ಜೆಡಿಎಸ್ ವತಿಯಿಂದ ನೂತನ ಜಿಲ್ಲಾಧಿಕಾರಿ ಶ್ರೀರೂಪ ಗೆ ಸನ್ಮಾನ

ಚಾಮರಾಜನಗರ: ನೂತನ ಜಿಲ್ಲಾಧಿಕಾರಿಯಾದ ಶ್ರೀರೂಪ ಅವರನ್ನು  ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ವತಿಯಿಂದ ಸನ್ಮಾನಿಸಲಾಯಿತು.
ನಗರದ ಜಿಲ್ಲಾಡಳಿತ ಭವನದಲ್ಲಿ ಪಕ್ಷದ ಮುಖಂಡ ಆಲೂರು ಮಲ್ಲು ಅವರ ನೇತೃತ್ವದಲ್ಲಿ  ಭೇಟಿ ಮಾಡಿ ಅವರಿಗೆ  ಶಾಲು ಹೊದಿಸಿ, ಹಾರಹಾಕಿ, ಮೈಸೂರು ಪೇಟ ತೊಡಿಸಿ, ಫಲತಾಂಬೂಲ ನೀಡಿ ಮಕರ ಸಂಕ್ರಾಂತಿ ಹಬ್ಬದ ಶುಭಾಶಯ ಕೋರಿ ಸನ್ಮಾನಿಸಲಾಯಿತು.
   ಈ ಸಂದರ್ಭದಲ್ಲಿ   ಟೌನ್ ಅಧ್ಯಕ್ಷ ಜಿ.ಎಂ.ಶಂಕರ್, ಹೊಂಗನೂರು ಶಿವಕುಮಾರ್, ಪಣ್ಯದಹುಂಡಿ ನಾಗರಾಜು, ಹೊನ್ನಹಳ್ಳಿ ಬಸವಣ್ಣ,  ದೊಡ್ಡರಾಯಪೇಟೆ ಮಹೇಶ್ ಗೌಡ, ಹರದನಹಳ್ಳಿ ರಾಮಚಂದ್ರ ನಾಯಕ,  ಹೊಂಗನೂರು ರಾಜಣ್ಣ,  ಹೊಂಡರಬಾಳು, ಮುರುಗೇಶ್, ಆಲೂರು ನಂದೀಶ್, ಮೇಗಲಹುಂಡಿ ಪಾಪಣ್ಣ
ಹಾಜರಿದ್ದರು.

Leave a Reply

Your email address will not be published. Required fields are marked *