ಚಿಕ್ಕಲೂರು ಜಾತ್ರೆ ಸರ್ಕಾರದ ಆಧೀನದಲ್ಲಿ ನಡೆಯಲಿ : ಎಲ್ ನಾಗಣ್ಣ ಅಗ್ರಹ

ಚಾಮರಾಜನಗರ: ಚಿಕ್ಕಲೂರ್ರು, ಕುರುಬನ ಕಟ್ಟ್ರೆ, ಕಪ್ಪಡಿ ಹಾಗೂ ಬೊಬ್ಬೆಗೌಡನ ಜಾತ್ರೆಗಳು ಸರ್ಕಾರದ ಅಧೀನದಲ್ಲಿ ನಡೆಸುವ ಮೂಲಕ ಅಲ್ಲಿನ ಜಾತ್ರೆಯಲ್ಲಿ ಬರುವ ಆದಾಯವನ್ನು ಸರ್ಕಾರ ಭಕ್ತರಿಗೆ ಮೂಲಸೌಲಭ್ಯಗಳನ್ನು ಕಲ್ಪಿಸಿಕೊಡಲು ಬಳಕೆ ಮಾಡಿಕೊಳ್ಳಲಿ ಎಂದು ಸರ್ಕಾರಿ ಅಧಿನಿಯಮಗಳ ಜಾರಿಗಾಗಿ ಕಾವಲು ಸಮಿತಿಯ ಅಧ್ಯಕ್ಷ ಎಲ್ ನಾಗಣ್ಣ ಒತ್ತಾಯಿಸಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ನಡೆದ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಚಿಕ್ಕಲೂರಿನ ಜಾತ್ರೆಯಲ್ಲಿ ನಡೆಯುತ್ತಿದ್ದ ಪ್ರಾಣಿಬಲಿ ವಿರುದ್ಧ ಪ್ರಾಣಿ ದಯಾ ಸಂಘದ ಸ್ವಾಮೀಜಿಯವರು ಘನ ಉಚ್ಚ ನ್ಯಾಯಾಲಯದಲ್ಲಿ 2017ರಲ್ಲಿ ಮಧ್ಯಂತರ ತಡೆಯಾಜ್ಞೆ ತಂದು ಅಧಿಕಾರಿಗಳ ಸಹಕಾರದೊಂದಿಗೆ ನಿμÉೀಧಿಸಿದ್ದಾರೆ. ಅಂದಿನಿಂದಲೇ ಈ ಜಾತ್ರೆಯು ಶಾಂತಿಯುತವಾಗಿ ನಡೆಯುತ್ತಾ ಬಂದಿದೆ ಆದರೂ ಈ ಜಾತ್ರೆಯು ಮುಜರಾಯಿ ಇಲಾಖೆಗೆ ಒಳಪಡದೆ ಖಾಸಗಿ ವ್ಯಕ್ತಿಗಳ ವಶದಲ್ಲಿದೆ. ಇದರಿಂದ ದೇವಸ್ಥಾನದ ಅಭಿವೃದ್ದಿಯಾಗುತ್ತಿಲ್ಲ. ಸಂಬಂಧಪಟ್ಟ ಇಲಾಖೆಗಳು ಕ್ರಮ ಜರುಗಿಸದೆ ಸುಮ್ಮನಿರುವುದು ಕಾನೂನಿಗೆ ವಿರುದ್ದವಾಗಿದೆ ಎಂದರು.

ಈ ದೇವಸ್ಥಾನಗಳ ವ್ಯಾಪ್ತಿಯಲ್ಲಿ ನಡೆಯುವ ಜಾತ್ರೆಗೆ ಸಕಲಮೂಲ ಸೌಲಭ್ಯಗಳನ್ನು ಸರ್ಕಾರ ವಹಿಸಿಕೊಳ್ಳುತ್ತಿದೆ. ಭಕ್ತಾಧಿಗಳಿಗೆ ಎಲ್ಲಾ ರೀತಿಯ ಸೌಕರ್ಯಗಳು ಸರ್ಕಾರವೇ ನೀಡುತ್ತಿದ್ದು, ಇನ್ನು ಅಲ್ಲಿ ಭಕ್ತರಿಂದ ಬರುವ ಆದಾಯವು ಖಾಸಗಿ ವ್ಯಕ್ತಿಗಳ ಪಾಲಾಗುತ್ತಿದೆ. ಇದು ತಪ್ಪಬೇಕು. ದೇವಸ್ಥಾನ ಅಭಿವೃದ್ದಿಗಾಗಿ ಸರ್ಕಾರ ಕೂಡಲೇ ಮುಜರಾಯಿ ಇಲಾಖೆಗೆ ಒಳಪಡಿಸಬೇಕು ಎಂದು ಎಲ್. ನಾಗಣ್ಣ ಆಗ್ರಹಿಸಿದರು.

ನಮ್ಮ ಜಿಲ್ಲೆಯ ಮಾಜಿ ರಾಜ್ಯಪಾಲರಾದ ಶ್ರೀ ಬಿ.ರಾಚಯ್ಯ ಅವರ ಕೊಡುಗೆ ನಮ್ಮ ಜಿಲ್ಲೆ ನಮ್ಮ ರಾಜ್ಯ ಹಾಗೂ ಹೊರರಾಜ್ಯಕ್ಕೂ ಅಪಾರವಾಗಿದೆ. ಜಿಲ್ಲಾ ಕೇಂದ್ರದಲ್ಲಿರುವ ಜೋಡಿ ರಸ್ತೆಗೆ ಬಿ.ರಾಚಯ್ಯ ಜೋಡಿ ರಸ್ತೆ ಎಂದು ನಾಮಕರಣ ಮಾಡುವ ಜೊತೆಗೆ ಈ ರಸ್ತೆಯ ಅಭಿವೃದ್ದಿಗೆ ಕೋಟ್ಯಾಂತರ ರೂ.ಗಳನ್ನು ಸರ್ಕಾರ ನೀಡಿದೆ. ಕ್ರಿಯಾ ಯೋಜನೆಯಲ್ಲಿಯೇ ಭುವನೇಶ್ವರಿ ವೃತ್ತದ ಬಳಿಕ ರಾಚಯ್ಯ ಅವರ ಪುತ್ಥಳಿ ನಿರ್ಮಾಣ ಹಾಗೂ ಸ್ವಾಗತ ಕಮಾನ್ ಅಳವಡಿಸಲು ನಗರಸಭೆಗೆ ಸೂಚನೆಯನ್ನು ನೀಡಲಾಗಿದೆ. ಆದರೆ, ಇನ್ನು ಕಾಮಗಾರಿ ನಡೆದಿಲ್ಲ.

ಡಲೇ ಬಿ. ರಾಚಯ್ಯ ಜೋಡಿ ರಸ್ತೆಯಲ್ಲಿ ರಾಚಯ್ಯ ಅವರ ಪುತ್ಥಳಿ ನಿರ್ಮಿಸಿ, ಸ್ವಾಗತ ಕಮಾನ್ ಅಳವಡಿಸಬೇಕೆಂಕು ಅವರು ನಗರಸಭೆ ಹಾಗೂ ಜಿಲ್ಲಾಡಳಿತವನ್ನು ಒತ್ತಾಯಿಸಿದರು.

Leave a Reply

Your email address will not be published. Required fields are marked *