- ಜಿಲ್ಲಾ ಮಟ್ಟದ ಮುಖಂಡರು ಮತ್ತು ಕಾರ್ಯಕಾರಿ ಸಮಿತಿ ಪದಾಧಿಕಾರಿಗಳ ಸದಸ್ಯತ್ವ ಅಭಿಯಾನ
ಚಾಮರಾಜನಗರ: ಸಚಿವರಾದ ಕೆ.ಎಚ್.ಮುನಿಯಪ್ಪ ಅವರು ಸಮುದಾಯದ ಹಿತಕ್ಕಾಗಿ ಕರ್ನಾಟಕ ಮಾದರಮಹಸಭಾ ಹುಟ್ಟುಹಾಕಿದ್ದಾರೆ. ಇದರಿಂದ ಮುಂದಿನ ದಿನಗಳಲ್ಲಿ ಸಮುದಾಯಕ್ಕೆ ಅನುಕೂಲವಾಗಲಿದೆ ಎಂದು ಮಾಜಿ ಸಚಿವ ಕೋಟೆ ಎಂ.ಶಿವಣ್ಣ ಹೇಳಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ ಕರ್ನಾಟಕ ಮಾದರ ಮಹಾಸಭಾದ ಜಿಲ್ಲಾ ಮಟ್ಟದ ಮುಖಂಡರು ಮತ್ತು ಕಾರ್ಯಕಾರಿ ಸಮಿತಿ ಪದಾಧಿಕಾರಿಗಳ ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಕರ್ನಾಟಕ ಮಾದರ ಮಹಾಸಭಾಯು ಯಾವುದೇ ಪಕ್ಷಕ್ಕೆ ಸೇರಿದ್ದು ಅಲ್ಲ. ಸಮುದಾಯದ ಎಲ್ಲ ಪಕ್ಷದ ನಾಯಕರು, ಮುಖಂಡರು ಸೇರಿ ಸ್ಥಾಪಿಸಿದ್ದಾರೆ. ಸುಮಾರು 10 ವರ್ಷಗ ಹಿಂದೆ ಬೆಂಗಳೂರಿನಲ್ಲಿ ಮಾಜಿ ಸಚಿವರಾದ ಎ.ನಾರಾಯಣಸ್ವಾಮಿ, ಗೋವಿಂದ್‌ಕಾರ್‌ಜೋಲ್, ನಾವು ಡಾ.ತಿಮ್ಮಯ್ಯ, ಕೆ.ಎಚ್.ಮುನಿಯಪ್ಪನವರು ಸೇರಿಕೊಂಡು ಕರ್ನಾಟಕ ಮಾದರ ಮಹಾಸಭಾ ಹುಟ್ಟುಹಾಕಿ ಸರ್ವಾನುಮತದಿಂದ ಕೆ.ಎಚ್.ಮುನಿಯಪ್ಪ ಅವರನ್ನು ಅಧ್ಯಕ್ಷರಾಗಿ ಮಾಡಲಾಯಿತು. ಅನೇಕ ಕಾರಣಗಳಿಂದ ಚಾಲನೆ ಸಿಕ್ಕಿರಲಿಲ್ಲ. ಕಳೆದ ಒಂದು ವರ್ಷದಿಂದಿಚಗೆ ಕೆ.ಎಚ್.ಮುನಿಯಪ್ಪ ಅವರು, ದೊಡ್ಡ ಮನಸ್ಸು ಮಾಡಿ ಮಾದರ ಮಹಾಸಭಾ ಹುಟ್ಟು ಹಾಕಿದ್ದು, ಎಲ್ಲ ಪಕ್ಷದವರನ್ನು ಸೇರಿಸಿಕೊಂಡು ಮಾದರ ಮಹಾಸಭಾ ಪಕ್ಷಾತೀತವಾಗಿ ಕಟ್ಟಲು ಹೊರಟಿದ್ದಾರೆ ಎಂದರು.
ಸಮುದಾಯದ ಶ್ರೀಗಳ ಆಶೀರ್ವಾದ ಸಂಪೂರ್ಣವಾಗಿ ಇದ್ದೆ. ನನ ತುಂಬಾ ಸಂತಸವಾಗಿರುವುದು ಎನಪ್ಪ ಎಂದರೆ ಕೆ.ಹೆಚ್.ಮುನಿಯಪ್ಪ ಅವರು ಬೆಂಗಳೂರಿನಲ್ಲಿ ಇಡೀ ರಾಜ್ಯಕ್ಕೆ ಸಂಬಂಧಪಟ್ಟ ರೀತಿಯಲ್ಲಿ ಒಂದು ಕಚೇರಿ ಮಾಡಿದರೆ, ಮುಂದಿನ ದಿನಗಳಲ್ಲಿ ಸಮುದಾಯದ ಬಗ್ಗೆ ಐಎಎಸ್ ತರಬೇತಿ, ಶೈಕ್ಷಣಿಕ ತರಬೇತಿ ನೀಡಲು ಚಿಂತನೆ ಮಾಡಿದ್ದಾರೆ ಜೊತೆಗೆ ನಾವು ಸೇರಿದಂತೆ 50 ಮಂದಿ ಸದಸ್ಯರನ್ನು ಮಾಡಿ ಒಂದೊಂದು ಜಿಲ್ಲೆಯನ್ನು ನೀಡಿ ಸಂಘಟನೆ ಮಾಡುವಂತೆ ಹೇಳಿದ್ದಾರೆ. ಅದರಂತೆ ನಾನು ಕೂಡ ಚಾಮರಾಜನಗರ ಜಿಲ್ಲೆಯನ್ನು ಸಂಘಟನೆ ಮಾಡಲು ಸಹಕರಿಸುತ್ತೇನೆ.. ತಾಲೂಕು, ಜಿಲ್ಲಾ ಸಮಿತಿ ಮಾಡಬೇಕಿದೆ ಇದರಿಂದ ಸಮುದಾಯಕ್ಕೆ ಮುಂದಿನ ದಿನಗಳಲ್ಲಿ ಅನುಕೂಲವಾಗುವುದರಿಂದ ಸಮುದಾಯ ಮುಖಂಡರು ಭಿನ್ನಾಭಿಪ್ರಾಯಬಿಟ್ಟು ಮಾದರ ಮಹಾಸಭಾದ ಸಂಘಟನೆ ಮಾಡುವುದು ನಮ್ಮೆಲ್ಲರ ಕರ್ವತ್ಯವಾಗಿದೆ. ಕರ್ನಾಟಕ ಮಾದರ ಮಹಾಸಭಾದ
ಚಾಮರಾಜನಗರ ಜಿಲ್ಲಾ ಉಸ್ತುವಾರಿಯಾಗಿ ಆರ್.ಧರ್ಮಸೇನಾ ಅವರನ್ನು ನೇಮಿಸಲಾಗಿದೆ ಅವರೊಂದಿಗೆ ನಾನು ಜೊತೆಯಾಗಿ ಜಿಲ್ಲೆಯಲ್ಲಿ ಸಂಘಟನೆ ಮಾಡಲು ಸಹಕರಿಸುತ್ತೇನೆ ಎಂದರು.
ಕರ್ನಾಟಕ ಮಾದರ ಮಹಾಸಭಾದ
ಚಾಮರಾಜನಗರ ಜಿಲ್ಲಾ ಉಸ್ತುವಾರಿ ಆರ್.ಧರ್ಮಸೇನಾ ಮಾತನಾಡಿ, ಕರ್ನಾಟಕ ಮಾದರ ಮಹಾಸಭಾಕ್ಕೆ ಜಿಲ್ಲೆಯಲ್ಲಿ 5 ಸಾವಿರ ಸದಸ್ಯತ್ವ ಮಾಡಬೇಕಾಗಿರುವುದ್ದರಿಂದ ಪ್ರತಿ ಗ್ರಾಮದಲ್ಲಿ 45 ಮಂದಿ ಸದಸ್ಯತ್ವ ಮಾಡಿದಾಗ ಕೆಲಸ ಸುಲಭವಾಗಿ ಮಾಡಬಹುದು ಎಂದರು.
ಕಾರ್ಯಕ್ರಮದಲ್ಲಿ ಮಾದರ ಮಹಾಸಭಾದ ಜಿಲ್ಲಾಧ್ಯಕ್ಷ ಎಂ.ಶಿವಮೂರ್ತಿ, ಪ್ರಧಾನ ಕಾರ್ಯದರ್ಶಿ ಪಾಳ್ಯ ರಾಚಪ್ಪ, ಅರಕಲವಾಡಿ ನಾಗೇಂದ್ರ, ಹನೂರು ತಾಲೂಕು ಅಧ್ಯಕ್ಷ ಬೂದುಬಾಳು ಮಹದೇವು, ಬಾಲರಾಜು, ನಿಟ್ರೆ ಮಹದೇವ, ಸಿದ್ದಪ್ಪಾಜಿ, ಕೊಳ್ಳೇಗಾಲ ತಾಲೂಕು ಅಧ್ಯಕ್ಷ ಸೋಮು, ಚಾಮರಾಜನಗರ ತಾಲೂಕು ಅಧ್ಯಕ್ಷ ಎಂ.ರಾಜು, ಗುಂಡ್ಲುಪೇಟೆಅಧ್ಯಕ್ಷ ಅಂಕಹಳ್ಳಿ ಸಿದ್ದಯ್ಯ, ರವಿ, ರಾಚಯ್ಯ, ರಂಗರಾಜ್, ಕುಮಾರ್, ರಾಜಣ್ಣ, ನಾಗಯ್ಯ ಇತರರು ಹಾಜರಿದ್ದರು.