ಅಂತರಾಷ್ಟ್ರೀಯ ಮಾಸ್ಟರ್ಸ್  ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ಕ್ರೀಡಾಕೂಟ: ಬೆಳ್ಳಿಯ ಪದಕ ಗೆದ್ದು ಬಿಗಿದ ಹೆಚ್.ಎಲ್ .ಚಂದ್ರಶೇಖರ್

  • ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿ, ‘ಜಿಲ್ಲೆಯ ಕೀರ್ತಿಯನ್ನು ರಾಷ್ಟ್ರಮಟ್ಟದಲ್ಲಿ ಪಸರಿಸಿದ ಸರ್ಕಾರಿ ನೌಕರ.

ಚಾಮರಾಜನಗರ:  ಥೈಲ್ಯಾಂಡಿನಲ್ಲಿ  ಇತ್ತೀಚೆಗೆ ನಡೆದ 30ನೇ  ಅಂತರಾಷ್ಟ್ರೀಯ ಮಾಸ್ಟರ್ಸ್  ಅಥ್ಲೆಟಿಕ್ಸ್ ಚಾಪಿಯನ್ ಶಿಪ್ -2026 ರ  ಕ್ರೀಡಾಕೂಟದಲ್ಲಿ ಪುರುಷರ 4×100   ಮೀಟರ್ ರಿಲೇ ಓಟದ ಸ್ಪರ್ಧೆಯಲ್ಲಿ ಬೆಳ್ಳಿಯ ಪದಕವನ್ನು ಮುಡಿಗೇರಿಸಿಕೊಳ್ಳುವ ಮೂಲಕ ದೇಶಕ್ಕೆ ಕೀರ್ತಿ ತಂದಿರುವ ಚಾಮರಾಜನಗರ ತಾಲೂಕಿನ ಆಲೂರು ಹೊಮ್ಮ ಗ್ರಾಮದ  ಹೆಚ್ .ಎಲ್ .ಚಂದ್ರಶೇಖರ್  ಅವರಿಗೆ ರಾಜ್ಯದ ಹಾಗೂ  ಜಿಲ್ಲೆಯ ಪರವಾಗಿ  ಹೊಮ್ಮ ಗ್ರಾಮಸ್ಥರು,  ಸ್ನೇಹಿತರು  ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ವಿಶ್ವದ ವಿವಿಧ ದೇಶಗಳ ಕ್ರೀಡಾಪಟುಗಳು  ಭಾಗವಹಿಸಿದ್ದ ಈ ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ಚಂದ್ರಶೇಖರ್ ರವರು ತಮ್ಮ ಕ್ರೀಡಾ ಕೌಶಲ್ಯ ದಿಂದ 4×100 ಮೀಟರ್ ಪುರುಷರ ರಿಲೇ ವಿಭಾಗದಲ್ಲಿ ಮಿಂಚಿದ ಇವರು ತಂಡಕ್ಕೆ ಬೆಳ್ಳಿಯ ಪದಕ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ
ಹೊಮ್ಮ ಗ್ರಾಮದ ಲೇಟ್ ಲಿಂಗನಾಯಕ ಹಾಗೂ ಜಯಲಕ್ಷ್ಮಿ ದಂಪತಿಯ ಪುತ್ರರಾದ ಇವರು ಚಿಕ್ಕ ವಯಸ್ಸಿನಿಂದಲೂ ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದರು. ಕುದೇರಿನಲ್ಲಿ ಪ್ರೌಢಶಾಲೆ. ಹಾಗೂ ಪಿಯುಸಿಯನ್ನು ಮುಗಿಸಿ  ಚಾಮರಾಜನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜೀನಲ್ಲಿ ಪದವಿ  ವ್ಯಾಸಂಗ  ಮಾಡಿದ್ದ ಇವರು  ಆ ಅವಧಿಯಲ್ಲಿ ಹಲವಾರು ಪದಕಗಳನ್ನು ಗೆದ್ದು ಕಾಲೇಜು ಚಾಂಪಿಯನ್ ಆಗಿ ಹೊರಹೊಮ್ಮಿದ್ದರು.  ಇವರ ಸಾಧನೆಯು ರೇಷ್ಮೆ ಇಲಾಖೆಗೆ ಹೆಮ್ಮೆ ತಂದಿದ್ದು, ಹಿರಿಯ ಅಧಿಕಾರಿಗಳು ಹಾಗೂ ಸಹೋದ್ಯೋಗಿಗಳು ಅಭಿನಂದನೆ ಸಲ್ಲಿಸಿದ್ದಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿ, ಜಿಲ್ಲೆಯ ಕೀರ್ತಿಯನ್ನು ರಾಷ್ಟ್ರಮಟ್ಟದಲ್ಲಿ ಪಸರಿಸಿದ್ದಾರೆ.

Leave a Reply

Your email address will not be published. Required fields are marked *