ಚಾಮರಾಜನಗರ: ನಗರದ ಸಮೀಪದಲ್ಲಿರುವ ಕರಿನಂಜನಪುರ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಸಿ. ಬಸವಣ್ಣ, ಉಪಾಧ್ಯಕ್ಷರಾಗಿ ಎಂ. ವಿರೂಪಾಕ್ಷ ಅವರು ಗುರುವಾರ ಅವಿರೋಧವಾಗಿ ಆಯ್ಕೆಯಾದರು.

ಸಂಘದ ಕಚೇರಿ ಸಭಾಂಗಣದಲ್ಲಿ ನಡೆದ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಸವಣ್ಣ, ಉಪಾಧ್ಯಕ್ಷ ಸ್ಥಾನಕ್ಕೆ ವಿರೂಪಾಕ್ಷ ಇವರಿಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಯಾಗಿದ್ದ ಸಹಕಾರ ಅಭಿವೃದ್ದಿ ಅಧಿಕಾರಿ ಹೇಮಂತ್‍ಕುಮಾರ್ ಅಧಿಕೃತವಾಗಿ ಘೋಷಣೆ ಮಾಡಿದರು.
ನೂತನ ಅಧ್ಯಕ್ಷ ಸಿ. ಬಸವಣ್ಣ, ಉಪಾಧ್ಯಕ್ಷ ವಿರೂಪಾಕ್ಷ ಅವರು ಅಧಿಕಾರ ಸ್ವೀಕರಿಸಿ ಮಾತನಾಡಿ, ಸಂಘದ ಎಲ್ಲಾ ನಿರ್ದೇಶಕರು ಒಮ್ಮತದಿಂದ ನಮ್ಮನ್ನು ಆಯ್ಕೆ ಮಾಡಿರುವುದಕ್ಕೆ ಅಭಾರಿಯಾಗಿದ್ದೇವೆ. ಮುಂದಿನ ದಿನಗಳಲ್ಲಿ ಎಲ್ಲ ನಿರ್ದೇಶಕರ ಸಹಕಾರದೊಂದಿಗೆ ಸಂಘವನ್ನು ಬಲಿಷ್ಟವಾಗಿ ಕಟ್ಟು ಜೊತೆಗೆ ಹಾಲು ಉತ್ಪಾದಕರಿಗೆ ಸವಲತ್ತುಗಳನ್ನು ಕಲ್ಪಿಸಲು ಶ್ರಮಿಸೋಣ, ಕರಿನಂಜನಪುರ ಡೇರಿಯನ್ನು ಮಾದರಿ ಸಂಘವನ್ನಾಗಿ ಮಾಡಲು ಎಲ್ಲರು ಸಲಹೆ, ಸಹಕಾರ ಮತ್ತು ಮಾರ್ಗದರ್ಶನ ನೀಡಬೇಕು ಎಂದರು.
ಸಭೆಯಲ್ಲಿ ನೂತನ ನಿರ್ದೇಶಕರಾದ ಕೆ.ಎನ್. ಕುಮಾರಸ್ವಾಮಿ, ಸೋಮಣ್ಣ, ಕೆ.ಪಿ. ರೇಚಪ್ಪ, ನಾಗೇಂದ್ರ, ಮಹದೇವಪ್ಪ, ಸ್ವಾಮಿ, ಗುರುಸ್ವಾಮಿ, ಜಗದೀಶ್, ಸುಂದ್ರಮ್ಮ, ರೂಪ, ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೃಷಬೇಂದ್ರ, ನೌಕರರಾದ ಬಿ. ಮಹೇಂದ್ರ, ನಂಜುಂಡ ಇತರರು ಇದ್ದರು.