ಚಾಮರಾಜನಗರ: ತಾಲೂಕಿನ ಮೂಡ್ನಾಕೂಡು ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಬಿಜೆಪಿ ಬೆಂಬಲಿತ ನೂತನ ಅಧ್ಯಕ್ಷರಾಗಿ ಎಂ.ಎನ್.ನಟರಾಜು, ಉಪಾಧ್ಯಕ್ಷ ರಾಗಿ ಸುರೇಶ್ ಅವಿರೋಧ ವಾಗಿ ಆಯ್ಕೆಯಾದರು.
ಸಂಘದ ಕಚೇರಿಯಲ್ಲಿ ಹಿಂದಿನ
ಅಧ್ಯಕ್ಷ ಬಾಲಸುಬ್ರಹ್ಮಣ್ಯಂ, ಉಪಾಧ್ಯಕ್ಷ ಚಿನ್ನಸ್ವಾಮಿ ಅವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ -ಉಪಾಧ್ಯಕ್ಷರ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಎಂ. ಎನ್. ನಟರಾಜು ಅಧ್ಯಕ್ಷ ಸ್ಥಾನಕ್ಕೆ,
ಸುರೇಶ್ (ಜಗ್ಗು ) ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು. ಈ ಎರಡು ಸ್ಥಾನಗಳಿಗೆ ಬೇರೆ ಯಾರು ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಯಾಗಿದ್ದ ನಾಗೇಶ್ ನೂತನ ಅಧ್ಯಕ್ಷ, ಉಪಾಧ್ಯಕ್ಷ ರ ಆಯ್ಕೆಯನ್ನು ಘೋಷಿಸಿದರು.
ಸಭೆಯಲ್ಲಿ ನಿರ್ದೇಶಕರು,
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ,ಎಸ್ ಬಸವಣ್ಣ ಭಾಗವಹಿಸಿದ್ದರು.
ಸನ್ಮಾನ; ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಸಂಘದ ನಿರ್ದೇಶಕರು, ಬಿಜೆಪಿ ಮುಖಂಡರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಎಂ.ಬಿ ಶಿವಮಲ್ಲಪ್ಪ, ನಾಗೇಂದ್ರ ಪ್ರಸಾದ್, ಗೌಡಿಕೆ ರೇವಣ್ಣ, ಶಿವನಂಜಪ್ಪ, ಸಿದ್ದಪ್ಪ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೂಡ್ನಾಕೂಡು ಪ್ರಕಾಶ್, ಎಂ.ಸಿ. ಮಲ್ಲಣ್ಣ, ಗೌ,ಪ್ರಕಾಶ್, ಕುಮಾರ್ ಕೆಂಡ್. ನಾಗಭೂಷಣ್, ಅತ್ತೆಹಟ್ಟಿ ಬಸವಣ್ಣ, ಸುಂದರ್
ನಿರ್ದೇಶಕರುಗಳಾದ ಮಾಜಿ ಅಧ್ಯಕ್ಷ ಬಾಲಸುಬ್ರಹ್ಮಣ್ಯಂ ಮಾಜಿ ಉಪಾಧ್ಯಕ್ಷ ಚಿನ್ನಸ್ವಾಮಿ, ಎಂ ಎನ್ ಪ್ರಭುಸ್ವಾಮಿ, ಮಹೇಶ್, ಎಂ.ಸಿ .ಪ್ರಕಾಶ್, ಲೋಕೇಶ್, ಶಿವಕುಮಾರ್, ನಾಗಮ್ಮ, ಸುಂದರಮ್ಮ ಹಾಜರಿದ್ದರು.