- ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬಾಬೂಜಿ ಜಯಂತಿ ಆಚರಣೆ
ಚಾಮರಾಜನಗರ: ಡಾ.ಬಾಬು ಜಗಜೀವನರಾಮ್ ಅವರು ಸೃಷ್ಟಿಸಿದ ಹಸಿರು ಕ್ರಾಂತಿಯಿಂದ ದೇಶದಲ್ಲಿ ಬಡವರಿಗೆ ಆಹಾರದ ಕೊರತೆ ದೂರವಾಯಿತು. ಅವರು
ಸಮಾಜದ ಕಟ್ಟಕಡೆಯ ವ್ಯಕ್ತಿಯ ಜೀವನಕ್ಕೂ ಆದ್ಯತೆ ಕೊಟ್ಟಿದ್ದರಿಂದ ಇಂದು ಸಮಾಜದಲ್ಲಿ ಆಹಾರ ಪದಾರ್ಥಗಳ ಕೊರತೆಯಿಲ್ಲ’ ಎಂದು ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ ಸ್ಮರಿಸಿದರು.
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಎಸ್ ಸಿ ಮೋರ್ಚಾದ ವತಿಯಿಂದ ನಡೆದ ಡಾ.ಬಾಬುಜಗಜೀವನರಾಂ ಅವರ 119ನೇ ಜಯಂತಿ ಕಾರ್ಯಕ್ರಮದಲ್ಲಿ ಬಾಬೂಜಿ ಭಾವಚಿತ್ರಕ್ಕೆ ಪುಷ್ಷಾರ್ಚನೆ ಮಾಡಿ ಮಾತನಾಡಿದರು.
ಅಪ್ರತಿಮ ದೇಶಪ್ರೇಮಿ, ಸ್ವಾತಂತ್ರ್ಯ ಹೋರಾಟಗಾರರು. ಭಾರತದ ಮಾಜಿ ಉಪಪ್ರಧಾನಿಮಂತ್ರಿಯಾದ ಬಾಬುಜಗಜೀವನರಾಂ ಅವರು ಚಾಮರಾಜನಗರಕ್ಕೂ ಭೇಟಿ ನೀಡಿದ್ದರು. ಅವರನ್ನು ನೋಡುವ ಸೌಭಾಗ್ಯ ನಮಗೆ ಸಿಕ್ಕಿತು. ವಿಶ್ವದಲ್ಲಿ ಯುದ್ಧ ನಡೆಯುತ್ತಿದೆ. 1970ದಶಕದಲ್ಲಿ ಬಾಬೂಜಿ ಅವರು ರಕ್ಷಣಾ ಸಚಿವರಾಗಿದ್ದಂತಹ ಸಂದರ್ಭದಲ್ಲಿ ದೇಶದಲ್ಲಿ ಯುದ್ಧ ನಡೆಯುತ್ತಿತ್ತು. ಅ ಸಂದರ್ಭದಲ್ಲಿ ದೇಶಕ್ಕೆ ಬೇಕಾದ ಕ್ಷಿಪಣಿಗಳನ್ನು ತಯಾರಿಸಲು ಅಡಿಪಾಯ ಹಾಕಿಕೊಟ್ಟಿದ್ದರು ಎಂದರು.
ಕೃಷಿ ಸಚಿವರಾಗಿದ್ದ ಬಾಬುಜಗಜೀವನರಾಂ ಅವರು ಹಸಿರುಕ್ರಾಂತಿಯ ಹರಿಕಾರರಾಗಿ ಕೃಷಿಗೆ ಸಂಬಂಧಪಟ್ಟ ಅನೇಕ ಕಾನೂನುಗಳನ್ನು ತಂದು ಭಾರತದೇಶದ ಆಹಾರ ಭದ್ರತೆ ಒದಗಿಸಿಕೊಟ್ಟಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಎಸ್ ಸಿ ಮೋರ್ಚಾದ ಜಿಲ್ಲಾಧ್ಯಕ್ಷ ನವೀನ್ ಮೌರ್ಯ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್‌ರವರು, ಡಾ.ಬಾಬುಜಗಜೀವನರಾಂ ಅವರು ಸಮಾಜದ ಕಣ್ಣಾಗಿ ಶೋಷಿತರ ಪರ ಹೋರಾಟ ಮಾಡಿದರು. ದಲಿತ ಐಕಾನ್ ಭಾರತದಲ್ಲಿದ್ದಾರೆ ಯಾರಾದರೂ ಇದ್ದರೆ ಅದು ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಎಂದು ಬಾಬೂಜಿ ಹೇಳಿದರು ಎಂದರು.
ಡಾ.ಬಾಬುಜಗಜೀವನರಾಂ ಅವರು ಒಬ್ಬ ಸ್ವಾಭಿಮಾನಿ ರಾಜಕಾರಣಿಯಾಗಿದ್ದು, ಅವರ ಸ್ವಾಭಿಮಾನಕ್ಕೆ ಧಕ್ಕೆ ಉಂಟಾದ ಸಂದರ್ಭದಲ್ಲಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದರು. ಕಾಂಗ್ರೆಸ್ ವಿರುದ್ಧ ಸ್ವ೦ತ ಪಕ್ಷವನ್ನು ಕట్టి ಶೋಷಿತರು,. ಹಿಂದುಳಿದವರ್ಗದವರು, ದಲಿತ ಪರವಾಗಿ ಗಟ್ಟಿ ಧ್ವನಿಯಾಗಿ ಕೆಲಸ ಮಾಡಿದರು.
ಚೂಡಾ ಮಾಜಿ ಅಧ್ಯಕ್ಷ ಕುಲಗಾಲಶಾಂತಮೂರ್ತಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಬಿಜೆಪಿ
ಜಿಲ್ಲಾ ಪ್ರಧಾನ ಕಾರ್ಯ ದರ್ಶಿಗಳಾದ ಮೂಡ್ನಾಕೂಡು ಪ್ರಕಾಶ್, ಹೊನ್ನೂರು
ಮಹಾದೇವಸ್ವಾಮಿ, ಚೂಡಾ ಮಾಜಿ ಅಧ್ಯಕ್ಷರಾದ ಕುಲಗಾಲಶಾಂತಮೂರ್ತಿ,ಬಾಲಸುಬ್ರಹ್ಮಣ್ಯಂ, ಗ್ರಾಮಾಂತರ ಮಂಡಲ ಅಧ್ಯಕ್ಷ ಅಧ್ಯಕ್ಷ ಕಾಡಹಳ್ಳಿ ಕುಮಾರ್, ನಗರಮಂಡಲ ಅಧ್ಯಕ್ಷ ಶಿವರಾಜ್, ಜಿ.ಪಂ.ಮಾಜಿ ಸದಸ್ಯ ಬಾಲರಾಜು, ನಗರಸಭಾ ಮಾಜಿ ಶಿವಣ್ಣ, ಜಿಲ್ಲಾ ಕಾರ್ಯದರ್ಶಿ ನಟರಾಜು, ಮುಖಂಡ ಚಂದ್ರಶೇಖರ್, ಎಸ್ ಸಿ.ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮಸಮುದ್ರ ಶಿವಣ್ಣ ಪ್ರಭಾರಿ ಜಿಲ್ಲಾ ಕಾರ್ಯದರ್ಶಿ ಮೂಡಹಳ್ಳಿ ಮೂರ್ತಿ, ವೇಣುಗೋಪಾಲ, ಮುಖಂಡರಾದ ಆರ್.ವಿ.ಮಹಾದೇವಸ್ವಾಮಿ, ಆರ್.ಪುಟ್ಟಮಲ್ಲಪ್ಪ, ಯ.ನಿಂಗಯ್ಯ, ಪರಶಿವಮೂರ್ತಿ, ರಾಜಪ್ಪ, ಶಿವಕುಮಾರ್, ಮಹದೇವಸ್ವಾಮಿ, ಕಿರಣ್, ಹೇಮಂತ್ ಇತರರು
ಹಾಜರಿದ್ದರು.