಂದ ರೈಲ್ವೆ ಮಾರ್ಗಗಳು ಬಹಳ ಕಡಿಮೆ ಇದೆ ಎಂದು ಲೋಕಸಭಾ ಸದಸ್ಯರು ಹೇಳಿದರು.

ಹೆಜ್ಜಾಲ ರೈಲ್ವೆ ಯೋಜನೆಯನ್ನು19 96-97 ರಲ್ಲಿ ಘೋಷಣೆ ಮಾಡಿ 13-14ನೇ ಸಾಲಿನಲ್ಲಿ ಸುಮಾರು 1382 ಕೋಟಿಯನ್ನು ಯೋಜನೆಗೆ ಮೀಸಲು ಇಡಲಾಯಿತು.ಆದರೆ ಈವರೆಗೂ ಕೂಡ ಭೂಸ್ವಾಧೀನ ಪ್ರಕ್ರಿಯೆ ಸಹ ಆರಂಭವಾಗಿಲ್ಲ. ಈ ವಿಳಂಬಕ್ಕೆ ಪ್ರಮುಖ ಕಾರಣವೆಂದರೆ ಯೋಜನೆಯನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರ ಶೇ. 50-50ರ ಅನುಪಾತದ ಅನುದಾನದಲ್ಲಿ ಅನುಷ್ಠಾನಗೊಳಿಸಲು ಮುಂದಾಗಿರುವುದೇ ಇದಕ್ಕೆ ಮೂಲ ಕಾರಣ ಎಂದು ಲೋಕಸಭಾ ಸದಸ್ಯರು ಹೇಳಿದರು.

ರೈಲ್ವೆ ಇಲಾಖೆ ಸಂಪೂರ್ಣವಾಗಿ ಕೇಂದ್ರದ ಪಟ್ಟಿಯಲ್ಲಿದೆ. ಈ ಯೋಜನೆಯಿಂದ ಬರುವ ಲಾಭಾಂಶವು ಕೇಂದ್ರ ಸರ್ಕಾರಕ್ಕೆ ಸಲ್ಲುತ್ತದೆ.

ಚಾಮರಾಜನಗರ ಜಿಲ್ಲೆ ಶೇ. 50ಕ್ಕೂ ಹೆಚ್ಚು ಅರಣ್ಯ ಪ್ರದೇಶವನ್ನು ಹೊಂದಿದೆ. ಇಂತಹ ಪರಿಸರ ಸೂಕ್ಷ್ಮ ಹಾಗೂ ಹಿಂದುಳಿದ ಜಿಲ್ಲೆಯ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಕೇಂದ್ರ ಸರ್ಕಾರವೇ ಶೇಕಡ ನೂರರಷ್ಟು ಅನುದಾನವನ್ನು ಭರಿಸಿ ಈ ಯೋಜನೆಯನ್ನು ಆದ್ಯತೆ ಮೇಲೆ ಪೂರ್ಣಗೊಳಿಸಬೇಕೆಂದು ಸಂಸದ ಸುನೀಲ್ ಬೋಸ್ ಅವರು ಆಗ್ರಹಿಸಿದರು.

ರೈಲು ಸಂಚಾರದ ವೇಳೆ ಮೈಸೂರು ಚಾಮರಾಜನಗರ ರೈಲು ಮಾರ್ಗದಲ್ಲಿ ಬರುವ ಎಲ್.ಪಿ.ಗೇಟ್ ಗಳಲ್ಲಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಗೇಟ್ ಗಳು ಮುಚ್ಚಿರುತ್ತದೆ.

ಹೀಗಾಗಿ ತುರ್ತು ಸಂದರ್ಭದಲ್ಲಿ ಆಂಬುಲೆನ್ಸ್ ಸಂಚಾರಕ್ಕೆ ತೀವ್ರ ಅಡಚಣೆಯಾಗಿ ಪ್ರಾಣಕ್ಕೆ ತೊಂದರೆ ಸಂಭವಿಸುತ್ತಿರುವ ಘಟನೆಗಳು ಕೂಡ ವರದಿಯಾಗಿದೆ.ಸಾರ್ವಜನಿಕರ ಹಿತದೃಷ್ಟಿಯಿಂದ ಪಣ್ಯದ ಹುಂಡಿ ಎಲ್ ಸಿ ಗೇಟ್ 47, ಚಿನ್ನದಗುಡಿ ಹುಂಡಿ ಎಲ್ ಸಿ ಗೇಟ್ 27 ಮತ್ತು ನಂಜನಗೂಡು ಪಟ್ಟಣದ ಎಲ್ ಸಿ 20 ಗೇಟ್ ಗೆ ರೈಲ್ವೆ ಮೇಲ್ಸೇತುವೆ ಮಂಜೂರು ಮಾಡಲಾಗಿದೆ.ಇದಕ್ಕಾಗಿ ಡಿಪಿಆರ್ ಸಿದ್ಧವಾಗಿ ಅನುದಾನ ಮಂಜೂರಾಗಿ ವರ್ಷಗಳ ಕಳೆದಿದ್ದರೂ ಕೂಡ ಕಾಮಗಾರಿ ಮಾತ್ರ ಇನ್ನು ಆರಂಭವಾಗಿಲ್ಲ.

ಕೇಂದ್ರದ ರಾಜ್ಯ ಸಚಿವರು ಮತ್ತು ನಾವು ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಅಧಿಕಾರಿಗಳ ಜೊತೆ ಹಲವು ಬಾರಿ ಚರ್ಚೆಯನ್ನು ಮಾಡಲಾಗಿದ್ದರೂ ಕೂಡ ಯಾವುದೇ ಕಾಮಗಾರಿ ಇನ್ನು ಆರಂಭ ಮಾಡಿಲ್ಲ.

ಅದಕ್ಕಾಗಿ ನಾನು ಪ್ರಧಾನಮಂತ್ರಿಗಳು ಹಾಗೂ ರೈಲ್ವೆ ಸಚಿವರನ್ನು ಒತ್ತಾಯಿಸುವುದೇನೆಂದರೆ ಕೂಡಲೇ ಸ್ಥಗಿತಗೊಂಡಿರುವ ರೈಲ್ವೆ ಯೋಜನೆಗಳಿಗೆ ಚಾಲನೆ ನೀಡಿ ನನ್ನ ಕ್ಷೇತ್ರದ ರೈಲ್ವೆ ವ್ಯವಸ್ಥೆಯನ್ನು ಬಲಪಡಿಸುವ ಮೂಲಕ ಜನಸಾಮಾನ್ಯರಿಗೆ ನ್ಯಾಯ ಒದಗಿಸಬೇಕು ಎಂದು ಈ ಮೂಲಕ ಸರ್ಕಾರಕ್ಕೆ ಮನವಿ ಮಾಡುವುದಾಗಿ ಲೋಕಸಭಾ ಸದಸ್ಯರಾದ ಸುನೀಲ್ ಬೋಸ್ ಅವರು ಲೋಕಸಭೆಯಲ್ಲಿ ಗಮನ ಸೆಳೆದಿದ್ದಾರೆ.

Leave a Reply

Your email address will not be published. Required fields are marked *