ಸಂಸ್ಕಾರ ಕಲಿತು ಧರ್ಮದ ಬಗ್ಗೆ ಜಾಗೃತರಾಗಿ : ಶ್ರೀ ಸರ್ಪಭೂಷಣಸ್ವಾಮೀಜಿ

ಚಾಮರಾಜನಗರ: ವಿದ್ಯಾರ್ಥಿಗಳು ಶಿಕ್ಷಣ ಪಡೆಯುವುದರ ಜೊತೆಗೆ ಸಂಸ್ಕಾರ ಕಲಿತು ಧರ್ಮದ ಬಗ್ಗೆ ಜಾಗೃತರಾಗಿ ಪ್ರಗತಿಯತ್ತ ಮುನ್ನಡೆಯಬೇಕು ಎಂದು ಹರವೆ ಮಠಾಧ್ಯಕ್ಷರಾದ ಶ್ರೀ ಸರ್ಪಭೂಷಣಸ್ವಾಮೀಜಿ ತಿಳಿಸಿದರು.

ನಗರದ ಶ್ರೀ ಬಸವರಾಜಸ್ವಾಮಿಗಳ ಅನುಭವ ಮಂಟಪದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ವತಿಯಿಂದ ಶ್ರೀ ಡಾ. ರಾಜೇಂದ್ರಸ್ವಾಮಿಗಳು, ಅನಗಲ್ ಶ್ರೀ ಶಿವಕುಮಾರಸ್ವಾಮಿಗಳ ಜಯಂತೋತ್ಸೋವ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಜಗಜ್ಯೋತಿ ಬಸವೇಶ್ವರರು ಸ್ಥಾಪನೆ ಮಾಡಿದ ಲಿಂಗಾಯತ ವೀರಶೈವ ಧರ್ಮವು ಇತ್ತಿಚಿನ ದಿನಗಳಲ್ಲಿ ಅರಿವಿನ ಕೊರತೆಯಿಂದ ಹಿನ್ನಡೆಯಾಗುತ್ತಿದೆ. 12ನೇ ಶತಮಾನದಲ್ಲಿ ಭಕ್ತಿ ಭಂಡಾರಿ ಬಸವಣ್ಣ ಹಾಗೂ ಶರಣರು ನಮಗಾಗಿ ಲಿಂಗಾವಂತ ಧರ್ಮವನ್ನು ನೀಡಿದ್ದಾರೆ.

ಅದರ ಅಚಾರ, ವಿಚಾರಗಳು ಸಹ ನಮ್ಮ ಅಭಿವೃದ್ದಿಗೆ ಪೂರಕವಾಗಿದೆ. ಆದರೂ ಸಹ ನಮ್ಮ ಧರ್ಮದ ಬಗ್ಗೆ ತಾತ್ಸಾರ ಮನೋಭಾವನೆ ಸಲ್ಲದು, ನಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವ ಜೊತೆಗೆ ಧರ್ಮದ ಬಗ್ಗೆ ಜಾಗೃತಿ ಮೂಡಿಸಿ, ನಮ್ಮ ಸಮಾಜದ ಬಗ್ಗೆ ಹೆಮ್ಮೆ ಬರುವಂತೆ ಮಾಡಬೇಕು. ವಿದ್ಯಾರ್ಥಿಗಳಾದ ತಾವುಗಳ ಸಹ ಶಿಕ್ಷಣ ಪಡೆದರೆ ಸಾಲದು, ಧರ್ಮ ಜಾಗೃತಿ ಬೆಳೆಸಿಕೊಳ್ಳಬೇಕು. ನಮ್ಮ ತಂದೆ ತಾಯಿಗಳನ್ನು ಮಾತಿಗೆ ಬೆಲೆ ಕೊಡುವ ಜೊತೆ ಅವರನ್ನು ಸುಖವಾಗಿಡುವ ಪ್ರಯತ್ನ ನಿಮ್ಮದಾಗಬೇಕು. ಶಿಕ್ಷಣ ಮೌಲ್ಯ ಹಾಗೂ ಮಾನನೀಯತೆಯನ್ನು ಕಲಿಸುವ ಜೊತೆಗೆ ಧರ್ಮ ಜಾಗೃತಿಯನ್ನು ಮೂಡಿಸುತ್ತಿದೆ ಎಂದು ಶ್ರೀಗಳು ತಿಳಿಸಿದರು.

ಮರಿಯಾಲ ಮಠಾಧ್ಯಕ್ಷರಾದ ಶ್ರೀ ಇಮ್ಮಡಿ ಮುರುಘರಾಜೇಂದ್ರಸ್ವಾಮೀಜಿ ಮಾತನಾಡಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಮ್ಮ ಸಾಧನೆಯನ್ನು ನೋಡಿ ಪ್ರೋತ್ಸಾಹಿಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಾ ಬಂದಿದೆ. ಇಂಥ ಧರ್ಮ ಬಗ್ಗೆ ತಾವೆಲ್ಲರು ಋಣಿಗಳಾಗಿರಬೇಕು. ಇತರರಿಗೆ ಮಾದರಿಯಾಗಿ ಬೆಳೆಯಬೇಕು. ನಮ್ಮ ಧರ್ಮ, ಸಂಸ್ಕøತಿ, ಅಚಾರ ವಿಚಾರಗಳನ್ನು ಬಿಟ್ಟುಕೊಡಬಾರದು.

ಎಲ್ಲಾ ರಂಗದಲ್ಲಿಯು ನಮ್ಮದೇ ಧರ್ಮದ ಛಾಪು ಮೂಡಿಸುವ ಜೊತೆಗೆ ಅಭಿಮಾನವನ್ನು ಬೆಳೆಸಿಕೊಳ್ಳಬೇಕು. ಲಿಂಗಾಯತ ಮತ್ತು ವೀರಶೈವ ಧರ್ಮಕ್ಕೆ ನಾನು ಕಿಂಚಿತ್ತು ಅಪಚಾರ ಮಾಡುತ್ತಿಲ್ಲ. ಅದನ್ನು ಸಂರಕ್ಷಣೆ ಮಾಡುವ ಮೂಲಕ ಜಾಗೃತಿ ವಹಿಸುತ್ತೇನೆ ಎಂದು ಇಂದಿನಿಂದಲೇ ತಾವೆಲ್ಲರು ಪ್ರತಿಜ್ಞೆ ಮಾಡುವ ಮೂಲಕ ಅದರಂತೆ ನಡೆದುಕೊಳ್ಳಬೇಕು.

ಕಾರ್ಯಕ್ರಮದಲ್ಲಿ ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿಯಲ್ಲಿ ಶೇ. 90ಕ್ಕಿಂತ ಹೆಚ್ಚು ಅಂಕ ಪಡೆದ 170ಕ್ಕು ಹೆಚ್ಚು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಿ ಅಭಿನಂದಿಸಲಾಯಿತು.

ವೇದಿಕೆಯಲ್ಲಿ ನಗರ ಮಠಾಧ್ಯಕ್ಷರಾದ ಶ್ರೀ ಚನ್ನಬಸವಸ್ವಾಮೀಜಿ, ಜಿಲ್ಲಾಧ್ಯಕ್ಷ ಮೂಡ್ಲುಪುರ ನಂದೀಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ. ನಾಗೇಂದ್ರ, ತಾಲೂಕು ಅಧ್ಯಕ್ಷರಾದ ಹಂಗಳ ನಂಜಪ್ಪ. ಹೊಸೂರು ನಟೇಶ್, ಕೆ.ಎಂ. ಬಸವರಾಜಪ್ಪ, ಬಿ. ಮಹದೇವಪ್ರಸಾದ್, ಪುಟ್ಟಸುಬ್ಬಪ್ಪ, ರಾಜ್ಯ ಕಾರ್ಯಕಾರಿಣಿ ಸದಸ್ಯ ಸುಜೇಂದ್ರ, ಜಿಲ್ಲಾ ಉಪಾಧ್ಯಕ್ಷ ಜಿ.ಎಂ. ಪ್ರಭುಸ್ವಾಮಿ, ಬಿ. ರತ್ನಮ್ಮ, ಖಜಾಂಚಿ ಬಸವರಾಜು, ಕಾರ್ಯದರ್ಶಿ ಕೆ.ಎಂ. ಮಲ್ಲೇಶಪ್ಪ, ಲೋಕೇಶ್ ಕೆ.ಅರ್. , ವೀರಭದ್ರಸ್ವಾಮಿ, ಎನ್.ಆರ್. ಪುರುಷೋತ್ತಮ್, ಕಾಡಹಳ್ಳಿ ಮಧು, ನಿರಂಜನಮೂರ್ತಿ, ಪ್ರಮೋದ್, ರತ್ನಮ್ಮ, ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷೆ ವಸಂತಮ್ಮ, ಜೆಎಸ್‍ಎಸ್ ಪಿಆರ್‍ಓ ಆರ್.ಎಂ ಸ್ವಾಮಿ ಮೊದಲಧವರು ಇದ್ದರು.

Leave a Reply

Your email address will not be published. Required fields are marked *