- ಪತ್ರಕರ್ತರಿಗೆ ಅಂಚೆ ಇಲಾಖೆ ಅಪಘಾತ ವಿಮೆ ಪಾಲಿಸಿ ಬಾಂಡ್ ವಿತರಿಸಿ ಮಾಹಿತಿ
ಚಾಮರಾಜನಗರ : ಪತ್ರಕರ್ತರು ಸಮಾಜಕ್ಕೆ ಅಗತ್ಯವಾಗಿರುವ ಸುದ್ದಿಗಳನ್ನು ಮಾಡಬೇಕು ಎಂದು ಸಂಸದ ಸುನೀಲ್‌ಬೋಸ್ ಮನವಿ ಮಾಡಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಚಾಮರಾಜನಗರ ಜಿಲ್ಲಾ ಘಟಕದ ಸದಸ್ಯರಿಗೆ ಅಂಚೆ ಇಲಾಖೆ ಅಪಘಾತ ವಿಮೆ ನೋಂದಣಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಪತ್ರಕರ್ತರಿಗೆ ಅವಘಾತ ವಿಮೆ ಪಾಲಿಸಿ ಬಾಂಡ್ ವಿತರಿಸಿ ಮಾತನಾಡಿದರು.
ಪತ್ರಕರ್ತರು ಸಮಾಜಕ್ಕೆ ಆಗತ್ಯವಾಗಿರುವ ವಸ್ತುನಿಷ್ಠ ವಿಷಯಗಳನ್ನು ಸುದ್ದಿ ಮಾಡಿ ತಿಳಿಸುವ ಕೆಲಸ ಮಾಡಬೇಕಿದೆ. ಅನಗತ್ಯವಾದ ವೈಯುಕ್ತಿಕ ವಿಚಾರ ಸುದ್ದಿ ಮಾಡುವುದರಿಂದ ಸಮಾಜಕ್ಕೆ ಯಾವುದೇ ಲಾಭವಿಲ್ಲ. ಜನರಿಗೆ ಉಪಯುಕ್ತವಾದ ಸಂದೇಶಗಳನ್ನು ಕೊಡಬೇಕು ಹೊರತು ವೈಯುಕ್ತಿಕ ವಿಷಯಗಳ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ಸಮಾಜ ಪತ್ರಕರ್ತರನ್ನು ನಂಬಿದ್ದಾರೆ ಆಗಾಗಿ ಪತ್ರಕರ್ತರು ನೈಜವಾದ ಸುದ್ದಿಗಳ ಮಾಡಬೇಕು ಎಂದರು.
ಪತ್ರಕರ್ತರು ಮಾರಾಟವಾಗಬಾರದು: ಮಾಧ್ಯಮದವರು ಎಂದಿಗೂ ಮಾರಾಟ ಆಗಬಾರದು. ನೀವು ಮಾರಾಟವಾದರೆ ನೈಜವಾಗಿ.. ತೋರಿಸುವುದು ಏನು? ಯಾವುದೇ ವ್ಯಕ್ತಿ ಪೂಜೆ ಮಾಡದೆ ಜಾತ್ಯಾತೀತವಾಗಿ ನಾನು ಅಥವಾ ಯಾರೇ ತಪ್ಪು ಮಾಡಿದರೂ ತಪ್ಪು ಅದನ್ನು ತೋರಿಸಬೇಕು ಸರಿ ಇದ್ದರೆ ಸರಿ ಎಂದರೆ ಬರೆಯಿರಿ ತಪ್ಪು ಆಗಿದ್ದಾರೆ ತಪ್ಪು ಎಂದು ಬರೆಯಿರಿ ಆಗ ನಾವು ತಪ್ಪುಗಳನ್ನು ತಿದ್ದಿಕೊಂಡು ಕೆಲಸ ಮಾಡಬಹುದು ಎಂದರು.
ಜಿಲ್ಲೆಯ ಪತ್ರಕರ್ತರೆಲ್ಲರೂ ಸೇರಿ ಒಂದು ವಿನೂತನವಾದ ವಿಮೆ ಸೌಲಭ್ಯ ಕಾರ್ಯಕ್ರಮ ಮಾಡಿರುವುದು ನಿಜವಾಗಲೂ ತುಂಬಾ ಖುಷಿಯಾಗುತ್ತದೆ. ಯಾರಿಗೆ ಏನು ಆಗಬಾರದು ಅನ್ನುವುದು ನಮ್ಮ ಬಯಕೆ. ಆದರೆ ಆಕಸ್ಮಾತ್ ಅಪಘಾತ ಸಂಭವಿಸಿ, ಸಾವು, ನೋವು ಆದರೆ ಮುಂದಿನ ಜೀವನ ಏನಪ್ಪ ಅಂಥಾ ಚಿಂತನೆಗೊಳಾಗಬಾರದು ಅನ್ನುವ ದೃಷ್ಟಿಯಿಂದ ವಿಮೆ ಪಾಲಿಸಿ ಮಾಡಿರುವುದು ನನಗಂತು ತುಂಭಾ ಖಷಿಯಾಗಿದೆ ಎಂದರು.
ಪತ್ರಕರ್ತರಿಗೆ ಸಮಾಜದಲ್ಲಿ ಒಂದು ಜವಾಬ್ದಾರಿ ಇದೆ. ಸಂವಿಧಾನದಲ್ಲಿ ನಾಲ್ಕನೆಯ ಅಂಗ ಪತ್ರಿಕಾರಂಗ
ಸಮಾಜದಲ್ಲಿ ಕೆಲಸ ಮಾಡುತ್ತಿದ್ದಾರೆ. ದಿನನಿತ್ಯ ಇಡೀ ಪ್ರಪಂಚದಲ್ಲಿ, ದೇಶ, ರಾಜ್ಯದಲ್ಲಿ ಏನೋ ಘಟನೆಗಳ ನಡೆಯುತ್ತದೆ ಅಂಥಾ ಹೇಳಿ ಜನರಿಗೆ ತಿಳಿಸುವ
ಬಹಳ ಜವಾಬ್ದಾರಿಯುತ ಕೆಸಲ ಪತ್ರಕರ್ತರದು ಎಂದರು.
ಮಾಜಿ ಸಂಸದನಾದರೂ ಪತ್ರಕರ್ತರ ವಿಮೆ ನೆರವು.: ಸಂಸದನಾಗಿದ್ದರೂ ಅಥವಾ ಮಾಜಿ ಸಂಸದನಾದರೂ ಕೂಡ ನಿಮ್ಮ ಅಪಘಾತ ವಿಮೆಗೆ ಧನಸಹಾಯ ಮಾಡಿಕೊಡುತ್ತೇನೆ. ಜನರ ತೀರ್ಪಿಗೆ ತಲೆ ಬಾಗುವುದು
ನಮ್ಮ ಜವಾಬ್ದಾರಿ 2 ಬಾರಿ ಸಂಸದನಾಗಿ ಮಾಡುವುದು ಜನರ ತೀರ್ಮಾನ. ನಮ್ಮ ತಂದೆ ಹೆಚ್.ಸಿ.ಮಹದೇವಪ್ಪ,
ಸಿದ್ದರಾಮಯ್ಯಯವರು, ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ದೇವೇಗೌಡರು ಸೋತಿದ್ದಾರೆ. ಜನರ ತೀರ್ಪಿಗೆ ತಲೆಬಾಗಬೇಕಿದೆ ಎಂದರು.
ನಿವೇಶನ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ : ಪತ್ರಕರ್ತರಿಗೆ ನಿವೇಶನ ಕೊಡಿಸಿಕೊಡಿಸುವಂತೆ ಮನವಿ ಮಾಡಿದ್ದೀರಿ ನಿಮಗೆ ನಿವೇಶನ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು
ನುಡಿದಂತೆ ನಡೆಯುತ್ತಿದ್ದೇವೆ: ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಆರ್.ಎನ್.ಸಿದ್ದಲಿಂಗಸ್ವಾಮಿ ಮಾತನಾಡಿ,ಚುನಾವಣೆಯ ಪೂರ್ವದಲ್ಲಿ ನಮ್ಮ ತಂಡ ಅಧಿಕಾರಕ್ಕೆ ಬಂದರೆ ಸಂಘದ ಎಲ್ಲ ಸದಸ್ಯರಿಗೆ ಜೀವವಿಮೆ ಮಾಡಿಸುವುದಾಗಿ ಆಶ್ವಾಸನೆ ನೀಡಲಾಗಿತ್ತು.. ಅದರಂತೆ ನುಡಿದಂತೆ ನಡೆಯಬೇಕು. ಎಂಬ ಉದ್ದೇಶದಿಂದ ಕಾರ್ಯಕಾರಿಣಿ ಸಮಿತಿ ನಿರ್ಣಯದಂತೆ ಸಂಸದ ಸುನೀಲ್‌ಬೋಸ್ ಅವರನ್ನು ಭೇಟಿ ಮಾಡಿ ಸಂಘದ ಎಲ್ಲ174 ಸದಸ್ಯರಿಗೆ. ಜೀವವಿಮೆ ವೆಚ್ಚ ಭರಿಸಬೇಕು ಎಂದು ಮನವಿ ಮಾಡಿದ್ದೇವು ಅದರಂತೆ ಸಂಸದರು ನಮ್ಮ ಮನವಿ ಸ್ಪಂದಿಸಿ ಜೀವವಿಮೆ ಹಣ ಭರಿಸಿಕೊಟ್ಟಿದ್ದಾರೆ.
ಅದಕ್ಕಾಗಿ ಸಂಘದ ವತಿಯಿಂದ ಅವರಿಗೆ ಅಭಿನಂದನೆ ಸಲ್ಲಿಸಲಾಗುವುದು .ಸಂಘ, ಪತ್ರಕರ್ತರ ಭವನದ ಕ್ಷೇಯೋಭಿವೃದ್ದಿಗೆ ಸಹಕರಿಸುವಂತೆ ಸಂಸದರಲ್ಲಿ ಮನವಿ ಮಾಡಿಕೊಂಡರು.
ಅಂಚೆ ಇಲಾಖೆಯ ವ್ಯವಸ್ಥಾಪಕ ಮನೋ ಪ್ರದೀಪ್ ಮಾತನಾಡಿ, ಅಂಚೆ ಇಲಾಖೆಯ ಜೀವವಿಮೆ ಯೋಜನೆಗಳ ಕುರಿತು ಮಾಹಿತಿ ನೀಡಿದರು.
ಪತ್ರಕರ್ತರಿಗೆ ನಿವೇಶನ ಕೋರಿ ಮನವಿ : ಚಾಮರಾಜನಗರ ಪತ್ರಕರ್ತರ ಗೃಹನಿರ್ಮಾಣ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಂ.ಇ.ಮಂಜುನಾಥ್ ಚಾಮರಾಜನಗರ ಪತ್ರಕರ್ತರಿಗೆ ನಗರ ಪ್ರದೇಶದಲ್ಲಿ ನಿವೇಶನ ಕೊಡಿಸುವಂತೆ ಸಂಸದ ಸುನೀಲ್ ಬೋಸ್ ಅವರಿಗೆ ಮನವಿ ಸಲ್ಲಿಸಿದರು.
ಸನ್ಮಾನ : ಸಂಸದ ಸುನೀಲ್ ಬೋಸ್ ಅವರನ್ನು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿಸಂಘದ ಪ್ರಧಾನ ಕಾರ್ಯದರ್ಶಿ ಲಕ್ಕೂರು ಪ್ರಸಾದ್ , ರಾಜ್ಯ ಸಮಿತಿ ಸದಸ್ಯ ಮಹೇಂದ್ರ, ಖಜಾಂಚಿ ಪುಟ್ಟರಾಜು ಹಾಗೂ ಸಂಘದ ಜಿಲ್ಲಾ ಘಟಕ ಪದಾಧಿಕಾರಿಗಳು, ಜಿಲ್ಲೆಯ ಐದು ತಾಲೂಕು ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.