ಕೆ.ಎಂ. ನಾಗರಾಜು ನಿಧನ ಸಮುದಾಯಕ್ಕೆ ತುಂಬಲಾದ ನಷ್ಟ : ಮಹದೇವಯ್ಯ ಕಂಬನಿ

ದಸಂಸ ಸಂಚಾಲಕ ಕೆ.ಎಂ. ನಾಗರಾಜು ನಿಧನ; ಶ್ರದ್ದಾಂಜಲಿ

ಚಾಮರಾಜನಗರ: ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಕೆ.ಎಂ. ನಾಗರಾಜು ಅವರ ಅಕಾಲಿಕ ಮರಣವು ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಬುದ್ದ ನಗರ ನಾಗರೀಕ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಮಹದೇವಯ್ಯ ಕಂಬಿನಿ ಮಿಡಿದರು.

ನಗರದ ಬುದ್ದ ನಗರದಲ್ಲಿ ನಾಗರೀಕÀ ಹಿತರಕ್ಷಣಾ ಸಮಿತಿಯ ವತಿಯಿಂದ ಸೋಮವಾರ ಸಂಜೆ ನಡೆದ ಶ್ರದ್ದಾಂಜಲಿ ಸಭೆಯಲ್ಲಿ ಗೌರವ ನಮನ ಸಲ್ಲಿಸಿ ಅವರು ಮಾತನಾಡಿದರು. ಕೆ.ಎಂ. ನಾಗರಾಜು ಅವರು ಸ್ನೇಹ ಜೀವಿಯಾಗಿದ್ದು. ದಸಂಸ ಜಿಲ್ಲಾ ಸಂಚಾಲಕರಾಗಿ ಉತ್ತಮ ಸೇವೆ ಸಲ್ಲಿಸುವ ಜೊತೆಗೆ ಸಮಾಜದ ಯಾವುದೇ ಭಾಗದಲ್ಲಿ ಅನ್ಯಾಯವಾದರು ಮೊದಲಿಗರಾಗುತ್ತಿದ್ದರು. ಅಲ್ಲಿದೇ ಅಂಬೇಡ್ಕರ್ ಅವರ ಅನುಯಾಯಿಯಾಗಿದ್ದ ನಾಗರಾಜು ಅವರು ಅವರ ತತ್ವ ಸಿದ್ದಾಂತಗಳನ್ನು ಅಳವಡಿಸಿಕೊಂಡು ಸಮಾಜದ ಏಳಿಗೆಗೆ ತಮ್ಮನ್ನು ಅರ್ಪಿಸಿಕೊಂಡಿದ್ದರು ಎಂದರು.

ಬುದ್ದ ನಗರದಲ್ಲಿ ಇತ್ತಿಚೆಗೆ ನಡೆದ ಅಂಬೇಡ್ಕರ್ ಜಯಂತಿಯ ಸಂಪೂರ್ಣ ಕಾರ್ಯಕ್ರಮದ ವಹಿಸಿಕೊಂಡು ಸಮಾಜ ಕಲ್ಯಾಣ ಸಚಿವರಾದ ಮಹದೇವಪ್ಪ ಅವರನ್ನು ಸಮಾರಂಭಕ್ಕೆ ಕರೆತರುವಲ್ಲಿ ಪ್ರಮುಖರಾಗಿದ್ದರು. ಅಲ್ಲದೇ ಹೋರಾಟ ಮತ್ತು ಸಾಮಾಜಿಕ ಚಿಂತೆನ ಮತ್ತು ರಾಜಕಾರಣಿಗಳೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿ ನೊಂದವರ ಧ್ವನಿಯಾಗಿದ್ದರು. ಇಂಥ ನಾಯಕತ್ವ ಗುಣವುಳ್ಳ ನಾಗರಾಜು ನಮ್ಮನ್ನು ಬಿಟ್ಟು ಅಗಲಿದ್ದಾರೆ ಎಂದರೇ ನಂಬಲಾಧ್ಯ ಎಂದರು.

ನಿವೃತ್ತಿ ಉಪ ನಿರ್ದೇಶಕ ಹಾಗೂ ಸಮಿತಿಯ ಗೌರವ ಅಧ್ಯಕ್ಷ ಮಂಜುನಾಥ ಪ್ರಸನ್ನ ಮಾತನಾಡಿ, ಸದಾ ನಗು ಮುಖದ ಅಸನ್ಮುಖಿ ಕೆ.ಎಂ. ನಾಗರಾಜು ನಿಧನ ಸುದ್ದಿ ಅಘಾತವಾಗಿದೆ. ಅಪಘಾತದಲ್ಲಿ ಅವರು ನಿಧನಗಾರಿದ್ದು ರ್ದುದೈವ ಅವರು ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ. ಅವರ ಕುಟುಂಬದ ನೋವಿನಲ್ಲಿ ಎಲ್ಲರು ಭಾಗಿಯಾಗಿಯೋಣ. ಅವರ ಚಿಂತನೆಗಳನ್ನು ಎಲ್ಲರು ಮೈಗೂಡಿಸಿಕೊಂಡು ಸಮಾಜದ ಅಭಿವೃದ್ದಿಗೆ ದುಡಿಯೋಣ ಎಂದರು.

ಸಭೆಯಲ್ಲಿ ಸಾಹಿತಿ ದೊಡ್ಡರಾಯಪೇಟೆ ಸಿದ್ದರಾಜು, ಮುಖಂಡರಾದ ಶಿವಣ್ಣ, ಶಂಕರಪ್ಪ, ಗಜೇಂದ್ರ, ಲೋಕೇಶ್, ಶಿವರಾಜು, ನಾಗಣ್ಣ, ಬಸವರಾಜು, ನಂಜಪ್ಪ, ನಾಗಬಸವಣ್ಣ, ನಟರಾಜು, ರವಿ ಪ್ರಸಾದ್, ಮಹದೇವಸ್ವಾಮಿ, ಬಸವಣ್ಣ, ನಾಗರಾಜು, ಕೃಷ್ನಮೂರ್ತಿ ಮೊದಲಾದವರು ಇದ್ದರು.

Leave a Reply

Your email address will not be published. Required fields are marked *