- ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ನೂತನ ಪದಾಧಿಕಾರಿಗಳಿಗೆ ನೇಮಕಾತಿ ಪತ್ರ ವಿತರಣೆ ಸಮಾರಂಭ
- ಗಿಡನೆಟ್ಟು ಬರಾಟ್ಟು ಘೋಷಣೆಯೊಂದಿಗೆ ಗಿಡ ಹಂಚಿ ಸಾಲುಮರದ ತಿಮ್ಮಕ್ಕನ ಸ್ಮರಣೆ
ಚಾಮರಾಜನಗರ: ಕನ್ನಡತನ ಬೆಳೆಸಲು ಕನ್ನಡಿಗರು ಒಗ್ಗಟ್ಟಾಗಿ ಸೇರಬೇಕು ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯಾಧ್ಯಕ್ಷ ಕೆರೆ ಚಳುವಳಿ ರಮೇಶಗೌಡ ಕರೆ ನೀಡಿದರು
ನಗರದ ರೋಟರಿ ಭವನದಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ವತಿಯಿಂದ ವೇದಿಕೆಯ ನೂತನ ಪದಾಧಿಕಾರಿಗಳಿಗೆ ನೇಮಕಾತಿ ಪತ್ರ ವಿತರಣೆ ಮತ್ತು ಸಮಾಜಮುಖಿ ಚಿಂತಕರಿಗೆ ಸನ್ಮಾನ, ಗಿಡನೆಟ್ಟು ಬರಅಟ್ಟು ಘೋಷಣೆಯೊಂದಿಗೆ ವೃಕ್ಷಮಾತೆ ಸಾಲುಮರದ ತಿಮ್ಮಕ್ಕನವರ ನೆನಪಿಗಾಗಿ ಗಿಡಹಂಚಿಕ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಕನ್ನಡ ಮೇಲೆ ಹೊರ ರಾಜ್ಯದಿಂದ ಬಂದ ಅನ್ಯಭಾಷಿಕರು ಪ್ರತಿದಿನ ದಾಳಿ ಮಾಡುತ್ತಿದ್ದಾರೆ. ಕನ್ನಡಿಗರು ಒಗ್ಗಟಾಗಿ ಸೇರಿ ಕನ್ನಡ ನಾಡು, ನುಡಿ ರಕ್ಷಣೆ ಮಾಡಬೇಕಾಗಿದೆ. ಕನ್ನಡದ ಶ್ರೀಮಂತಿಕೆಗೆ, ಕನ್ನಡದ ಹಿರಿಮೆಗೆ, ಕನ್ನಡದ ಗರಿಮೆಗೆ, ಕನ್ನಡತನ ಬೆಳೆಸಲು ನಾವೆಲ್ಲರೂ ಒಗ್ಗಟಾಗಬೇಕಿದೆ ಎಂದರು.
ರಾಷ್ಟ್ರಕವಿ ಕುವೆಂಪು, ಡಾ. ರಾಜ್‌ಕುಮಾರ್ ಹಾಗೂ ಕನ್ನಡ ಚಳವಳಿಗಾರ ವಾಟಾಳ್‌ನಾಗರಾಜ್ ಅವರು ಕನ್ನಡ ಹೋರಾಟಗಾರರಿಗೆ ಪ್ರೇರಣೆಯಾಗಿದ್ದಾರೆ.
ಕಸ್ತೂರಿ ಕರ್ನಾಟಕ ಜನಪರ ವೇದಿಕೆಯು ರಾಜ್ಯದಲ್ಲಿ ಕಳೆದ 15 ವರ್ಷಗಳಿಂದ ನಾಡು, ನುಡಿ ಉಳಿವಿಗಾಗಿ 25 ಕ್ಕೂ ಹೆಚ್ಚು ಪಾದಾಯಾತ್ರೆಗಳು, 5 ಸಾವಿರ ಹೋರಾಟಗಳು, ಅನೇಕ ಬಾರಿ ಜೈಲುವಾಸ ಅನುಭವಿಸಲಾಗಿದೆ ಎಂದರು.
ಕುವೆಂಪು ಅವರು ತಮ್ಮ ಬರಹಗಳ ಮೂಲಕ ಕನ್ನಡಿಗರನ್ನು ಎದ್ದೇಳಿಸಿದರೆ ಡಾ.ರಾಜ್‌ಕುಮಾರ್ ಅವರು ತಮ್ಮ ಸಿನಿಮಾಗಳು, ಹಾಡಿನ ಮೂಲಕ ಕನ್ನಡಪರ ಹೋರಾಟಗಾರನ್ನು ಹುಟ್ಟುಹಾಕಿದರು. ವಾಟಾಳ್‌ನಾಗರಾಜ್ ತಮ್ಮ ಕನ್ನಡಪರ ವಿನೂತನ ಚಳವಳಿ ಮೂಲಕ ಕನ್ನಡ ಹೋರಾಟಗಾರರಿಗೆ ಶಕ್ತಿ ತುಂಬಿದ್ದರು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧ್ಯಕ್ಷ ಮಲ್ಲುಯರಗಂಬಳ್ಳಿ ಮಾತನಾಡಿ, ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯಾಧ್ಯಕ್ಷ ಕೆರೆ ಚಳುವಳಿಗಾರ ರಮೇಶ್ ಗೌಡ ಅವರ ಮಾರ್ಗದರ್ಶನದಲ್ಲಿ ಗಡಿಜಿಲ್ಲೆಯಾದ ಚಾಮರಾಜನಗರದಲ್ಲೂ ನಾಡು,ನುಡಿ,ಜಲ ಸಂರಕ್ಷಣೆ ಗಾಗಿ ಹೋರಾಟ ಮಾಡಿಕೊಂಡು ಬರಲಾಗಿದ್ದು, ಮುಂದಿನ ದಿನಗಳಲ್ಲಿ ಅವರ ಮಾರ್ಗದರ್ಶನ ದಲ್ಲಿ ಸಂಘಟನೆಯನ್ನು ಇನ್ನೂ ಸದೃಡವಾಗಿ ಕಟ್ಟಿ ಹೋರಾಟ ಮಾಡಲಾಗುವುದು ಎಂದರು.
ಸನ್ಮಾನ: ರಾಷ್ಟ್ರೀಯ ಮಟ್ಟದ ಖೋಖೋ ಪಂದ್ಯಾವಳಿಯಲ್ಲಿ ವಿಜೇತರಾದ ಚಂದನ್ ಕುಮಾರ್, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಯರಿಯೂರು ರಾಜಣ್ಣ, ಪ್ರಗತಿಪರ ರೈತ ಲಿಂಗರಾಜು ,ಯುವಸೇನೆ ಕರ್ನಾಟಕ ಸೇನೆ ಅಧ್ಯಕ್ಷ ನಮ್ಮನೆ ಪ್ರಶಾಂತ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ರಾಜ್ಯ ಉಪಾಧ್ಯಕ್ಷ ರಂಜಿತ್ ಗೌಡ, ಎಚ್.ಡಿ.ಕೋಟೆ ಜಿಲ್ಲಾಧ್ಯಕ್ಷ ಮಂಜು, ಉಪಾಧ್ಯಕ್ಷ ರಾಜೇಶ್, ಜಾನಪದ ಗಾಯಕ ಸ್ವಾಮಿ,
ಜಿಲ್ಲಾಧ್ಯಕ್ಷ ಮಲ್ಲು ಯರಗಂಬಳ್ಳಿ, ಉಪಾಧ್ಯಕ್ಷ ಶಬಾಜ್ ಷರೀಫ್, ಮಹೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್.ಮಹದೇವಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಮೋಹನ್ ಕುಮಾರ್, ಜಿಲ್ಲಾ ಸಹ ಕಾರ್ಯದರ್ಶಿ ಶಿವಮೂರ್ತಿ, ತಾಲೂಕು ಅಧ್ಯಕ್ಷ ಎಂ.ನಿಂಗಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದೇಶ್, ಪ್ರೇಮ,ಮಲ್ಲು, ಸಹ ಕಾರ್ಯದರ್ಶಿ ನಳಿನ್ ಕುಮಾರಿ, ಪ್ರೇಮಲತಾ, ಲೀಲಾವತಿ, ರಾಜೇಶ್ವರಿ, ನಾಗರಾಜು, ಸುಂದ್ರನಾಯಕ,ಮಹೇಶ್, ಅಯ್ಯೂಬ್ ಉಲ್ಲಾ ಷರೀಫ್ ಇತರರು ಹಾಜರಿದ್ದರು.