ಚಾಮರಾಜನಗರ; ಭಾರತದ ಸಂವಿಧಾನದಲ್ಲಿಗಟ್ಟಿತನವಿದ್ದು, ಅದರಲ್ಲಿರುವ ಮೂಲಭೂತಹಕ್ಕುಗಳು, ಕರ್ತವ್ಯಗಳು, ರಾಜ್ಯನಿರ್ದೇಶಕ ತತ್ವಗಳ ಬಗ್ಗೆ ಅರಿವು ಪಡೆಯಲು ವಿಕಸಿತಾ ಭಾರತ್‌ಯೂಥ್ ಪಾರ್ಲಿಮೆಂಟ್ ಕುರಿತು ಜಿಲ್ಲಾಮಟ್ಟದ ಸ್ಪರ್ಧೆಗಳು ಸಹಕಾರಿಯಾಗಿವೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯಡಾ.ಎಫ್.ಬಿ.ಎಂ ಪ್ರಸನ್ನ ತಿಳಿಸಿದರು.
ಯುವ ವ್ಯವಹಾರ ಮತ್ತುಕ್ರೀಡಾ ಸಚಿವಾಲಯ, ನಗರದ ಮೈಭಾರತ್‌ಕೇಂದ್ರ ಹಾಗೂ ಚಾಮರಾಜನಗರ ವಿಶ್ವವಿದ್ಯಾನಿಲಯದ ರಾಷ್ಟಿçÃಯ ಸೇವಾ ಯೋಜನೆ ಕೋಶ ಸಹಯೋಗದಲ್ಲಿ
ಚಾಮರಾಜನಗರ ವಿಶ್ವವಿದ್ಯಾನಿಲಯದ ಕಾನ್ಫರೆನ್ಸ್ ಹಾಲ್‌ನಲ್ಲಿ ನಡೆದ’ ‘ವಿಕಸಿತಾ ಭಾರತ್‌ಯೂಥ್ ಪಾರ್ಲಿಮೆಂಟ್-೨೦೨೬ರ ಕುರಿತುಜಿಲ್ಲಾಮಟ್ಟದ ಸ್ಪರ್ಧೆಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ವಿವಿಧ ರಾಜ್ಯಗಳಿಂದ ಆಯ್ಕೆ ಮಾಡಿ ಕಳುಹಿಸಿದ ಸಂಸದರ ಕರ್ತವ್ಯಗಳು, ಕೇಂದ್ರದಿಂದ ತಮ್ಮಕ್ಷೇತ್ರಕ್ಕೆ ಬೇಕಾದ ಅನುದಾನತರುವುದು, ಇಂತಹ ಕಾರ್ಯಕ್ರಮಗಳ ಬಗ್ಗೆ ‘ವಿಕಸಿತಾ ಭಾರತ್‌ಯೂಥ್ ಪಾರ್ಲಿಮೆಂಟ್-೨೦೨೬ರ ಕುರಿತು ಜಿಲ್ಲಾಮಟ್ಟದ ಸ್ಪರ್ಧೆ ಆಯೋಜಿಸಿರುವುದು ಸಂತಸದ ವಿಚಾರ, ವಿವಿನಿಲಯದ ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮಗಳಲ್ಲಿ ಹೆಚ್ಚಿನಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿಮಾಡಿದರು.
ಚಾಮರಾಜನಗರ ವಿಶ್ವವಿದ್ಯಾನಿಲಯದ ಕುಲಪತಿಪ್ರೊ.ಎಂ.ಆರ್. ಗಂಗಾಧರ್‌ಅಧ್ಯಕ್ಷತೆ ವಹಿಸಿದ್ದರು.
೫೭ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿ ೫ ವಿದ್ಯಾರ್ಥಿಗಳನ್ನು ರಾಜ್ಯ ಮಟ್ಟಕ್ಕೆ ಆಯ್ಕೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಮೌಲ್ಯಮಾಪನ ವಿಭಾಗದ ಕುಲಸಚಿವ ಪ್ರೊ. ಕೆ.ಎಂ ಮಹದೇವನ್, ಸಿಂಡಿಕೇಟ್ ಸದಸ್ಯ ಪುಟ್ಟಸ್ವಾಮಿ, ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಡಾ. ಮಹೇಶ್. ಆರ್, ತೀರ್ಪುಗಾರರಾದ ಡಾ.ಪಿ. ದೇವರಾಜು, ಡಾ. ಡಿ.ಜೆ ಶಶಿಕುಮಾರ್, ಶೈಲೇಶ್‌ಕುಮಾರ್, ಡಾ.ಶ್ವೇತಾ, ಗುರುರಾಜ್ ಇತರರು ಹಾಜರಿದ್ದರು