ಚಾಮರಾಜನಗರ:ಗುರು ಶಿಷ್ಯ ಪರಂಪರೆ ಯೋಜನೆಯು ಅಳಿವಿನಂಚಿನಲ್ಲಿರುವ ಕಲೆ, ಸಂಗೀತ, ನೃತ್ಯ ಮತ್ತು ಜಾನಪದ ಪ್ರಕಾರಗಳನ್ನು ಸಂರಕ್ಷಿಸಲು, ಪ್ರತಿಭಾವಂತ ಶಿಷ್ಯರಿಗೆ ನುರಿತ ಗುರುಗಳಿಂದ ತರಬೇತಿ ನೀಡಲು ಸರ್ಕಾರ ನೀಡುವ ಯೋಜನೆಯನ್ನು ಜಿಲ್ಲೆಯ ಕಲಾವಿದರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜು ಹೇಳಿದರು.
ನಗರದ ಡಾ. ರಾಜ್ ಕುಮಾರ್ ರಂಗ
ಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಡೆದ ಗುರುಶಿಷ್ಯ ಪರಂಪರೆಯ ಜಾನಪದ ಕಲೆಗಳ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು,
ಈ ಯೋಜನೆಯಡಿ, ಗುರುಗಳಿಗೆ ಗೌರವಧನ ಮತ್ತು ಯುವಕಲಾವಿದರಿಗೆ
ಉಚಿತ 6 ತಿಂಗಳ ತರಬೇತಿ ನೀಡಲಾಗುತ್ತದೆ.
ಗುರು ಶಿಷ್ಯ ಪರಂಪರೆ ಯೋಜನೆಯು ನಶಿಸಿ ಹೋಗುತ್ತಿರುವ ಕಲೆಗಳನ್ನು ಉಳಿಸುವುದು ಮತ್ತು ಗುರು-ಶಿಷ್ಯ ಪರಂಪರೆಯ ಮೂಲಕ ಜ್ಞಾನವನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಲು ಸಹಕಾರಿಯಾಗಿದೆ.
ಇಂತಹ ಕಾರ್ಯಕ್ರಮಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ತರಬೇತಿ ಪಡೆದಿರುವ ವಿದ್ಯಾರ್ಥಿಗಳು ತಂಡವನ್ನು ರಚನೆ ಮಾಡಿಕೊಂಡು ಕಲೆಯನ್ನು ಮುಂದುವರಿಸಿಕೊಂಡು ಹೋದರೆ ಇಲಾಖೆಯ ವತಿಯಿಂದ ಕಾರ್ಯಕ್ರಮ ಗಳನ್ನು ನೀಡಲಾಗುವುದು ಎಂದರು.
ಗುರು-ಶಿಷ್ಯ ಪರಂಪರೆಯ ಗುರುಗಳಾದ ಮಹೇಶ್ ಜನಪದ ಮಾತನಾಡಿ,ಗುರು ಶಿಷ್ಯ ಪರಂಪರೆ ಯೋಜನೆವು ಸಾಂಪ್ರದಾಯಿಕ ಕಲೆ, ಸಂಗೀತ, ನೃತ್ಯ ಮತ್ತು ಕರಕುಶಲ ಕಲೆಗಳನ್ನು ಸಂರಕ್ಷಿಸಲು ಮತ್ತು ಉತ್ತೇಜಿಸಲು ಕನ್ನಡ ಮತ್ತು ಸಂಸ್ಕೃತಿ ಮೂಲಕ
ಸರ್ಕಾರಗಳು ಜಾರಿಗೆ ತಂದಿರುವ ಒಂದು ಪ್ರಮುಖ ಕಾರ್ಯಕ್ರಮವಾಗಿದ್ದು ಈ ಯೋಜನೆಯ ಮುಖಾಂತರ ಈ ಭಾಗದ ಮೂಲ ದಾಟಿಯ ಹಾಡುಗಳು ಬೀಸು ಕಂಸಾಳೆ ಜಾನಪದ ನೃತ್ಯ ಕಲೆಯನ್ನು ಕಲಿಸಲು ನನ್ನನ್ನು ಆಯ್ಕೆ ಮಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಅಭಾರಿಯಾಗಿದ್ದೇನೆ ಎಂದರು.
ಅಲ್ಲದೇ ಆರು ತಿಂಗಳಗಳ ಕಾಲ ಮಕ್ಕಳು, ಓದು ಬರಹ ಡ್ಯೂಟಿ ಕಾಲೇಜು ಹೋಂವರ್ಕ್ ಎಷ್ಟೇ ಒತ್ತಡಗಳಿದ್ದರೂ ಪ್ರತಿದಿನ ತರಬೇತಿಗೆ ಬಂದು ನನಗೆ ಗುರು ಸ್ಥಾನವನ್ನು ನೀಡಿ ಉತ್ತಮ ರೀತಿಯಲ್ಲಿ ಗೌರವದಿಂದ ನೆಡೆದುಕೊಂಡು ತರಬೇತಿಗೆ ಬರುತ್ತಿದ್ದರು ಇಂಥ ಮಕ್ಕಳಿಗೆ ನಾನು ಕಲಿಸಲು ಪುಣ್ಯ ಮಾಡಿದ್ದೆ
ನನಗೆ ಇಂಥ ಒಂದು ಒಳ್ಳೆಯ ಅವಕಾಶವನ್ನು ಕೊಟ್ಟಂತ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಹಾಗೂ ಪ್ರೋತ್ಸಾಹಿಸಿದ ಅಂಬೇಡ್ಕರ್ ವರ್ಗೀಕೃತ ವಸತಿ ನಿಲಯದ ಮೇಲ್ವಿಚಾರಕರು ಹಾಗೂ ತರಬೇತಿ ಪಡೆದಂತ ಎಲ್ಲ ಮಕ್ಕಳು ಎಲ್ಲರಿಗೂ ಧನ್ಯವಾದಗಳು ತಿಳಿಸಿದರು.
ಅಂಬೇಡ್ಕರ್ ವರ್ಗಿಕೃತ ಮಹಿಳಾ ವಸತಿ ನಿಲಯದ ಮೇಲ್ವಿಚಾರಕಿ ಸರಸ್ವತಿ ಮೋಹನ್ ಮಾತನಾಡಿ, ನಿಲಯ ವಿದ್ಯಾರ್ಥಿಗಳಿಗೆ ಗುರು ಶಿಷ್ಯ ಪರಂಪರೆ ಯೋಜನೆಯ ಮೂಲಕ ಸಾಂಪ್ರದಾಯಿಕ ಕಲೆ, ಸಂಗೀತ, ನೃತ್ಯ ತರಬೇತಿ ನೀಡಿರುವುದು ತುಂಬಾ ಸಂತಸವಾಗಿದೆ. ನಿಲಯದ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಈ ಮೂಲಕ ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಪರಶಿವಮೂರ್ತಿ ರಾಜಶೇಖರ್ ಮಹೇಶ್ ಕೋಲು. ಕಲೆ ನಟರಾಜುಇತರರು ಹಾಜರಿದ್ದರು. ತರಬೇತಿ ಪಡೆದ ವಿದ್ಯಾರ್ಥಿಗಳು ಬೀಸುಕಂಸಾಳೆ, ಮೂಲಜನಪದ ಗಾಯನ, ಸುಗಮ ಸಂಗೀತ, ಜಾನಪದ ನ್ಯತ್ಯ ಪ್ರದರ್ಶನ ಗಮನ ಸೆಳೆಯಿತು.