ಒಂದು ಸಾಂಸ್ಕೃತಿಕ ಶಕ್ತಿಯಾಗಿ ಮಹಿಳೆ ಇಂದು ಎಲ್ಲಾ ವಿಭಾಗಗಳಲ್ಲೂ ಕೂಡ ತನ್ನ ವಿಶಿಷ್ಟ ರೀತಿಯ ಛಾಪು ಮೂಡಿಸಿ ದ್ದಾಳೆ. ಮನೆಯ ಕೆಲಸಗಳಿಗೆ ಸೀಮಿತ ಎನ್ನುವ ಕಾಲವೊಂದಿತ್ತು, ಆದರೆ ಈಗ ಕಾಲಕ್ಕೆ ತಕ್ಕಂತೆ ಬದಲಾಗಿ, ಕುಟುಂಬದಲ್ಲಿ ನಾನಾ ಪಾತ್ರಗಳನ್ನು ನಿರ್ವಹಿಸಿ, ಸಮಾಜಮುಖಿ ಕೆಲಸ ಕಾರ್ಯಗಳನ್ನು ಕೂಡ ಸಕ್ರಿಯವಾಗಿ ಪಾಲ್ಗೊಂಡು, ಎಲ್ಲರಿಗೂ ಸ್ಪೂರ್ತಿಯ ಸೆಲೆಯಾಗಿದ್ದಾಳೆ.
ಮನೆಯ ಬೆಳಕಾಗಿದ್ದಾಳೆ ಈ ಮಹಿಳೆ. ಆದರೂ ಕೂಡ ಇಂದಿನ ಒತ್ತಡದ ಯಾಂತ್ರಿಕ ಜೀವನದಲ್ಲಿ ಎಲ್ಲೋ ಒಂದು ಕಡೆ ಕುಟುಂಬ ನಿರ್ವಹಣೆಯ ಕೆಲಸ ಕಾರ್ಯಗಳಲ್ಲಿ ಸೋಲುತ್ತಿದ್ದಾಳೆ ಎಂದೇ ಹೇಳಬೇಕು. ಸಣ್ಣ ಸಮಸ್ಯೆಗೆ ಆತ್ಮಹತ್ಯೆ ಅಂತಹ ಚಿಂತನೆ ಮಾಡುತ್ತಾಳೆ. ಇದು ಮಾತ್ರ ನಿಲ್ಲಲಿ. ಏಕೆಂದರೆ ಮಹಿಳೆಯನ್ನು ಭೂಮಿಗೆ ಹೋಲಿಸುತ್ತಾರೆ. ಸಹನೆಯನ್ನು ಕಳೆದುಕೊಳ್ಳುವ ವಾತಾವರಣ ಸೃಷ್ಟಿಯಾಗುತ್ತಿದೆ. ಮಹಿಳೆಗೆ ಪುರುಷರು ಕೂಡ ಸಾಥ್ ನೀಡಬೇಕು. ಮಹಿಳೆಗೂ ಕೂಡ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಎಂದು ಆಚರಿಸುವ ದಿನ ಇದೆ.
ಆದರೆ ಆ ಆಚರಣೆ ಒಂದು ದಿನಕ್ಕೆ ಸೀಮಿತವಾಗದೆ, ಮಹಿಳೆ ಇಂದು ಸಾಮಾಜಿಕವಾಗಿ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚಿಂತಿಸುವ ಕೆಲಸವಾಗಬೇಕು. ಮಹಿಳೆಗೆ ಮಾನಸಿಕ ಸ್ಥೈರ್ಯ ಮತ್ತಷ್ಟು ತುಂಬಬೇಕು.
ಗ್ರಾಮೀಣ ಪ್ರದೇಶದ ಮಹಿಳೆಯರಿಗೂ ಕೂಡ ಶಿಕ್ಷಣ ದೊರ ಕುವಂತೆ ನೋಡಿಕೊಳ್ಳಲೇಬೇಕು. ಗ್ರಾಮೀಣ ಭಾಗದಲ್ಲಿ ಮಹಿಳೆ ಇಂದಿಗೂ ಕೂಡ ಕೂಲಿ ಮಾಡಿ ಬದುಕುವ ಸ್ಥಿತಿ ಉಂಟಾಗಿದೆ. ಮಹಿಳೆಯರ ಬಗ್ಗೆ ಅನುಕಂಪ ಬೇಡ, ಪೆÇ್ರೀತ್ಸಾಹ ಅಗತ್ಯ. ಆಗಿದ್ದಲ್ಲಿ ಮಾತ್ರ ಮಹಿಳಾ ದಿನಾಚರಣೆಗೆ ಒಂದು ಅರ್ಥ ಬರುತ್ತದೆ.
ಮೊದಲೇ ಹೇಳಿದಂತೆ ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯ ಪಾತ್ರ ತುಂಬಾ ಹಿರಿದಾದದ್ದು. ತಾಯಿಯಾಗಿ, ಮಗಳಾಗಿ, ಅತ್ತೆಯಾಗಿ, ಅಜ್ಜಿಯಾಗಿ, ಸೊಸೆಯಾಗಿ ಹೀಗೆ ಮುಂತಾದ ಯಶಸ್ವಿ ಪಾತ್ರವನ್ನು ಸಮರ್ಪಕವಾಗಿ ನಿಭಾಯಿಸುವ ಶಕ್ತಿಯನ್ನು ಮಹಿಳೆ ಪಡೆದಿದ್ದಾಳೆ.
ಮಹಿಳೆ ಎಂದರೆ…. ಮನೆಯ ಹಿತವನ್ನು ಕಾಪಾಡುವವಳು. ತಾಯಿಗಿಂತ ಬಂಧುವಿಲ್ಲ ಉಪ್ಪಿಗಿಂತ ರುಚಿಯಿಲ್ಲ ಎಂಬ ಮಾತೇ ಇದೆ. ಅಪ್ಪಿ ತಪ್ಪಿ ಮಹಿಳೆಯು ತನ್ನ ಮನೆಯ ಯಜಮಾನನನ್ನು ಕಳೆದುಕೊಂಡಾಗ ಆಗಲು ಕೂಡ ದೃತಿಗಿಡದೆ ಆತನ ಸ್ಥಾನವನ್ನು ಮತ್ತು ತನ್ನ ಸ್ಥಾನವನ್ನು ನಿರ್ವಹಿಸಬಲ್ಲ ಸಮರ್ಥಳು ಅವಳು.
ಮಕ್ಕಳ ವಿದ್ಯಾಭ್ಯಾಸ ದಿಂದ ಹಿಡಿದು ಎಲ್ಲವನ್ನೂ ಕೂಡ ತಪಸ್ಸಿನಂತೆ ಮಾಡುತ್ತಾಳೆ. ಮಕ್ಕಳು ತಂದೆಯನ್ನು ಒಂದು ವೇಳೆ ಮರೆತರೂ ತಾಯಿಯನ್ನು ಎಂದೂ ಮರೆಯುವುದಿಲ್ಲ. ಆದುದರಿಂದ ನಾವು ತಾಯಿಯ ಜೊತೆಗೆ ತಂದೆಯನ್ನು ಕೂಡ ಎಂದು ಮರೆಯ ಬಾರದು. ಇಬ್ಬರೂ ಕೂಡ ಈ ಪ್ರಪಂಚಕ್ಕೆ ಬರಲು ಪ್ರಮುಖ ಕಾರಣ ಕರ್ತರು. ಅದರಿಂದಾಗಿ ಕೆಲವು ಮಕ್ಕಳು ಹೇಳುತ್ತಾರೆ….. ನಮ್ಮ ತಂದೆ- ತಾಯಿಗಳು ಏನನ್ನು ಮಾಡಲಿಲ್ಲ ಎನ್ನುತ್ತಾರೆ. ಅವರು ನಮಗೆ ಒಂದು ಸಮಾಜಕ್ಕೆ ದೊಡ್ಡ ಕೊಡುಗೆಯನ್ನಾಗಿ ನೀಡಿದ್ದಾರೆ.
ಆದುದರಿಂದ ನಾವು ಅವರು ಜೀವಿತ ಅವಧಿ ಇರುವವರೆಗೂ ಕೂಡ ತೊಂದರೆ ಕೊಡದೆ ಎರಡು ಕಣ್ಣುಗಳಂತೆ ನೋಡಿಕೊಳ್ಳ ಬೇಕು. ಈ ಮಾತೃಸ್ಥಾನ ಇದೆಯಲ್ಲ ಅದು ಒಂದು ರೀತಿಯಲ್ಲಿ ಬಿಡಿಸಲಾಗದ ಬಂಧ. ತಾಯಿಯಾದವಳು ತನಗೆ ಎಷ್ಟೇ ನೋವು ಗಳು ಬಂದರೂ ಕೂಡ ತನ್ನ ಮಗುವನ್ನು ನೋಡಿ ನೋವನ್ನು ಕ್ಷಣ ಮಾತ್ರದಲ್ಲಿ ಮರೆಯುತ್ತಾಳೆ.
ಅದರಲ್ಲೂ ಮಕ್ಕಳ ಲಾಲನೆ ಪಾಲನೆಯ ವಿಷಯದಲ್ಲಿ ಮಹಿಳೆ ಬಿಟ್ಟರೆ ಯಾರು ಕೂಡ ಅದನ್ನು ನಿರ್ವಹಿಸಲು ಆಗೋದೇ ಇಲ್ಲ. ಅವಳ ಅನುಪ ಸ್ಥಿತಿಯಲ್ಲಿ ಸ್ವಲ್ಪ ಮಟ್ಟಿಗೆ ನಾವು ಮಕ್ಕಳನ್ನು ತಡೆಯಬಹುದು.
ಇಂದು ಮಹಿಳೆ ಮನೆಯ ಕುಟುಂಬದ ರಕ್ಷಣೆಯ ಜೊತೆಗೆ ಅದನ್ನು ಮೀರಿ ಈಗ ದೇಶದ ರಕ್ಷಣೆ ಹಿತದೃಷ್ಟಿಯಲ್ಲಿ ಕೂಡ ಮುಂದಾ ಳತ್ವ ವಹಿಸಿ, ಅಲ್ಲಿಯೂ ಕೂಡ ತಂತ್ರಜ್ಞಾನಗಳೊಂದಿಗೆ ತನ್ನ ಸಾಮರ್ಥ್ಯವನ್ನು ಕೂಡ ಮೆರೆದಿದ್ದಾಳೆ. ಮಹಿಳೆ ಇಲ್ಲದ ಜಗತ್ತನ್ನು ಊಹಿಸಿಕೊಳ್ಳಲು ಕೂಡ ಸಾಧ್ಯವಾಗುವುದಿಲ್ಲ. “ತೊಟ್ಟಿಲು ತೂಗುವ ಕೈ ದೇಶವನ್ನೇ ತೂಗಬಲ್ಲದು” ಎನ್ನುವ ಮಾತು ನಿಜವಾಗಿದೆ.
ನಮ್ಮ ನಾಡು- ನುಡಿ ಸಂಸ್ಕೃತಿಗೆ ಮಹಿಳೆ ಒಂದಲ್ಲ ಒಂದು ರೀತಿಯಲ್ಲಿ ಸ್ಪೂರ್ತಿಯ ಸೆಲೆಯಾಗಿದ್ದಾಳೆ. ಅನೇಕ ಮಹತ್ತರ ಕೆಲಸ ಕಾರ್ಯಗಳನ್ನು ಮಾಡಿದ್ದಾಳೆ. ಈ ಬಗ್ಗೆ ಅನೇಕ ಉದಾಹರಣೆಗಳು ಕೂಡ ಇವೆ. ನಮ್ಮ ದೇಶದ ಮೊದಲ ಮಹಿಳಾ ಪ್ರಧಾನಿ ಇಂದಿರಾಗಾಂಧಿ, ಸಾಲು ಮರದ ತಿಮ್ಮಕ್ಕ, ಕ್ರೀಡಾ ಕ್ಷೇತ್ರದಲ್ಲಿ ಪಿ ಟಿ ಉಷಾ, ಪಿ ವಿ ಸಿಂಧು, ಅಂಜು ಬಿ ಜಾರ್ಜ್, ಕ್ರಿಕೆಟ್ನ ಶಾಂತ ರಂಗಸ್ವಾಮಿ ಮುಂತಾದವರು
ಕನ್ನಡ ನಾಡು ನುಡಿ ಸಂಸ್ಕೃತಿಗೆ ಹೋರಾಡಿದ ಅನೇಕ ವೀರ ಮಹಿಳೆಯರು ಇದ್ದಾರೆ. ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಒನಕೆ ಓಬವ್ವ ಮುಂತಾದವರು. ಭಾರತದ ಮಟ್ಟಕ್ಕೂ ಅನೇಕ ಮಹಿಳೆಯರ ಹೆಸರನ್ನು ನಾವು ನೆನೆದುಕೊಳ್ಳಲೇಬೇಕು.
ಮನೆಯನ್ನು ಮನವನ್ನು ಬೆಳಗುವ ನಂದಾದೀಪ ಈ ಹೆಣ್ಣು. ಹೆಣ್ಣೊಂದು ಕಲಿತರೆ ಶಾಲೆ ಯೊಂದು ತೆರೆದಂತೆ ಎಂಬ ಮಾತು ಕೂಡ ಇದೆ. ನಿಜಕ್ಕೂ ಹೆಣ್ಣು ತನ್ನ ಸುತ್ತಮುತ್ತಲಿನ ಅನಕ್ಷರತೆಯನ್ನು ಕ್ಷಣಮಾತ್ರದಲ್ಲಿ ಓಡಿಸಬಲ್ಲಳು.
ಮಹಿಳೆ ಮತ್ತು ಇಳೆ ಎರಡರಲ್ಲೂ ಕೂಡ ಒಂದು ರೀತಿಯಲ್ಲಿ ಅವಿನಾಭಾವ ಸಂಬಂಧ ಇದೆ.
ಕರ್ತವ್ಯ ಮಾಡು ಫಲ ನಿರೀಕ್ಷಿಸದಿರು ಎನ್ನುವ ಗೀತೆ ಸಾರದಂತೆ ಮಹಿಳೆ ತನ್ನ ಉದಾತ್ತ ಚಿಂತನೆಗಳ ಮೂಲಕ ಎಲ್ಲರ ಮನ ಪರಿವರ್ತನೆ ಮಾಡುತ್ತಾ ಮುಂದೆ ಸಾಗುತ್ತಿದ್ದಾಳೆ. ತಾನೂ ಬೆಳೆದು ಇತರರನ್ನು ಬೆಳೆಸುವ ಗುಣವನ್ನು ಪಡೆದುಕೊಂಡಿದ್ದಾಳೆ.
ಶಾಲಾ ಹಂತದಲ್ಲೂ ಕೂಡ ನಾವು ನೋಡಬಹುದು ಪುರುಷರಿಗಿಂತ ಮಹಿಳೆಯರೇ ಅಂಕಗಳನ್ನು ಪಡೆಯುವಲ್ಲೂ ಕೂಡ ಮುಂದು. ಇದರ ಫಲವಾಗಿ ಮಹಿಳೆ ಎಲ್ಲಾ ಉದ್ಯೋಗ ಗಳಲ್ಲೂ ಕೂಡ ಪುರುಷನಷ್ಟೇ ಸರಿ ಸಮಾನಳು ಎನ್ನುವುದನ್ನು ಸಾಧಿಸಿ ತೋರಿಸಿದ್ದಾಳೆ. ಕೆಲವು ಹುದ್ದೆಗಳು ಪುರುಷರಿಗೆ ಮಾತ್ರ ಮೀಸಲು ಎನ್ನುವ ಕಾಲವು ಕೂಡ ಒಂದು ಇತ್ತು!. ಆದರೆ ತಂತ್ರಜ್ಞಾನದ ಹೊಸ ಹೊಸ ವಿನ್ಯಾಸದೊಂದಿಗೆ ಮಹಿಳೆಯರೂ ಕೂಡ ಆ ಹುದ್ದೆಗಳನ್ನು ಕೂಡ ಅನುಭವಿಸುತ್ತಿದ್ದಾಳೆ.
ಅದರಲ್ಲೂ ನಮ್ಮ ಕನ್ನಡ ನಾಡಿನಲ್ಲಿ ಅನೇಕ ಪ್ರಸಿದ್ಧ ಮಹಿಳಾ ಸಾಹಿತಿಗಳು ಕೂಡ ಇದ್ದಾರೆ. ಅವರು ತಮ್ಮ ಬದುಕಿನುದ್ದಕ್ಕೂ ಕಂಡುಂಡ ಅನೇಕ ಸಿಹಿ ಕಹಿ ಘಟನೆಗಳನ್ನು ಕೂಡ ತಮ್ಮ ಲೇಖನ ಗಳ ಮೂಲಕ ವಿಶಿಷ್ಟವಾಗಿ ದಾಖಲಿಸುತ್ತಾ ಅದನ್ನು ಓದಿದವರಿಗೆ ಒಂದು ರೀತಿಯ ಸಾಂತ್ವಾನ, ಸ್ಪೂರ್ತಿ ಎಲ್ಲವೂ ಕೂಡ ಆಗಿದ್ದಾಳೆ.
ತನ್ನ ವೈಚಾರಿಕ ಲೇಖನಗಳು, ಕಥೆ, ಕವನ ಈ ಮೂಲಕ ಸಮಾಜದಲ್ಲಿ ಇರುವ ದೌರ್ಬಲ್ಯಗಳನ್ನು, ಸಮಸ್ಯೆಗಳನ್ನು ತನ್ನದೇ ಆದ ಚಿಂತನೆಯ ಮೂಲಕ ಅವುಗಳನ್ನು ಎದುರಿಸಿ ನಮ್ಮ ಸಮ ಸಮಾಜದಲ್ಲಿ ಪುರುಷನಷ್ಟೇ ಮಹಿಳೆ ನಿಲ್ಲಬಹುದು ಎಂಬುದನ್ನು ಸಾರಿ ತೋರಿಸಿದ್ದಾರೆ.
ಸರ್ಕಾರವು ಕೂಡ ಮಹಿಳೆಗೆ ಅನೇಕ ಮೂಲಭೂತ ಸೌಕರ್ಯಗಳನ್ನು ಕೂಡ ಒದಗಿಸಿದೆ. ಮಹಿಳೆ ಇಂದು ಆರ್ಥಿಕವಾಗಿಯು ಕೂಡ ಮುಂದುವರೆದಿದ್ದಾಳೆ. ಆರ್ಥಿಕವಾಗಿ ಒಂದು ಕಾರ್ಖಾನೆ ಅಥವಾ ಸ್ವಂತ ಸಂಸ್ಥೆಗಳ ಮೂಲಕವೂ ಕೂಡ ಅದನ್ನು ನಡೆಸುವ ಶಕ್ತಿಯನ್ನು ಪಡೆದಿದ್ದಾಳೆ. ಹಾಗೆಯೇ ತನ್ನ ಪ್ರಗತಿಪರ ಚಿಂತನೆಗಳನ್ನು ಮೈಗೂಡಿಸಿಕೊಂಡು ಕೃಷಿ ಚಟುವಟಿಕೆಗಳನ್ನು ಕೂಡ ಮುಂದೆ ಇದ್ದಾಳೆ. ಗುಡಿ ಕೈಗಾರಿಕೆ, ಅನೇಕ ಕಾರ್ಖಾನೆಗಳಲ್ಲೂ ಕೂಡ ಮಹಿಳೆ ಮೇಲೇರಿ ಎಲ್ಲರ ಗಮನ ಸೆಳೆದಿದ್ದಾಳೆ. ಅನೇಕ ಶಿಕ್ಷಣ ಸಂಸ್ಥೆಗಳನ್ನು ಕೂಡ ಪ್ರಾರಂಭಿಸಿದ್ದಾಳೆ. ಶಿಕ್ಷಕಿಯಾಗಿಯೂ ಕೂಡ ತನ್ನ ಮಕ್ಕಳನ್ನಷ್ಟೇ ಅಲ್ಲದೆ ಸಮಾಜದ ಇತರ ಮಕ್ಕಳಿಗೂ ಕೂಡ ದಾರಿದೀಪವಾಗಿದ್ದಾಳೆ.
ಈ ನಾರಿ ಶಕ್ತಿ ಎನ್ನುವುದು ಬಹಳ ಪರಿಣಾಮಕಾರಿಯಾಗಿದೆ. ಎಲೆಮರೆಕಾಯಿಯಾಗಿದ್ದುಕೊಂಡೇ ಬೆಳಕಿಗೆ ಬರದ ಅನೇಕ ಮಹಿಳೆಯರು ಕೂಡ ಯಾವುದೇ ಪ್ರಚಾರವಿಲ್ಲದೆ ಸಾಧನೆಯ ಗುರಿ ಮುಟ್ಟಿದ್ದಾರೆ.
ಇನ್ನು ಚಿತ್ರರಂಗದಲ್ಲೂ ಕೂಡ ಮಹಿಳೆಯದೆ ಹೆಸರು. “ಸತಿ ಸುಲೋಚನ” ಎನ್ನುವ ಚಿತ್ರವು ಕೂಡ ಮಹಿಳೆಗೆ ಗೌರವ ಹೆಚ್ಚಿಸಿದೆ. ನಂತರದಲ್ಲೂ ಬೆಳ್ಳಿತೆರೆಯಲ್ಲಿ ಮೂಡಿ ಬಂದ ಅನೇಕ ಮಹಿಳಾ ಪ್ರಧಾನ ಚಿತ್ರಗಳು ಒಂದಲ್ಲ ಒಂದು ರೀತಿಯಲ್ಲಿ ಸಂದೇಶ ಸಾರಿದವು. ಪಂಡರಿಬಾಯಿ, ಲೀಲಾವತಿ, ಜಯಂತಿ, ಕಲ್ಪನಾ, ಮಂಜುಳಾ, ಲಕ್ಷ್ಮಿ, ಭಾರತಿ ಮುಂತಾದ ನಟಿಯರು ಕೂಡ ಪ್ರಸಿದ್ಧಿ ಪಡೆದಿದ್ದಾರೆ. ಪೆÇೀಷಕಿ ಪಾತ್ರಗಳನ್ನು ಕೂಡ ಮಹಿಳೆಯರು ಮಾಡಿದ್ದಾರೆ.
ಕನ್ನಡ ಚಲನಚಿತ್ರ ಕ್ಷೇತ್ರದಲ್ಲಿ ದೊಡ್ಡ ಹೆಸರಾದ ಡಾ ರಾಜಕುಮಾರ್ ರವರ ಹೆಂಡತಿ ಪಾರ್ವತಮ್ಮ ರಾಜಕುಮಾರ್ ರವರು ಕೂಡ ಸಾಮಾನ್ಯ ಕುಟುಂಬದಲ್ಲಿ ಜನಿಸಿ ಚಲನಚಿತ್ರಗಳನ್ನು ನಿರ್ಮಾಣ ಮಾಡುವಲ್ಲಿ, ಜೊತೆಗೆ ಚಿತ್ರರಂಗದಲ್ಲಿ ಅನೇಕ ಹೊಸ ಹೊಸ ನಟರು ಬೆಳಕಿಗೆ ಬರಲು ನೆರವಾಗಿದ್ದಾರೆ. ಜೊತೆಗೆ ಹಣಕಾಸು ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸಿದ್ದಾರೆ. ತಮ್ಮ ಮಕ್ಕಳು ಕೂಡ ಚಲನಚಿತ್ರಗಳಲ್ಲಿ ನಟಿಸುವಂತೆ ಸ್ಪೂರ್ತಿ ನೀಡಿದರು.
ಇನ್ನು ಸಂಗೀತ ಕ್ಷೇತ್ರದಲ್ಲಿ ಗಂಗೂಬಾಯಿ ಹಾನಗಲ್, ಮುಂತಾದವರು ಎಲ್ಲಾ ಕ್ಷೇತ್ರದಲ್ಲೂ ಸಾಧನೆ ಮಾಡಿದ ಪ್ರಾತಿನಿಧಿಕವಾಗಿ ಕೆಲವರ ಹೆಸರನ್ನು ಇಲ್ಲಿ ಮಾತ್ರ ಹೆಸರಿಸಲಾಗಿದೆ.
ಈ ರೀತಿ ಎಲ್ಲಾ ಕ್ಷೇತ್ರಗಳಲ್ಲೂ ಎಲ್ಲಾ ಸಾಧನೆಯ ಮೂಲಕ ಮಹಿಳೆಯೂ ಇಂದು ಮುಂದೆ ಇದ್ದರೂ ಕೂಡ ಅವಳು ಒಂದಲ್ಲ ಒಂದು ರೀತಿಯ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದಾಳೆ. ಮಹಿಳಾ ದೌರ್ಜನ್ಯಗಳು ದಿನಂಪ್ರತಿ ನಡೆಯುತ್ತಲೇ ಇವೆ. ಅತ್ಯಾಚಾರ ಅಲ್ಲದೆ ಸಾಮೂಹಿಕ ಪಿಡುಗುಗಳು ಕೂಡ ಅವಳನ್ನು ನಿರಂತರವಾಗಿ ಕಾಡುತ್ತಿವೆ. ಶಿಕ್ಷಣ ಪಡೆದ ಅನೇಕ ಪುರುಷರು ಕೂಡ ಮಹಿಳೆಗೆ ಪೆÇ್ರೀತ್ಸಾಹ ಮಾಡುತ್ತಿಲ್ಲ. ಇದರಿಂದಾಗಿ ಮಹಿಳೆಯ ಸಮಸ್ಯೆಗಳು ಸಮಸ್ಯೆಯಾಗಿಯೇ ಉಳಿದುಕೊಂಡು ಬಿಡುತ್ತಿವೆ. ಆದರೂ ಕೂಡ ನಮ್ಮ ಸಮಾಜದಲ್ಲಿ ಮಹಿಳೆಯರಿಗೆ ಒಂದು ಸ್ಥಾನ ಇದ್ದೇ ಇದೆ. ಸಮಸ್ಯೆಗಳಿಗೂ ಕೂಡ ಪರಿಹಾರ ಸೂಚಿಸುತ್ತಾ ಅನೇಕರು ಮುಂದೆ ಬಂದಿದ್ದಾರೆ. ದೂರದರ್ಶನ, ಆಕಾಶವಾಣಿ ಮುಂತಾದ ಪ್ರಭಾವಿ ಮಾಧ್ಯಮದಲ್ಲೂ ಕೂಡ ಮಹಿಳೆ ಮುಂದೆ ಇದ್ದಾಳೆ. ಜೊತೆಗೆ ಪತ್ರಿಕೋದ್ಯಮದಲ್ಲೂ ಕೂಡ ಮಹಿಳೆಯ ಛಾಪು ಅಚ್ಚರಿ ಮಾಡಿಸುತ್ತದೆ.
ಒಟ್ಟಿನಲ್ಲಿ ಈ ದಿನಾಚರಣೆ ಮಹಿಳೆಯ ಪರವಾಗಿ ಚಿಂತಿಸುವಂತ ಕಾರ್ಯಕ್ರಮಗಳು ಹೆಚ್ಚಬೇಕು ಮಹಿಳೆಯೂ ಕೂಡ ತನ್ನ ಕುಟುಂಬ ನಿರ್ವಹಣೆಯಲ್ಲಿ ಹಿಂದಿಂದಿಗಿಂತ ಹೆಚ್ಚಿನ ಪ್ರಮುಖ ಪಾತ್ರ ವಹಿಸಬೇಕಾಗಿದೆ. ತನ್ನ ಕುಟುಂಬದಲ್ಲಿ ಅನೇಕ ಸಮಸ್ಯೆಗಳು ತುಂಬಿ ತುಳುಕುತ್ತಿವೆ. ಅವುಗಳನ್ನು ತಾಳ್ಮೆಯಿಂದ ನಿವಾರಿಸಬೇಕು. ಜೊತೆಗೆ ಮಹಿಳೆ ಅಹಂಕಾರ ಪಡೆದೆ, ಸಿಕ್ಕ ಸವಲತ್ತುಗಳನ್ನು ಉಪಯೋಗಿಸಿಕೊಂಡು ಸರಿ ತಪ್ಪುಗಳ ವಿಮರ್ಶೆ ಮಾಡುವಂತಿರಬೇಕು. ಬೇರೆಯವರೊಂದಿಗೆ ಹೋಲಿಸಿಕೊಳ್ಳದೆ ತನ್ನ ಕುಟುಂಬವನ್ನು ಮೊದಲು ಸುಧರಿಸಿ ನಂತರ ನಮ್ಮ ಸಮಾಜದತ್ತ ಕೂಡ ತನ್ನ ಚಿತ್ತ ಹರಿಸುವಂತೆ ಆಗಬೇಕು. ಗಂಡು ಹೆಣ್ಣು ಇಬ್ಬರೂ ಕೂಡ ಒಂದು ನಾಣ್ಯದ ಎರಡು ಮುಖಗಳಿದ್ದಂತೆ ಕಷ್ಟ ಸುಖದಲ್ಲಿ ತಮ್ಮಗಳ ಸಹಭಾಗಿತ್ವ ಪಡೆದುಕೊಂಡು ಜೀವನದಲ್ಲಿ ಕಷ್ಟಗಳು ಏನೇ ಬಂದರೂ ಅವುಗಳನ್ನು ಎದುರಿಸುವ ಶಕ್ತಿಯನ್ನು ಪಡೆದುಕೊಳ್ಳಬೇಕು.
ಒಬ್ಬ ಯಶಸ್ವಿ ಪುರುಷನ ಹಿಂದೆ ಮಹಿಳೆ ಇದ್ದೇ ಇರುತ್ತಾಳೆ. ಮುಂದುವರಿದು ಹೆಣ್ಣಿಗೆ ಹೆಣ್ಣೇ ಶತ್ರು ಎನ್ನುವಂತಾಗಿದೆ. ಈಗಿನ ಸಾಮಾಜಿಕ ವ್ಯವಸ್ಥೆಯಲ್ಲಿ ಅತ್ತೆ ಸೊಸೆಯರ ಜಗಳ ಎಲೆಮರೆಕಾಯಿಯಂತಿದೆ. ಕೆಲವು ಮಾಧ್ಯಮಗಳು ಕೂಡ ಹೆಣ್ಣಿಗೆ ಹೆಣ್ಣು ಅಸೂಯೆ ಪಡುವಷ್ಟು ಪಾತ್ರಗಳನ್ನು ಸೃಷ್ಟಿಸಿ, ತಮ್ಮ ಟಿ ಆರ್ ಪಿ ಹೆಚ್ಚಿಸಿಕೊಳ್ಳುತ್ತಿವೆ. ಇದು ಒಂದು ಹೆಣ್ಣಿಗೆ ಹೆಣ್ಣೇ ಶತ್ರುವಾಗಲು ಕಾರಣ ಆಗಿದೆ. ಈಗ ಹೊಸದಾಗಿ ಮದುವೆಯಾಗುವ ಒಂದು ಹೆಣ್ಣು ಮನೆಯಲ್ಲಿ ಅತ್ತೆ ಇದ್ದರೆ ಪ್ರತಿರೋಧಿಸುವ ಕಾಲವೂ ಕೂಡ ಬಂದಿದೆ. ಒಟ್ಟು ಕುಟುಂಬದ ಪರಿಕಲ್ಪನೆ ಇಲ್ಲ ಅವಿಭಕ್ತ ಕುಟುಂಬಗಳು ಕಾಣೆಯಾಗಿ ಈಗ ವಿಭಕ್ತ ಕುಟುಂಬ ಬಂದಿವೆ. ಅದರಿಂದಾಗಿ ಹೆಣ್ಣು ಸಾಮಾನ್ಯವಾಗಿ ಏಕಾಂಗಿತನವನ್ನು ಹೆಚ್ಚು ಬಯಸುತ್ತಿದ್ದಾಳೆ. ಜೊತೆಗೆ ಹೆಣ್ಣಿಗೆ ಸಿಗುವ ಸವಲತ್ತುಗಳನ್ನು ಕೂಡ ಕೆಲವರು ಕಡಿಮೆ ಮಾಡುತ್ತಿದ್ದಾರೆ ಇದೆಲ್ಲ ನಿಲ್ಲಬೇಕು.
ಸಾಧನೆ ಮಾಡಿದ ಮಹಿಳಾ ಮಣಿಗಳ ಯಶೋಗಾಥೆಯನ್ನು ಎಲ್ಲರೂ ಓದುವಂತಾಗಬೇಕು. ಅದರಲ್ಲೂ ನಮ್ಮ ಯುವ ಜನತೆ ಮಹಿಳೆಯರಿಗೆ ಸದಾ ಗೌರವ ನೀಡಬೇಕು. ಜೊತೆಗೆ ಮಹಿಳೆಯರಿಗೆ ಎಲ್ಲಾ ಇಲಾಖೆಗಳಲ್ಲೂ ಕೂಡ ಸಿಗುವ ಸವಲತ್ತುಗಳ ಪರಿಚಯ ಮಾಡುವ ಕಾರ್ಯಕ್ರಮ ಆಗಬೇಕು. ಮಹಿಳಾಪರ ಚಿಂತನೆಗಳು ನಡೆಯಬೇಕು ಅವಳ ಕಷ್ಟ ಸುಖಗಳಿಗೆ ಸದಾ ಸ್ಪಂದಿಸುವಂತೆ ಆಗಬೇಕು.
ಈ ಮೂಲಕ ಸಾಧನೆ ಮಾಡಿ ಅಮರರಾದ ವೀರ ಮಹಿಳೆಯರು ಜೊತೆಗೆ ಈಗಲೂ ಕೂಡ ಸಮಾಜಮುಖಿ ಚಿಂತನೆಯಲ್ಲಿ ಒಂದಲ್ಲ ಒಂದು ರೀತಿಯ ಸಾಧನೆ ಮಾಡುತ್ತಿರುವ ಎಲ್ಲಾ ಮಹಿಳೆಯರಿಗೂ ಕೂಡ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಹಾರ್ದಿಕ ಶುಭಾಶಯಗಳು.

ಕಾಳಿಹುಂಡಿ ಶಿವಕುಮಾರ್, ಮೈಸೂರು.