ಕರ್ನಾಟಕದ ಆದರ್ಶ ರಾಜಕಾರಣಿ ಬಿ.ರಾಚಯ್ಯ : ಎಂ.ಶಿವಕುಮಾರ್

ಚಾಮರಾಜನಗರ:  ಮಾಜಿ ರಾಜ್ಯಪಾಲರಾದ  ದಿವಂಗತ ಬಿ.ರಾಚಯ್ಯನವರು ರಾಜ್ಯ ಕಂಡ ಅತ್ಯುತ್ತಮ ಆದರ್ಶ ರಾಜಕಾರಣಿಯಾಗಿದ್ದು, ಅವರಿಗೆ ಮುಖ್ಯಮಂತ್ರಿ ಆಗುವ ಎಲ್ಲ ಅವಕಾಶ ಇತ್ತು ಎಂದು ವಿಧಾನ‌ ಪರಿಷತ್ತು ಸದಸ್ಯರಾದ ಶಿವಕುಮಾರ್ ಹೇಳಿದರು.
ತಾಲೂಕಿನ ಆಲೂರಿನ  ಚಿರಶಾಂತಿಧಾಮದಲ್ಲಿ ನಡೆದ ದಿವಂಗತ ಗೌರಮ್ಮರವರ ಮೊದಲನೇ ವರ್ಷದ ಹಾಗೂ ಮಾಜಿ ರಾಜ್ಯಪಾಲ ದಿವಂಗತ ಬಿ.ರಾಚಯ್ಯರವರ 26ನೇ ವರ್ಷದ ಸಂಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರ ಸಮಾಧಿಗೆ
ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿ  ಸ್ಮಾರಕದಲ್ಲಿ ಅವರ ಛಾಯಾಚಿತ್ರಗಳನ್ನು ವೀಕ್ಷಿಸಿ ಮಾತನಾಡಿದರು.
50 ವರ್ಷಗಳಿಗೂ ಹೆಚ್ಚು ಕಾಲ ರಾಜಕಾರಣಿದಲ್ಲಿದ್ದ ಬಿ.ರಾಚಯ್ಯನವರು ದೇಶಕ್ಕೆ ಕಂಡ ಅತ್ಯುತ್ತಮ ರಾಜಕಾರಣಿಯಾಗಿದ್ದರು. ಅವರ ಸಾರ್ವಜನಿಕ ಜೀವನ ನಮ್ಮಂತಹ ಯುವ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ.ಮೈಸೂರು ಹಾಗೂ ಚಾಮರಾಜನಗರ ಭಾಗದಲ್ಲಿ  ಅವರ ಮಾಡಿರುವ ಜನಪರ ಕೆಲಸಗಳು ಇನ್ನೂ ಜೀವಂತವಾಗಿವೆ ಸಚಿವರಾಗಿ ರಾಜ್ಯಾದ್ಯಂತ ಪ್ರವಾಸಮಾಡಿ ಉತ್ತಮ ಕಾರ್ಯಕ್ರಮ ನೀಡುವ ಮೂಲಕ ಜನಾನುರಾಗಿ ರಾಜಕಾರಣಿಯಾಗಿದ್ದರು. ಅವರ ವಹಿಸಿಕೊಂಡ ಖಾತೆಗಳನ್ನು ಸಮರ್ಥವಾಗಿ ನಿಭಾಯಿಸಿ ಜನರಿಗೆ ಅನುಕೂಲ‌ ಮಾಡಿಕೊಟ್ಟಿದ್ದರು . ಅವರ ಸೇವೆ, ಜನಪ್ರಿಯತೆಗೆ ಮುಖ್ಯಮಂತ್ರಿ ಆಗುವ ಅರ್ಹತೆ ಇತ್ತು ಆದರೆ ನಾನಾ ಕಾರಣಗಳಿಂದ ಅವಕಾಶ ತಪ್ಪಿತು.ಇದುವರೆಗೂ ದಲಿತ ಮುಖ್ಯಮಂತ್ರಿ ಆಗಲಿಲ್ಲ ನೋವು ಇದೆ ಎಂದರು.
ರಾಜಕಾರಣದ ಜೊತೆಗೆ ಸಾರ್ವಜನಿಕ ಜೀವನದಲ್ಲಿ  ಸಹ ಸರಳರಾಗಿದ್ದರು. ಒಬ್ಬ ಶುದ್ದಹಸ್ತರು ರಾಜಕಾರಣಿ ಆಗಿದ್ದರು. ಅವರ  ಹಾದಿಯಲ್ಲಿ ಅವರ ಪುತ್ರರಾದ ಎ.ಆರ್.ಕೃಷ್ಣಮೂರ್ತಿ ಸಹೋದರ ಸಾಗುತ್ತಿದ್ದಾರೆ. ರಾಚಯ್ಯನವರ ತುಂಬ ಕುಟುಂಬ ನೋಡಿದರೆ ತುಂಬಾ ಸಂತಸವಾಗುತ್ತದೆ‌ ಎಂದರು.
ಬಿ.ರಾಚಯ್ಯನವರ ಪುತ್ರ, ಕೊಳ್ಳೇಗಾಲ ಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ಪೂಜ್ಯ ತಂದೆಯವರಾದ ರಾಚಯ್ಯನವರ 26 ನೇ ಸಂಸ್ಮರಣೆ ಹಾಗೂ ತಾಯಿಯವರಾದ ಗೌರಮ್ಮನವರ ಪ್ರಥಮ ವರ್ಷದ ಪುಣ್ಯ ಸ್ಮರಣೆಯನ್ನು ಏರ್ಪಡಿಸಿದ್ದು, ಅವರ ಅಭಿಮಾನಿಗಳು, ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿರುವುದು ಅವರ ಜನಪ್ರಿಯತೆ ಗೆ ಸಾಕ್ಷಿಯಾಗಿದೆ. ಅವರ ಮಕ್ಕಳಾದ ‌ನಾವು ಅವರ ಹಾದಿ, ಮಾರ್ಗದರ್ಶನ ದಲ್ಲಿ ಸಾಗುವ ಮೂಲಕ  ನಿಮ್ಮೆಲ್ಲರ ಪ್ರೀತಿ, ವಿಶ್ವಾಸಕ್ಕೆ ಅಭಾರಿಯಾಗಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಜಿ.ಪಂ.ಮಾಜಿ ಸದಸ್ಯ ಆರ್.ಬಾಲರಾಜು,  ಎ.ಆರ್.ಪ್ರಭಾವತಿ,  ವೇದಾವತಿ, ಉಮಾವತಿ, ಆರತಿ, ತ್ರಿವೇಣಿ,  ಮಾಜಿ ಸಚಿವ
ಬಿ.ಬಿ. ಲಿಂಗಯ್ಯ, ನಿವೃತ್ತ ಅಧಿಕಾರಿಗಳಾದಪುಟ್ಟಮಾದಯ್ಯ,ನಿವೃತ್ತ ನಿರ್ದೇಶಕವೆಂಕಟೇಶ್, ಮಂಜುಳ ಕೃಷ್ಣಮೂರ್ತಿ, ವಿಜಯಲಕ್ಷ್ಮಿ ಬಾಲರಾಜು
  ಶ್ರೀವರ್ಧನ್, ರೋಷಿಣಿ ಪ್ರದೀಪ್ ಕುಮಾರ್,  ನಿವೃತ್ತ ಐಪಿಎಸ್ ಅಧಿಕಾರಿ ಬೋಳಯ್ಯ, ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಜಿ.ಪಂ. ಮಾಜಿ  ಅಧ್ಯಕ್ಷ ಎಂ.ರಾಮಚಂದ್ರ,ಉಪಾಧ್ಯಕ್ಷರಾದ ಅಯ್ಯನಪುರ ಶಿವಕುಮಾರ್, ಕೇತಮ್ಮ, ಯೋಗೇಶ್,  ಸದಸ್ಯರಾದ ಕೊಪ್ಪಾಳಿಮಹದೇವನಾಯಕ, ಕೆರೆಹಳ್ಳಿ ‌ನವೀನ್, ಎಸ್.ಸೋಮನಾಯಕ, ಕೆ.ಪಿ.ಸದಾಶಿವಮೂರ್ತಿ ಕಮಲ್, ಲಕ್ಷ್ಮೀಪುಟ್ಟಸ್ವಾಮಿ, ಚೂಡಾ ಅಧ್ಯಕ್ಷ ಮಹಮ್ಮದ್ ಅಸ್ಹರ್, ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷರಾದ ತೋಟೇಶ್, ಗುರುಸ್ವಾಮಿ, ಪ್ರಭುಪ್ರಸಾದ್, ಹೊಂಗನೂರು ಚಂದ್ರು, ಚಾಮುಲ್ ಅಧ್ಯಕ್ಷ ಶಿವಕುಮಾರ್, ನಿರ್ದೇಶಕ ರೇವಣ್ಣ, ಹೊಂಗನೂರು ನಂಜಯ್ಯ,  ಪು.ಶ್ರೀನಿವಾಸನಾಯಕ, ದಲಿತ ಮುಖಂಡ ವೆಂಕಟರಮಣಸ್ವಾಮಿ ಪಾಪು, ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಕೆ.ರವಿಕುಮಾರ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಚ್.ವಿ.ಚಂದ್ರು, ಮುಖಂಡ ಕಂದಹಳ್ಳಿ ನಂಜುಂಡಸ್ವಾಮಿ,  ‌ಮಹದೇವಪ್ರಸಾದ್, ಚಿನ್ನುಮುತ್ತು, ಅರ್.ಎಂ.ಸ್ವಾಮಿ, ನಾಗೇಂದ್ರ, ಕೋಡಿ ಉಗನೆಮಂಜು, ಆರ್.ಮಹದೇವು, ಗೌಡಿಕೆ ಶಿವಪ್ಪ ರವೀಶ್, ಶಮಿತ್, ಸೋಮು, ನಂಜೇಗೌಡ, ಮಾಂಬಳ್ಳಿ ನಂಜುಂಡಸ್ವಾಮಿ, ರೋಟರಿ ಅಧ್ಯಕ್ಷ ಕಾಗಲವಾಡಿ ಚಂದ್ರು, ಚಿಕ್ಕಮಹದೇವು, ಆಲೂರು ಮಲ್ಲಣ್ಣ , ಹೊಂಗನೂರು ಚೇತನ್,  ಕುಟುಂಬ ವರ್ಗ.ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *