ಮಿಸ್ಟರ್ ಇಂಡಿಯಾ ಮುಡಿಗೇರಿಸಿಕೊಂಡ ಕೋಡಿಮೋಳೆ ಬಸವನಪುರದ ಹೇಮಂತ್

  • ಕೋಡಿಮೋಳೆ ಬಸವನಮರ ಗ್ರಾಮಸ್ಥರಿಂದ ಅಭಿನಂದನೆ

ಚಾಮರಾಜನಗರ:ಮಿಸ್ಟರ್ ಇಂಡಿಯಾ ಸ್ಪರ್ಧೆಯಲ್ಲಿ ಕೋಡಿಮೋಳೆ ಬಸವನಪುರದ ವಿದ್ಯಾರ್ಥಿ ಬಿ.ಆರ್. ಹೇಮಂತ್ ಮಿಸ್ಟರ್ ಇಂಡಿಯಾ ತನ್ನ ಮುಡಿಗೇರಿಸಿಕೊಂಡು ಅಂತಾರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆಯಾಗಿ ಜಿಲ್ಲೆಗೆ, ರಾಜ್ಯ, ದೇಶಕ್ಕೆ ಕೀರ್ತಿ ತಂದಿದ್ದಾನೆ.
ಗೋವಾದಲ್ಲಿ ಶನಿವಾರ ಫಿಟ್ನೆಸ್ ಇಂಟರ್‌ನ್ಯಾಷಿನಲ್ ಫೆಡರೇಷನ್ ವತಿಯಿಂದ ನಡೆದ ಮಿಸ್ಟರ್ ಇಂಡಿಯಾ ಸ್ಪರ್ಧೆಯಲ್ಲಿ ಹೇಮಂತ್ ಭಾಗವಹಿಸಿ ಪಿಜಿಕ್ಯೂ ಸಿನಿಯರ್ ಹಾಗೂ ಜೂನಿಯ‌ರ್ ಓವರಾಲ್ ಚಾಂಪಿಯನ್‌ಷಿಪ್ ತನ್ನಾದಾಗಿಸಿಕೊಂಡು ಮಿಂಚಿದ್ದಾರೆ. ಇವರು ಕೋಡಿಮೋಳೆ ಬಸವನಪುರ ಗ್ರಾಮದ ಬಿ.ಜಿ ರವಿಕುಮಾರ್ ಪುತ್ರ. ಎಂಬಿಎ ಪದವಿ ಮುಗಿಸಿ. ಮಂಗಳೂರಿನ ಜಿಮ್‌ ವೊಂದರಲ್ಲಿ ವರ್ಕೌಟ್ ಮಾಡುತ್ತಾ ಉದ್ಯೋಗಕ್ಕಾಗಿ ಪ್ರಯತ್ನ ಮಾಡುತ್ತಿದ್ದಾರೆ. ಈ ಸ್ಪರ್ಧೆಯಲ್ಲಿ ಮಿಸ್ಟರ್ ಇಂಡಿಯಾ ಮುಡಿಗೇರಿಸಿಕೊಂಡಿರುವುದು ತುಂಭಾ ಸಂತಸವಾಗಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ಗೆಲುವಿನ ನಗೆ ಬೀರುವ ಇಂಗಿತ ವ್ಯಕ್ತಪಡಿಸಿದರು.
ಅಭಿನಂದನೆ : ಮಿಸ್ಟರ್ ಇಂಡಿಯಾ ತನ್ನ ಮುಡಿಗೇರಿಸಿಕೊಂಡಿರುವ ಬಿ.ಆರ್. ಹೇಮಂತ್ ಅವರನ್ನು ಕಾಂಗ್ರೆಸ್
ಮುಖಂಡ ಜಡೇಸ್ವಾಮಿ, ಕೋಡಿಮೋಳೆ ಬಸವನಪುರ ಗ್ರಾಮಸ್ಥರು ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *