ಚೆಸ್ಕಾಂ  ಕಚೇರಿಯಲ್ಲಿ ಲೈನ್‌ಮ್ಯಾನ್ ದಿವಸ  :ಆರೋಗ್ಯ ತಪಾಸಣೆ


ಚಾಮರಾಜನಗರ: ಲೈನ್ ಮ್ಯಾನ್ ದಿವಸ ಅಂಗವಾಗಿ  ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಯಿತು.
ನಗರದ ಕೆಬಿಇ ಕಚೇರಿಯ ಆವರಣದಲ್ಲಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ನಿಮಯತ ಚಾಮರಾಜನಗರ ವಿಭಾಗ,  ರೋಟರಿ ಸಂಸ್ಥೆ, ಜೆಎಸ್ಎಸ್ ಆಸ್ಪತ್ರೆ, ಅರವಿಂದ ಹಾಸ್ಪಿಟಲ್‌, ಚೈತನ್ಯ ನಟ್ ವರ್ಕ್ ಇವರ ಸಂಯುಕ್ತಾಶ್ರಯದಲ್ಲಿ  ಉಚಿತ ಆರೋಗ್ಯ ಶಿಬಿರದಲ್ಲಿ 200
ಮಂದಿ ತಪಾಸಣೆ ಮಾಡಿಸಿಕೊಂಡರು.
ಶಿಬಿರದಲ್ಲಿ ಅನಿಮೀಯ ತಡೆ ತಪಾಸಣೆ ನಡೆಯಿತು. ಅಗತ್ಯವಿರುವವರಿಗೆ ಉಚಿತ ಔಷಧ ವಿತರಿಸಲಾಯಿತು.170 ಮಂದಿ ಇಸಿಜಿ ಮಾಡಿಕೊಂಡರು. ತೊಂದರೆ ಕಂಡಬಂದಂತಹ ಹೃದಯ ಸಮಸ್ಯೆ ರೋಗಿಗಳನ್ನು  ಮೈಸೂರಿನ ‌ಜೆಎಸ್ಎಸ್ ಆಸ್ಪತ್ರೆಗೆ ಕಳುಹಿಸಿಕೊಡಲಾಯಿತು.
   ಕಾರ್ಯಕ್ರಮದಲ್ಲಿ  ಚೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರದೀಪ್
ಸಹಾಯಕ  ಕಾರ್ಯಪಾಲಕ ಇಂಜಿನಿಯರ್‌ಗಳಾದ   ಪ್ರಶಾಂತ್, ಧ್ರುಪದ್, ಮಹೇಶ್, ಸಂಧ್ಯಾ, ರೋಟರಿ ಅಧ್ಯಕ್ಷ ಕಾಗಲವಾಡಿ ಚಂದ್ರು,
ನೌಕರರ ಸಂಘದ  ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್,  ಸಹಾಯಕ ಎಂಜಿನಿಯರ್ ಪ್ರವೀಣ್,
ಸಂಘದ ಅಧ್ಯಕ್ಷ ಮುರುಳೀಕೃಷ್ಣಸ್ವಾಮಿ,  ಕಾರ್ಯದರ್ಶಿ ಸಿದ್ದರಾಜಪ್ಪ,
ಎಸ್ ಸಿ ಎಸ್ ಟಿ ಕಲ್ಯಾಣ ಸಂಸ್ಥೆ  ಕೇಂದ್ರ ಸಮಿತಿ  ಸದಸ್ಯ ಮಂಜುನಾಥ್, ಅಧ್ಯಕ್ಷ ಪ್ರಶಾಂತ್, ಕಾರ್ಯದರ್ಶಿ ಸೋಮೇಶ್ವರ,  ಎಲ್ಲ ಸಂಘ- ಸಂಸ್ಥೆಗಳ ಪದಾಧಿಕಾರಿಗಳು, ಶಾಖಾಧಿಕಾರಿಗಳು,ನೌಕರ ಬಾಂಧವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *