ಚಾಮರಾಜನಗರ: ಖಾಸಗಿ ಡೇರಿಗಳ ಹಾವಳಿಗಳನ್ನು ಪರಿಣಾಮಕಾರಿಯಾಗಿ ತಡೆಯುವ ಜೊತೆಗೆ ಗುಣಮಟ್ಟದ ಹಾಲು ಶೇಖರಣೆಗೆ ಕಾರ್ಯ ನಿರ್ವಹಕರು ಹೆಚ್ಚಿನ ಅಧ್ಯತೆ ನೀಡಬೇಕು ಎಂದು ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ಎಸ್.ನಂಜುಂಡಪ್ರಸಾದ್ ತಿಳಿಸಿದರು.
ಜಿಲ್ಲೆಯ ಗುಂಡ್ಲುಪೇಟೆ ಮತ್ತು ಹನೂರು ತಾಲ್ಲುಕು ಬಿಎಂಸಿ ಕೇಂದ್ರಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕರಿಗೆ ಆಡಳಿತ ನಿರ್ವ ಹಣೆ ಕುರಿತು ಕುಶಾಲನಗರದ ವೀರಭೂಮಿ ರೆಸಾಟ್9ನಲ್ಲಿ ನಡೆದ ರಾಜ್ಯ ಮಟ್ಟದ ವಿಶೇಷ ತರಭೇತಿ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಾಲು ಉತ್ಪಾದಕ ರೈತರು ಹಾಗೂ ಒಕ್ಕೂಟಗಳಳ ಮಧ್ಯೆ ಡೇರಿ ಕಾರ್ಯದರ್ಶಿಗಳು ಸೇತುವೆಯಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಒಕ್ಕೂಟಗಳ ಪ್ರಗತಿಯಲ್ಲಿ ಡೇರಿ ನೌಕರರ ಶ್ರಮ ಬಹಳ ಇದೆ. ಗ ಪ್ರಾಥಮಿಕ ಹಂತದಲ್ಲಿಯೇ ಗುಣಮಟ್ಟದ ಹಾಲು ಸಂಗ್ರಹವಾದರೆ ಹಾಲಿನ ಉಪ ಉತ್ಪನ್ನ ಗಳ ತಯಾರಿಕೆ ಹಾಗೂ ಟ್ರೌಟ್ ಪ್ಯಾಕೆಟ್ ಗಳ ತಯಾರಿಕೆಗೆ ಸಹಕಾರಿಯಾಗುತ್ತದೆ. ಹೀಗಾಗಿ ರಾಜ್ಯದಲ್ಲಿ ಪ್ರಪ್ರಥಮವಾಗಿ ಚಾಮುಲ್ ನಿಂದ 60 ವರ್ಷ ತುಂಬಿದ ಡೇರಿ ನೌಕರಿಗೆ ಗೌರವಯುತ ವಾಗಿ ನಿವೃತ್ತಿ ನೀಡಿ ಅವರಸೇವಾ ಹಿರಿತನದ ಮೇಲೆ ಇಂತಿಷ್ಟು ಹಣವನ್ನು ನೀಡುವ ಯೋಜನೆ ಯನ್ನು ಜಾರಿ ಮಾಡಿ ಸುಮಾರು ಎರಡು ಕೋಟಿ ರೂ.ಗಳನ್ನು ಇದುವರೆಗೆ ನಿವೃತ್ತಿ ಹೊಂದಿದ ನೌಕರಿಗೆ ನೀಡಿದ್ದೇವೆ. ನಮ್ಮ ಒಕ್ಕೂಟದ ಈ ಯೋಜನೆಯನ್ನು ಇತರೇ ಒಕ್ಕೂಟ ಗಳು ಅನುಷ್ಠಾನ ಮಾಡಿಕೊಳ್ಳುತ್ತಿವೆ ಎಂದು ನಂಜುಂಡ ಪ್ರಸಾದ್ ತಿಳಿಸಿದರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲದ ನಿರ್ದೇಶಕ ಬಿ.ಸಿ.ಲೋಕಪ್ಪಗೌಡ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇತ್ತೀಚಿನ ದಿನ ಗಳಲ್ಲಿ ಎಲ್ಲಾ ಸಹಾಕಾರ ಕ್ಷೇತ್ರಗಳಲ್ಲಿ ಪೈಪೆÇೀಟಿ ಜಾಸ್ತಿಯಾಗುತ್ತಿದೆ. ಸಂಘದ ಅಸ್ತಿತ್ವ ಉಳಿಸಿಕೊಳ್ಳಲು ಸವಲತ್ತು ಹಾಗೂ ಸೌಲಭ್ಯಗಳನ್ನು ನೀಡುವುದು ಮುಖ್ಯವಾಗಿ ದೆ. ಸಹಕಾರಿ ಕ್ಷೇತ್ರದ ಬೆಳವಣಿಗೆಗೆ ಸಹಕಾರಿ ಶಿಕ್ಷಣ, ತರಬೇತಿ ಹಾಗೂ ಜಾಗೃತಿ ಮುಖ್ಯವಾಗಿ ದೆ. ಈ ನಿಟ್ಟಿನಲ್ಲಿ ಜಿಲ್ಲಾ ಸಹಕಾರಿ ಒಕ್ಕೂಟ ಗುಣಾತ್ಮಕ ವಾಗಿ ಕಾರ್ಯಕ್ರಮ ರೂಪಿಸುತ್ತಿದೆ ಎಂದರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲದ ಮತ್ತೋರ್ವ ನಿರ್ದೇಶಕ ಬಿ. ಜಯಕರಶೆಟ್ಟಿ ಇಂದ್ರಾಣಿ ಮಾತನಾಡಿ, ಎಲ್ಲರ ಲ್ಲೂ ಸಮಥ್ರ್ಯ ಇರುತ್ತದೆ. ನಮ್ಮಲ್ಲಿರುವ ಕೀಳಿರಿಮೆಯನ್ನು ಬಿಟ್ಟು ಇಂತಹ ತರಬೇತಿಯಲ್ಲಿ ಭಾಗವಹಿಹಿಸಿ. ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳಿ ಎಂದರು.
ಮೈಸೂರಿನ ತರಬೇತಿ ಕೇಂದ್ರ ದ ಎಚ್.ಎಂ. ಮಹದೇವಸ್ವಾಮಿ, ಹಾಲಿನ ಗುಣಮಟ್ಟ ಸುಧಾರಣೆ, ಮಡಿಕೇರಿಯ ಕೆಐಸಿಎಂ ಡಾ. ಆರ್. ಎಸ್. ರೇಣುಕಾ ಸಿಇಒಗಳ ಕರ್ತವ್ಯ ಮತ್ತು ಜವಾಬ್ದಾರಿ ಗಳು, ಸಾಧನಾ ಸಂಸ್ಥೆ ಯ ನಿರ್ದೇಶಕ ಟಿ.ಜೆ.ಸುರೇಶ್ ಒತ್ತಡ ನಿರ್ವಹಣೆ ಮತ್ತು ಸಮಯ ನಿರ್ವಹಣೆ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಚಾಮುಲ್ ಅಧ್ಯಕ್ಷ ವೈ.ಸಿ. ನಾಗೇಂದ್ರ, ವ್ಯವಸ್ಥಾಪಕ ನಿರ್ದೇಶಕ ರಾಜ್ ಕುಮಾರ್ ಜಿಲ್ಲಾಸಹಕಾರ ಒಕ್ಕೂಟದ ಉಪಾಧ್ಯಕ್ಷ ರಾಯಪ್ಪನ್, ನಿರ್ಧೇಶಕರಾದ ಮುದ್ದಯ್ಯ, ಎಚ್.ಎನ್. ಸುಂದರ ರಾಜ್, ಎಚ್.ಎಂ. ಬಸವಣ್ಣ, ಎಂ.ಎಂ.ನಾಗರಾಜು, ಪ್ರಭು ಸ್ವಾಮಿ, ಎಂ.ರವಿ, ಪಿ. ಮಹದೇವ ಸ್ವಾಮಿ ಎಚ್.ಎಂ. ಮಹದೇವಪ್ರಭು, ಒಕ್ಕೂಟದ ಸಿಇಓ ಮನುಜ, ವ್ಯವಸ್ಥಾಪಕ ಮಲ್ಲಿಕಾರ್ಜುನ ಸ್ವಾಮಿ, ಸಹಾಯಕ ಕೆಂಡಗಣ್ಣ ಇತರರು ಇದ್ದರು.