ಕೆ.ಶಿವರಾಂ ಅವರು ಸಮುದಾಯಕ್ಕಾಗಿ ಶ್ರಮಿಸಿದರು : ಅಣಗಳ್ಳಿ ಬಸವರಾಜು

  • ಕೆ.ಶಿವರಾಂ ಅವರ 2ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ

ಚಾಮರಾಜನಗರ: ನಿವೃತ್ತ ಐಎಎಸ್ ಅಧಿಕಾರಿ ಕೆ.ಶಿವರಾಂ ಅವರು ರಾಜ್ಯದಲ್ಲಿ ಛಲವಾದಿ ಮಹಾಸಭಾ ಕಟ್ಟಿಕೊಂಡು ಸಮುದಾಯದ ಏಳಿಗೆಗಾಗಿ ಶ್ರಮಿಸಿದ್ದಾರೆ ಎಂದು  ಛಲವಾದಿ ಮಹಾಸಭಾದ ರಾಜ್ಯ ಉಪಾಧ್ಯಕ್ಷ ಅಣಗಳ್ಳಿ ಬಸವರಾಜು ಹೇಳಿದರು.
ನಗರದ ಡಾ.ಬಿ.ಆ‌ರ್.ಅಂಬೇಡ್ಕರ್ ಭವನದಲ್ಲಿ ಛಲವಾದಿ ಮಹಾಸಭಾದ ಚಾಮರಾಜನಗರ ಜಿಲ್ಲಾ ಸಮಿತಿ ವತಿಯಿಂದ ನಡೆದ ಛಲವಾದಿ ಮಹಾಸಭಾದ ಸಂಸ್ಥಾಪಕರ, ನಿವೃತ್ತ ಐಎಎಸ್ ಅಧಿಕಾರಿಯಾದ ಕೆ.ಶಿವರಾಂ ಅವರ 2ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪುಷ್ಪಾರ್ಚನೆ ಮಾಡಿ ಮಾತನಾಡಿದರು.
ನಾನೊಬ್ಬ ಛಲವಾದಿ ಅಧಿಕಾರಿ ಎಂದು ಹೇಳಿಕೊಂಡಂತಹ ಅಧಿಕಾರಿ ಕೆ.ಶಿವರಾಂ ಅವರು ಒಬ್ಬರೆ ಎಂದರೆ ತಪ್ಪಲಾಗರದು. ಅವರು ಕನ್ನಡದಲ್ಲಿ ಮೊಟ್ಟಮೊದಲ ಬಾರಿಗೆ ಐಎಎಸ್‌ ತೇರ್ಗಡೆ ಹೊಂದಿ ಜಿಲ್ಲಾಧಿಕಾರಿಯಾಗಿ ಅನೇಕ ಜಿಲ್ಲೆಗಳಲ್ಲಿ ಸೇವೆ ಸಲ್ಲಿಸಿದರು. ಸ್ವಯಂ ನಿವೃತ್ತಿ ಹೊಂದಿ ಛಲವಾದಿ ಮಹಾಸಭಾ ಕಟ್ಟಿಕೊಂಡು ಪ್ರತಿಜಿಲ್ಲಾ ಕೇಂದ್ರಗಳಲ್ಲಿ ಛಲವಾದಿ ಭವನಗಳನ್ನು ನಿರ್ಮಾಣ
ಮಾಡುವ ಚಿಂತನೆ ಹೊಂದಿದ್ದರು. ಅಂಬೇಡ್ಕರ್ ಅವರ ಮೀಸಲಾತಿ ಪ್ರಕಾರ ಅಧಿಕಾರ ಸೇರಿದಂತೆ ಎಲ್ಲವೂ ಸಿಗಬೇಕು ಎಂದು ಹೇಳಿಕೊಟ್ಟರು ಅದೇ ರೀತಿಯಲ್ಲಿ ಮಾಡಿದವರು ನಾವು ಅವರ ಹಾದಿಯಲ್ಲಿ ಸಾಗಿ ಮಹಾಸಭಾವನ್ಮು ಸಂಘಟನೆ ಮಾಡಬೇಕು. ಎಂದರು.
ಕಾರ್ಯಕ್ರಮದಲ್ಲಿ ಛಲವಾದಿ ಮಹಾಸಭಾದ ಜಿಲ್ಲಾಧ್ಯಕ್ಷ ಎನ್.ಕುಮಾರ್, ಗೌರವಾಧ್ಯಕ್ಷ ಶಿವನಂಜಯ್ಯ ರಾಮನಮುದ್ರ, ಮಾಜಿ ಅಧ್ಯಕ್ಷ ಕೆ.ಆರ್.ನಾರಾಯಣ್, ಮುಖಂಡರಾದ
ಎಲ್.ಮಹದೇವಯ್ಯ, ಶಿವಪ್ರಸಾದ್‌, ರಮೇಶ್, ಪರಮೇಶ್, ಸಿದ್ದರಾಜು, ಮಹಣಾಪುರ ನಾಗರಾಜು, ಕಿರಣ್, ಚಿದಾನಂದಮೂರ್ತಿ, ಚಂದ್ರು, ನಾಗರಾಜು, ಕಲಾವಿದ ಮಹದೇವು, ನಂಜರಾಜು, ಶಂಕರ್, ಮಂಜು, ಮಧುಪ್ರಸಾದ್, ನಂದೀಶ್, ಹಾಜರಿದ್ದರು.

Leave a Reply

Your email address will not be published. Required fields are marked *