ಆತ್ಮರಕ್ಷಣೆಗಾಗಿ ಕರಾಟೆ ಕಲೆ ಅವಶ್ಯಕ : ಶ್ರೀನಿಧಿಕುದರ್

ಚಾಮರಾಜನಗರ : ಆತ್ಮರಕ್ಷಣೆಗೆ ಕರಾಟೆ ಕಲೆ ಸಹಕಾರಿಯಾಗಿದೆ ಎಂದು ಉದ್ಯಮಿ ಶ್ರೀನಿಧಿಕುದರ್ ಹೇಳಿದರು.
ನಗರದ ಸರ್ಕಾರಿ ಪೇಟೆ ಶಾಲಾವರಣದಲ್ಲಿ ನಡೆದ ಸೋಟೋಕಾನ್ ಸ್ಕೂಲ್ ಆಫ್ ಮಾರ್ಷಲ್‌ ಆರ್ಟ್ಸ್ ಇಂಡಿಯ ಚಾಮರಾಜನಗರ ವತಿಯಿಂದ ಕರಾಟೆ ಕಲರ್ ಬೆಲ್ಟ್ ಟೆಸ್ಟ್ ಕಾರ್ಯಕ್ರಮದಲ್ಲಿ  ಪ್ರಮಾಣಪತ್ರ ವಿತರಿಸಿ ಮಾತನಾಡಿದರು.
ಕರಾಟೆ ಜಪಾನ್‌ನಲ್ಲಿ ಹುಟ್ಟಿಕೊಂಡ ಒಂದು ಜನಪ್ರಿಯ ಆತ್ಮರಕ್ಷಣೆ ಸಮರ ಕಲೆಯಾಗಿದ್ದು, ಕರಾಟೆ ಎಂದರೆ ಜಪಾನಿ ಭಾಷೆಯಲ್ಲಿ ಖಾಲಿ ಕೈ ಎಂದು ಅರ್ಥ. ಯಾವುದೇ ಶಸ್ತ್ರಾಸ್ತ್ರಗಳಿಲ್ಲದೆ ಬರಿ ಕೈ, ಕಾಲು, ಮೊಣಕ್ಕೆ ಮತ್ತು ಮೊಣಕಾಲುಗಳನ್ನು ಬಳಸಿ ಎದುರಾಳಿಯ ವಿರುದ್ಧ ಹೋರಾಡುವ ಕಲೆ ಇದಾಗಿದ್ದು, ಇದು ಮಕ್ಕಳಲ್ಲಿ ಶಿಸ್ತು. ದೈಹಿಕ, ಮಾನಸಿಕವಾಗಿ ಸದೃಢಗೊಳಿಸಲು ಸಹಾಯ ಮಾಡುತ್ತದೆ ಎಂದರು.
ಎಂಇಟಿ ಅಂಗ್ಲಮಾಧ್ಯಮ ಶಾಲೆಯ ಮೊಹಮ್ಮದ್ ಅಜೀಂ, ನಾಗಮಾರ್ಷಲ್ ಕರಾಟೆ ಸಂಸ್ಥೆ ಸೋಸ್ಲೆ ಸಿದ್ದರಾಜು ಮಾತನಾಡಿದರು.
ಕಾರ್ಯಕ್ರಮದಲ್ಲಿ ವಕೀಲ ಏಹ್ಸಾನ್ ಜಾವಿದ್,   ಕುಮಾರ್ ಚಿಕ್ಕಹೊಳೆ, ಗ್ಯ್ರಾಂಡ್ ಮಾಸ್ಟರ್ ನಾಗರಾಜು ಜಟ್ಟಿ, ಸೆನ್ಸಾಯ್ ಗಳಾದ ಗಣೇಶ ಮೂರ್ತಿ, ಎಂ.ನಾಗೇಂದ್ರ, ಜೀತೇಶ್, ರವೀಶ್, ನಾಗಾಭರಣ, ಫಾರ್ಖಾನ್ ಪಾಷ, ರೆಹಾನ್ ಹಾಗೂ ಕ್ರೀಡಾಪಟುಗಳು ಭಾಗವಹಿಸಿದ್ದರು

Leave a Reply

Your email address will not be published. Required fields are marked *