ಚಾಮರಾಜನಗರ: ಕನ್ನಡ ಸಾಹಿತ್ಯಕ್ಕೆ ಮೆರುಗು ನೀಡುವ ಮೂಲಕ ನಾಡು, ನುಡಿ, ಸಂಸ್ಕøತಿ ಹಾಗೂ ಭಾಷಾ ಬೆಳವಣಿಗೆಗೆ ರಾಷ್ಟ್ರಕವಿ ಕುವೆಂಪು ಅವರ ಕೊಡುಗೆ ಅಪಾರವಾಗಿದೆ ಎಂದು ಎಂ.ಎಸ್.ಐ.ಎಲ್. ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.
ನಗರದ ವರನಟ ಡಾ. ರಾಜ್‍ಕುಮಾರ್ ಜಿಲ್ಲಾ ರಂಗಮಂದಿರದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ರಾಷ್ಟ್ರ್ರಕವಿ ಕುವೆಂಪುರವರ ಜನ್ಮದಿನದ ಅಂಗವಾಗಿ ಆಯೋಜಿಸಲಾಗಿದ್ದ ‘ವಿಶ್ವಮಾನವ ದಿನಾಚರಣೆ’ ಕಾರ್ಯಕ್ರಮವನ್ನು ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕನ್ನಡದ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಕುವೆಂಪು ಅವರನ್ನು ಕನ್ನಡದ ಶ್ರೇಷ್ಠ ಕವಿ ಎಂದರೆ ತಪ್ಪಾಗಲಾರದು. ಕನ್ನಡ ನಾಡು ಅನೇಕ ಕವಿಗಳನ್ನು ಪಡೆದ ನಾಡಾಗಿದೆ. ಈ ಪೈಕಿ ಕುವೆಂಪು ಅವರು ಅಗ್ರಗಣ್ಯರಾಗಿದ್ದಾರೆ. ಕಥೆ, ಕವನ, ನಾಟಕ, ಕಾದಂಬರಿ, ವಿಮರ್ಶಾತ್ಮಕ ಲೇಖನಗಳ ಮೂಲಕ ಕನ್ನಡ ಸಾಹಿತ್ಯಕ್ಕೆ ಹೆಚ್ಚು ಮೆರಗು ನೀಡಿದ್ದಾರೆ. ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಕುವೆಂಪು ಪದ್ಮ ವಿಭೂಷಣ, ಕರ್ನಾಟಕರತ್ನ ಪ್ರಶಸ್ತಿ ಪಡೆದ ಕನ್ನಡದ ಮೊದಲಿಗರು ಆಗಿದ್ದಾರೆ. ಕುವೆಂಪು ಅವರ ವಿಶ್ವಮಾನವ ಸಂದೇಶ ಇಡೀ ಜಗತ್ತಿಗೆ ಮಾದರಿಯಾಗಿದೆ ಎಂದÀರು.
ಇತ್ತೀಚೆಗೆ ಕನ್ನಡ ಮಾತನಾಡುವವರು ಕಡಿಮೆಯಾಗುತ್ತಿದ್ದಾರೆ, ಇಂಗ್ಲಿμï ಕಲಿಯದಿದ್ದರೆ ಜೀವನವೇ ಇಲ್ಲ ಎಂಬುದು ಇಂದಿನ ಪರಿಸ್ಥಿತಿಯಾಗಿದೆ. ಆದರೆ ಮಾತೃಭಾಷೆಗೆ ಮೊದಲ ಆದ್ಯತೆ ನೀಡಬೇಕು. ಹಿಂದೆ ಕವಿಗಳು ಹಳೆಗನ್ನಡದಲ್ಲಿ ಸಾಹಿತ್ಯವನ್ನು ರಚಿಸಿದರೆ ಕುವೆಂಪು ಅವರು ಹೊಸಕನ್ನಡದಲ್ಲಿ ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ. ಶ್ರೀ ರಾಮಾಯಣ ದರ್ಶನಂ ಕೃತಿಯನ್ನು ಎಲ್ಲರಿಗೂ ತಿಳಿಯುವ ಹಾಗೆ ಅಚ್ಚ ಕನ್ನಡದಲ್ಲಿ ರಚಿಸಿದ ಕುವೆಂಪು ಅವರು ರೈತರು, ದೀನ ದಲಿತರ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು ಎಂದು ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.
ಚೂಡಾ ಅಧ್ಯಕ್ಷರಾದ ಮಹಮ್ಮದ್ ಅಸ್ಗರ್ ಮುನ್ನ ಅವರು ಮಾತನಾಡಿ ಕುವೆಂಪುರವರ ವಿಶ್ವ ಮಾನವ ಸಂದೇಶ ಮುಂದಿನ ಪೀಳಿಗೆಗೆ ಮಾದರಿಯಾಗಿದೆ. ಕುವೆಂಪುರವರು ಸಾಹಿತ್ಯದ ಮೂಲಕ ಜನಸಾಮಾನ್ಯರಿಗೆ ಬದುಕುವ ರೀತಿಯನ್ನು ತಿಳಿ ಹೇಳಿದ್ದಾರೆ. ಇಂತಹ ಮಹನೀಯರ ಆದರ್ಶ ವಿಚಾರಧಾರೆಗಳ ಕುರಿತು ವಿದ್ಯಾರ್ಥಿಗಳಿಗೆ ಪ್ರತಿ ಶಾಲಾ-ಕಾಲೇಜುಗಳಲ್ಲಿ ಅರಿವು ಮೂಡಿಸಬೇಕು ಎಂದು ಹೇಳಿದರು.
ಮುಖ್ಯ ಭಾಷಣ ಮಾಡಿದ ಜೆ.ಎಸ್.ಎಸ್ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಎನ್. ಮಹದೇವಸ್ವಾಮಿ ಅವರು ಭಾರತ ಕಂಡ ಶ್ರೇಷ್ಠ ಕವಿ, ಮಾನವತಾವಾದಿ ಕುವೆಂಪು ಅವರು ಇಡೀ ಜಗತ್ತಿಗೆ ವಿಸ್ತರಿಸಿದ ವಿಶ್ವ ಮಾನವ ಸಂದೇಶ ಸಾರ್ವಕಾಲೀಕವಾಗಿದೆ ಹಾಗೂ ಇಂದಿಗೂ ಪ್ರಸ್ತುತವಾಗಿದೆ. ಸಮಸಮಾಜದ ಪರಿಕಲ್ಪನೆಯೇ ವಿಶ್ವ ಮಾನವ ಸಂದೇಶದ ಮೂಲವಾಗಿದೆ. ಚಿಂತಕರು ಹಾಗೂ ಶ್ರೇಷ್ಠ ಬರಹಗಾರರಾಗಿದ್ದ ಕುವೆಂಪು ಅವರು ಸಾಹಿತ್ಯ ಕೃಷಿಯ ಮೂಲಕ ಉತ್ತಮ ಕೃತಿಗಳನ್ನು ರಚಿಸಿದ್ದು, ಅವು ಇಂದಿಗೂ ಜನಮಾನಸದಲ್ಲಿ ಚಿರಸ್ಥಾಯಿಯಾಗಿವೆ. ಕುವೆಂಪು ಅವರು ಜಮೀನ್ದಾರರ ಕುಟುಂಬದಿಂದ ಬಂದಿದ್ದರೂ ರೈತರು ಹಾಗೂ ದೀನ ದಲಿತರ ಪರವಾಗಿ ದನಿ ಎತ್ತಿದರು. ಸಾಹಿತ್ಯದ ಬಗ್ಗೆ ಅಪಾರ ಒಲವು, ಅಭಿಮಾನ, ತುಡಿತ ಹೊಂದಿದ್ದ ಕುವೆಂಪು ಕನ್ನಡ ಭಾಷೆಗೆ ವಿಶ್ವ ಮಾನ್ಯತೆ ತಂದುಕೊಟ್ಟರು ಎಂದು ಹೇಳಿದರು.
ಕನ್ನಡ ಸಾಹಿತ್ಯದಲ್ಲಿ ಕುವೆಂಪು ಅವರು 83 ಕೃತಿಗಳನ್ನು ರಚಿಸಿದ್ದಾರೆ. ಕುವೆಂಪು ಅವರನ್ನು ಪ್ರಕೃತಿ ಕವಿ, ಕನ್ನಡದ ವಡ್ರ್ಸ್‍ವರ್ಥ್ ಎಂದು ಕರೆಯಲಾಗುತ್ತದೆ. ಮಲೆನಾಡಿನಲ್ಲಿ ಹುಟ್ಟಿ ಅದರ ಸೊಗಡನ್ನು ಇಡೀ ನಾಡಿಗೆ ಪಸರಿಸಿದವರು ಕುವೆಂಪು. ಮಲೆಗಳಲ್ಲಿ ಮದುಮಗಳು, ಕಾನೂರು ಹೆಗ್ಗಡತಿ ಕಾದಂಬರಿಗಳ ಮೂಲಕ ಜನರಲ್ಲಿ ಪರಿಸರ ಪ್ರಜ್ಞೆಯನ್ನು ಜಾಗೃತಗೊಳಿಸಿ ಯುಗದ ಕವಿ, ಜಗದ ಕವಿಯಾದರು. ಕುವೆಂಪು ಅವರ ಸಾಹಿತ್ಯ ರಚನೆಗೆ ನಿಸರ್ಗ ಸೌಂದರ್ಯ ಪ್ರೇರಣೆಯಾಗಿತ್ತು. ತಮ್ಮ ಸಾಹಿತ್ಯ ಕೃಷಿಯನ್ನು ಇಡೀ ಸಾರಸ್ವತ ಲೋಕಕ್ಕೆ ಉಣಬಡಿಸಿದ ಕುವೆಂಪು ಈ ನೆಲದ ಸಂಸ್ಕøತಿ, ಮಣ್ಣಿನ ವಾಸನೆ ಅರಿತಿದ್ದರು. ಮನುಷ್ಯ-ಮನುಷ್ಯರ ಸಂಬಂಧಗಳನ್ನು ಬೆಸೆಯುವ ಕೊಂಡಿಯಾಗಿದ್ದ ಕುವೆಂಪು ಅವರ ಬದುಕು ಶತಶತಮಾನಗಳವರೆಗೂ ನಮ್ಮೆಲ್ಲರಿಗೂ ಮಾರ್ಗದರ್ಶನವಾಗಿದೆ ಎಂದರು.
ರೈತಗೀತೆ ರಚನೆ ಮೂಲಕ ಅನ್ನದಾತನ ಮಹತ್ವವನ್ನು ಸಾರಿದ ಕುವೆಂಪು ಅವರು ತಮ್ಮ ವೈಚಾರಿಕ ಸಾಹಿತ್ಯ ಚಿಂತನೆಗಳ ಮೂಲಕ ಸಮಾಜದಲ್ಲಿದ್ದ ಜಾತಿ-ಧರ್ಮಗಳ ಯಜಮಾನಿಕೆ ಸಂಸ್ಕøತಿ ನಶಿಸಲು ಕಾರಣವಾದರು. ಪ್ರತಿ ಮಗುವನ್ನು ವಿಶ್ವ ಮಾನವನನ್ನಾಗಿ ಮಾಡಲು ವಿದ್ಯೆ ಪ್ರಮುಖ ಅಸ್ತ್ರವಾಗಿದೆ. ಜ್ಞಾನಪೀಠ ಪ್ರಶಸ್ತಿ ಪಡೆದ ಶ್ರೀ ರಾಮಾಯಣ ದರ್ಶನಂ ಕೃತಿಯಲ್ಲಿ ಪ್ರತಿಯೊಂದು ಪಾತ್ರಗಳನ್ನು ಅಚ್ಚುಕಟ್ಟಾಗಿ ರಚಿಸಿದ ಕುವೆಂಪು ಎಲ್ಲಾ ಪಾತ್ರಗಳಿಗೂ ಜೀವ ತುಂಬಿದ್ದಾರೆ. ಸತಿ ಎಂದ ಕುವೆಂಪು ಅವರು ಮನುಜಮತ-ವಿಶ್ವಪಥ, ಸರ್ವೋದಯ ಪರಿಕಲ್ಪನೆಗಳನ್ನು ಇಡೀ ಜಗತ್ತಿಗೆ ಮನವರಿಕೆ ಮಾಡಿಕೊಟ್ಟರು ಎಂದು ಪ್ರಾಂಶುಪಾಲರಾದ ಡಾ. ಮಹದೇವಸ್ವಾಮಿ ಅವರು ತಿಳಿಸಿದರು.
ಇದೇ ವೇಳೆ ರಾಷ್ಟ್ರಕವಿ ಕುವೆಂಪುರವರ ಜನ್ಮದಿನದ ಅಂಗವಾಗಿ ವಿವಿಧ ಶಾಲಾ ಕಾಲೇಜುಗಳಲ್ಲಿ ‘ನನ್ನ ನೆಚ್ಚಿನ ಸಾಹಿತಿ’ ಕುರಿತು ಆಯೋಜಿಸಲಾಗಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಅಭಿನಂದನಾ ಪತ್ರ ವಿತರಿಸಲಾಯಿತು. ಅಲ್ಲದೆ ಜಿಲ್ಲೆಯ ಕಲಾವಿದರಿಗೆ ಮಾಸಾಶನ ಮಂಜೂರು ಪ್ರತಿಯನ್ನು ನೀಡÀಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ ಅವರು ಸಂವಿಧಾನದ ಪೀಠಿಕೆ ಬೋಧಿಸಿದರು.
ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿ ಡಾ. ಬಿ.ಟಿ. ಕವಿತಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಬಿ.ಎಸ್. ರಾಜು, ಕನ್ನಡ ಚಳವಳಿಗಾರರಾದ ಚಾ.ರಂ. ಶ್ರೀನಿವಾಸಗೌಡ, ಮುಖಂಡರಾದ ಮಹೇಶ್‍ಗೌಡ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.