ಕೆಂಗಲ್ ಹನುಮಂತಯ್ಯ ಅವರ 118ನೇ ಜಯಂತೋತ್ಸವ ಕಾರ್ಯಕ್ರಮ
ಚಾಮರಾಜನಗರ : ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರು ಒಬ್ಬ ದಕ್ಷ ಆಡಳಿತಗಾರರಾಗಿ ಭವ್ಯ ವಿಧಾನಸೌಧ ನಿರ್ಮಿಸಿದರು ಎಂದು ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಡಾ.ಎಂ.ಬಿ
ಮಂಜೇಗೌಡ ಹೇಳಿದರು
ನಗರದ ಕೊಳದ ಬೀದಿಯ ಒಕ್ಕಲಿಗ ಸಮುದಾಯ ಭವನದಲ್ಲಿ ಚಾಮರಾಜನಗರ ಟೌನ್ ಒಕ್ಕಲಿಗ ಸಂಘದ ವತಿಯಿಂದ ನಡೆದ ಕರ್ನಾಟಕ ಏಕೀಕರಣ ರೂವಾರಿ, ವಿಧಾನಸೌಧ ನಿರ್ಮಾತೃ ಮಾಜಿ ಮುಖ್ಯ ಮಂತ್ರಿ ಕೆಂಗಲ್ ಹನುಮಂತ ಯ್ಯ ಅವರ 118ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಪುಷ್ಷಾರ್ಚನೆ ಮಾಡಿ ಮಾತನಾಡಿದರು. ಹೇಳಿದರು.
ರಷ್ಯಾದ ನಿಯೋಗವೊಂದರಲ್ಲಿ ವ್ಯಂಗ್ಯದ ಮಾತುಗಳಿಂದ ವಿಚಲಿತರಾದ ಅವರು, ದಕ್ಷಿಣ ಭಾರತದ ವಾಸ್ತುಶಿಲ್ಪ ಶೈಲಿಯಲ್ಲಿ ವಿಧಾನಸೌಧ ನಿರ್ಮಿಸುವ ಪಣತೊಟ್ಟು 1956ರಲ್ಲಿ ಪೂರ್ಣಗೊಳಿಸಿದರು ಎಂದರು.
ಆಧುನಿಕ ಶಿಲ್ಪಿಯಾಗಿದ್ದು, ಕರ್ನಾಟಕ ಏಕೀಕರಣದ ಪ್ರಮುಖ ರೂವಾರಿಯಾಗಿದ್ದರು. ಸ್ವಾತಂತ್ರ್ಯ ಹೋರಾಟಗಾರರಾಗಿ ದಕ್ಷ ಆಡಳಿತಗಾರರಾಗಿ, ಗ್ರಾಮೀಣಾಭಿವೃದ್ಧಿಯ ಹರಿಕಾರರಾಗಿ ಸೇವೆ ಸಲ್ಲಿಸಿದರು. ಕನ್ನಡನಾಡು ನಿರ್ಮಾಣದ ಕನಸು ಕಂಡಿದ್ದ ಅವರು ರೈಲ್ವೆ ಸಚಿವರಾಗುಯೂ ಉತ್ತಮ ಸೇವೆ ಸಲ್ಲಿಸಿದರು. ನಂತರ ಕಾನೂನು ಸಚಿವರಾಗಿಯೂ ದಕ್ಷ ಆಡಳಿತ ನೀಡಿದ್ದರು. ಅವರನ್ನು ಸ್ಮರಿಸಿಕೊಳ್ಳುವುದು ನಮ್ಮೆಲ್ಲರ ಆದ್ಯಕರ್ತವ್ಯವಾಗಿದೆ ಎಂದರು.
ತಾಲೂಕು ಒಕ್ಕಲಿಗರ ಸಂಘದ ಗೌರವಾಧ್ಯಕ್ಷ ಕೆ. ಪುಟ್ಟಸ್ವಾಮಿಗೌಡ ಮಾತನಾಡಿ, ಕೆಂಗಲ್ ಹನುಮಂತಯ್ಯ ಅವರು ನಿರ್ಮಿಸಿರುವ ಭವ್ಯವಿಧಾನಸೌಧ ದೇಶದಲ್ಲಿ ಎಲ್ಲೂ ಇಲ್ಲ. ಒಕ್ಕಲಿಗರು ರಾಜ್ಯವನ್ನಾಳುತ್ತೇವೆ ಎನ್ನುವುದು ಗಂಗರ
ಕಾಲದಿಂದಲ್ಲೂ ಬಂದಿದೆ. ತಲಕಾಡಿನ ಗಂಗರು ಕಾಲದಿಂದಲ್ಲೂ ಒಕ್ಕಲಿಗರು ಆಡಳಿತ ನಡಸುವ ಶಕ್ತಿ, ಸಾಮಾರ್ಥ್ಯ ಇದೆ ತದನಂತರ ನಾಡುಪ್ರಭ ಕೆಂಪೇಗೌಡರು ಸಮುದಾಯಕ್ಕೆ ಒಂದು ಶಕ್ತಿ ತುಂಬಿದ್ದರು. ಬೆಂಗಳೂರು ನಿರ್ಮಿಸಿ ಜಗತ್ತೆ ತಿರುಗಿ ನೋಡುವಂತೆ ಮಾಡಿದರು ಒಕ್ಕಲಿಗ ಸಮುದಾಯದ ಇತರ ಸಮುದಾಯಗಳ ಜೊತೆ ಹೊಂದಾಣಿಕೆಯಿಂದ, ಸಹಬಾಳ್ವೆಯಿಂದ ಇರುತ್ತದೆ ಎಂದರು.
ಕರ್ನಾಟಕ ಸೇನಾಪಡೆ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಮಾತನಾಡಿ, ಸರಳತೆ, ಪ್ರಾಮಾಣಿಕತೆಗೆ ಹೆಸರರಾಗಿದ್ದ ಕೆಂಗಲ್ ಹನುಮಂತಯ್ಯ ಅವರು ಆದರ್ಶ ರಾಜಕಾರಣಿಯಾಗಿದ್ದರು. ಕರ್ನಾಟಕದ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಒತ್ತು ನೀಡಿದರು. ಅಲ್ಲದೆ ಕರ್ನಾಟಕ ಏಕೀಕರಣದ ರೂವಾರಿಯಾಗಿದ್ದರು ಎಂದರು.
ಕಾರ್ಯಕ್ರಮದಲ್ಲಿ ಮೈಸೂರು ಮತ್ತು ಚಾಮರಾಜನಗರ ಒಕ್ಕಲಿಗರ ಸಂಘದ ನಿರ್ದೇಶಕ ಪಣ್ಯದಹುಂಡಿ ರಾಜು, ತಾಲೂಕು ಒಕ್ಕಲಿಗರ ಸಂಘದ ಉಪಾಧ್ಯಕ್ಷ ಚಿನ್ನುಮುತ್ತು, ಮಣಿಮಾಸ್ಟರ್, ಮಹೇಶ್
ಗೌಡ, ಟೌನ್ಅಧ್ಯಕ್ಷ ಸಿ.ಎನ್.ಮಹೇಶ್, ಪ್ರಧಾನ ಕಾರ್ಯದರ್ಶಿ ಅರುಣಕುಮಾರ್ಗೌಡ, ಖಜಾಂಚಿ ನಾಗೇಂದ್ರ ಗೌಡ, ರಘು, ಹೊಮ್ಮ ಶೇಖರ್, ಲೋಕೇಶ್, ಚಿನ್ನಸ್ವಾಮಿ, ನಾಗೇಂದ್ರ, ಎಲ್ ಐಸಿ ರಾಜು, ರಮೇಶ್, ಸುರೇಶ್ ಗೌಡ ಇತರರು ಹಾಜರಿದ್ದರು.