ಕರ್ನಾಟಕ ಮಾದರ ಮಹಾಸಭಾದ ಚಾ.ನಗರ ಜಿಲ್ಲಾಧ್ಯಕ್ಷರಾಗಿ ಎಂ.ಶಿವಮೂರ್ತಿ ನೇಮಕ

ಚಾಮರಾಜನಗರ: ಕರ್ನಾಟಕ ಮಾದರ ಮಹಾಸಭಾದ ಚಾಮರಾಜನಗರ ಜಿಲ್ಲಾಧ್ಯಕ್ಷರಾಗಿ ಎಂ.ಶಿವಮೂರ್ತಿ ನೇಮಕ ಮಾಡಲಾಗಿದೆ.
  ಕರ್ನಾಟಕ ಮಾದರ ಮಹಾಸಭೆಯು 2015ರಲ್ಲಿ ಮಾದಿಗ ಸಮುದಾಯದ ಸಬಲೀಕರಣ ಮತ್ತು ಸರ್ವಾಂಗೀಣ ಅಭಿವೃದ್ಧಿ ಉದ್ದೇಶದಿಂದ ಸ್ಥಾಪಿತವಾಗಿದೆ. ಮಾದಿಗ ಸಮುದಾಯದ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಅಭಿವೃದ್ಧಿಗೆ ನೀವು ನಿಷ್ಠೆಯಿಂದ ಹಾಗೂ ತ್ಯಾಗಮನೋಭಾವದಿಂದ ಕೆಲಸ ಮಾಡುವಂತೆ ಆಶಿಸುತ್ತೇವೆ.
ನಿಮ್ಮ ಅನುಭವ ನಾಯಕತ್ವ ಮತ್ತು ಸೇವಾ ಮನೋಭಾವವು ಸಮುದಾಯದ ಸಬಲೀಕರಣಕ್ಕೆ ಮಹತ್ವ ಪಾತ್ರವಹಿಸಲಿದೆ ಎಂದು ನಂಬುತ್ತೇವೆ.
ಮಹಾಸಭೆ ಉದ್ದೇಶಗಳು ಹಾಗೂ ಸಂಘದ ಬೈಲಾವನ್ನು ಅನುಸರಿಸಿ, ಸಮುದಾಯದ ಒಳಿತಿಗಾಗಿ ಸಂಪೂರ್ಣ ಸಮರ್ಪಿತ ಮನೋಭಾವದಿಂದ ಸೇವೆ ಸಲ್ಲಿಸುವಂತೆ ವಿನಂತಿಸುತ್ತೇವೆ.
ಈ ನೇಮಕಾತಿ ಆದೇಶವು ಮುಂದಿನ ಚುನಾವಣೆವರೆಗೆ ಚಾಲ್ತಿಯಲ್ಲಿರುತ್ತದೆ. ಎಂದು ನೇಮಕಾತಿ ಆದೇಶ ಪತ್ರದಲ್ಲಿ ಕರ್ನಾಟಕ ಮಾದರ  ಮಹಾಸಭಾ ಅಧ್ಯಕ್ಷ
ಡಾ. ಕೆ. ಹೆಚ್.ಮುನಿಯಪ್ಪ ತಿಳಿಸಿದ್ದಾರೆ.
ಅಭಿನಂದನೆ: ಕರ್ನಾಟಕ ಮಾದರ ಮಹಾಸಭಾದ ಚಾಮರಾಜನಗರ ಜಿಲ್ಲಾಧ್ಯಕ್ಷರಾಗಿ  ತಮ್ಮನ್ನು ನೇಮಕ ಮಾಡಿದ ರಾಜ್ಯಾಧ್ಯಕ್ಷರಾದ ಡಾ.ಕೆ.ಹೆಚ್.ಮುನಿಯಪ್ಪ,  ಮಾಜಿ ಸಚಿವರಾದ ಎ.ನಾರಾಯಣಸ್ವಾಮಿ,  ಎಚ್.ಆಂಜನೇಯ, ವಿಧಾನ ಪರಿಷತ್ ಸದಸ್ಯ ಡಾ.ತಿಮ್ಮಯ್ಯ ,
ಕರ್ನಾಟಕ ಮಾದರ ಮಹಾಸಭಾದ ಚಾ.ನಗರ ಜಿಲ್ಲಾ ಉಸ್ತುವಾರಿ ಆರ್.ಧರ್ಮಸೇನ ಅವರಿಗೆ ಈ ಮೂಲಕ ಅಭಿನಂದನೆ ಸಲ್ಲಿಸುವುದಾಗಿ
ಎಂ.ಶಿವಮೂರ್ತಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *