ಬೆಂಗಳೂರಿನಲ್ಲಿ ನಡೆಯುವ ಒಳ ಮೀಸಲಾತಿ ಹೋರಾಟಕ್ಕೆ ಚಾಮರಾಜನಗರ ಜಿಲ್ಲೆಯಿಂದ ತೆರಳಿದ ಮುಖಂಡರು

  • ಒಳಮೀಸಲಾತಿ ಜಾರಿಗೆ ಬಸವನಪುರ ರಾಜಶೇಖರ ಆಗ್ರಹ
  • ಡಾ.ಬಿ.ಆರ್.ಅಂಬೇಡ್ಕರ್ ರವರ ಪುತ್ಥಳಿಗೆ ಮಾಲಾರ್ಪಣೆ

ಚಾಮರಾಜನಗರ: ಒಳಮೀಸಲಾತಿಯಿಲ್ಲದೆ ಉದ್ಯೋಗ ಭರ್ತಿ ಮಾಡುವ ಕಾಂಗ್ರೆಸ್ ಸರ್ಕಾರದ ಮಹಾದ್ರೋಹ ಖಂಡಿಸಿ ಒಳಮೀಸಲಾತಿ ಹೋರಾಟ ಸಮಿತಿಯಿಂದ ವತಿಯಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ  ಇಂದಿನಿಂದ ನಡೆಯುತ್ತಿರು
ಬೃಹತ್ ಪ್ರತಿಭಟನೆಗೆ  ಡಾ.ಬಾಬುಜಗಜೀವನರಾಂ ಸಂಘಟನೆಗಳ ಒಕ್ಕೂಟ ಗೌರವಾಧ್ಯಕ್ಷ ‌ಬಸವನಪುರ ರಾಜಶೇಖರ ಅವರ ನೇತೃತ್ವದಲ್ಲಿ ಸಮುದಾಯ ಮುಖಂಡರು ನಗರದಿಂದ ಬಸ್ಸಿನಲ್ಲಿ ತೆರಳಿದರು.

ನಗರದ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಗೆ ಮಾಲಾರ್ಪಣೆ ಮಾಡಿ , ಒಳಮೀಸಲಾತಿ ಜಾರಿಗೆ ಮಾಡಬೇಕು ಎಂದು ಘೋಷಣೆ ಕೂಗಿದರು.

ಹೋರಾಟದ ನೇತೃತ್ವ ವಹಿಸಿರುವ ಡಾ.ಬಾಬುಜಗಜೀವನರಾಂ ಸಂಘಟನೆಗಳ ಒಕ್ಕೂಟ ಗೌರವಾಧ್ಯಕ್ಷ ‌ಬಸವನಪುರ ರಾಜಶೇಖರ ಮಾತನಾಡಿ, ಒಳಮೀಸಲಾತಿಯಿಲ್ಲದೆ ಉದ್ಯೋಗ ಭರ್ತಿ ಮಾಡುವ ಕಾಂಗ್ರೆಸ್ ಸರ್ಕಾರದ ಮಹಾದ್ರೋಹ ಖಂಡಿಸಿ ಒಳಮೀಸಲಾತಿ ಹೋರಾಟ ಸಮಿತಿಯಿಂದ ವತಿಯಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ  ಇಂದಿನಿಂದ ನಡೆಯುತ್ತಿರು
ಬೃಹತ್ ಪ್ರತಿಭಟನೆಗೆ  ಜಿಲ್ಲೆಯಿಂದ ಸಾವಿರಕ್ಕೂ ಅಧಿಕ ಮುಖಂಡರು 20 ಬಸ್ಸಿನಲ್ಲಿ ಭಾಗವಹಿಸುತ್ತೇನೆ.

ಒಳ ಮೀಸಲಾತಿ ವಿಧೇಯಕವು ರಾಜ್ಯಪಾಲರ ಸಹಿ ಪಡೆದು ಅನುಮೋದನೆಗೊಂಡಿದೆ ಎಂದು ಸಂತೋಷ ಪಡುವ ಸಂದರ್ಭದಲ್ಲಿ ಒಳ ಮೀಸಲಾತಿ ಅನ್ವಯವಾಗದಂತೆ 56 ಸಾವಿರ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ ಎಂಬ ಮಾರ್ಚ್ 16ರ ಸಚಿವ ಸಂಪುಟದ ತೀರ್ಮಾನ ಸಂವಿಧಾನ ಮತ್ತು ಸಾಮಾಜಿಕ ನ್ಯಾಯಕ್ಕೆ ಬಗೆದ ಘೋರ ಅನ್ಯಾಯವಾಗಿದೆ. ಆ ಮೂಲಕ 35 ವರ್ಷಗಳ ಒಳ ಮೀಸಲಾತಿ ಹೋರಾಟಕ್ಕೆ ಮಹಾದ್ರೋಹ ಎಸಗಲಾಗಿದೆ. ಸರ್ಕಾರದ ಈ ತೀರ್ಮಾನವನ್ನು ಒಳ ಮೀಸಲಾತಿ ಹೋರಾಟಗಾರರು, ಸಾಮಾಜಿಕ ನ್ಯಾಯದ ಪರವಿರುವ ಪ್ರಜ್ಞಾವಂತರೆಲ್ಲರೂ ಒಕ್ಕೊರಲಿನಿಂದ ಉಗ್ರವಾಗಿ ಖಂಡಿಸುತ್ತೇವೆ .ಈ ಅನ್ಯಾಯಗಳನ್ನು ಇನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಪ್ರಜ್ಞಾವಂತರು ಮತ್ತು ಸಮುದಾಯ ಮಾಡು ಇಲ್ಲವೇ ಮಡಿ ಎಂಬ ಅಂತಿಮ ಹೋರಾಟಕ್ಕೆ ಕರೆ ನೀಡಿದೆ.ನಮ್ಮ ಹೋರಾಟಕ್ಕೆ ರಾಜ್ಯ ಸರ್ಕಾರ ಮಣಿದು ಕೂಡಲೇ ಒಳಮೀಸಲಾತಿ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಡಾ. ಬಾಬು ಜಗಜೀವನ್ ರಾಮ್ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಹೆಚ್. ಹೆಚ್ .ನಾಗರಾಜ್, . ಉಪಾಧ್ಯಕ್ಷರಾದ. ಹೆಚ್. ಮೂಡಳ್ಳಿ ಮೂರ್ತಿ ,ಬ್ಯಾಂಕ್ ಬಸವರಾಜು ಜಿಲ್ಲಾ ಉಪಾಧ್ಯಕ್ಷರು. ವೈ.ಎಸ್ ನಾಗರಾಜ್. ಪಾಪಣ್ಣ. ಬದನಗುಪ್ಪೆ ಮರಿಸ್ವಾಮಿ. ಯಜಮಾನ ಮಹದೇವಯ್ಯ. ಕೆಂಪಣ್ಣ. ಸಿ. ಚನ್ನಬಸವಯ್ಯ. ಪ್ರಧಾನ ಕಾರ್ಯದರ್ಶಿ. ಎಂ. ಶಿವಕುಮಾರ್. ಸಹ ಕಾರ್ಯದರ್ಶಿ. ಶಿವಕುಮಾರ್ ರಾಮಸಮುದ್ರ. ಮುಖಂಡರಾದ. ಯಜಮಾನ ಸಿದ್ದಪ್ಪಾಜಿ. ಅರಕಲವಾಡಿ ಮಹದೇವಯ್ಯ. ಕೆಸ್ತೂರುಮರಪ್ಪ,.ವೆಲ್ಡಿಂಗ್ ಲಿಂಗರಾಜು, ಜಯಶೀಲ. ವೆಂಕಟಯ್ಯ ಯುವ ಮುಖಂಡರಾದ ಆರ್.ಎನ್. ಶಿವಣ್ಣ. ಸುಂದರ. ಡೈರಿ ಲಿಂಗರಾಜು. ಬಸವನಪುರ ಮಹದೇವಸ್ವಾಮಿ. ಅರಕಲವಾಡಿ ಸಿದ್ದರಾಜು. ರಾಜು ಸಿ. ಮಹದೇವಸ್ವಾಮಿ. ಮಹೇಶ. ಮೂಡಳ್ಳಿ ಶಂಕರ, ಜಯರಾಜು. ಬಸವನಪುರ ಸತೀಶ್, ಪ್ರಸನ್ನ,. ರಾಜೇಶ, ಲಿಂಗರಾಜು,. ಸುರೇಶ ಉಗೇನದ ಹುಂಡಿ. ಶಿವಕುಮಾರ್, ಶಿವಕುಮಾರ್. ಇತರರು ಹಾಜರಿದ್ದರು.

Leave a Reply

Your email address will not be published. Required fields are marked *