ಸಿದ್ದಗಂಗಾ ಶ್ರೀಗಳಿಗೆ  ಭಾರತರತ್ನ ಪ್ರಶಸ್ತಿ ನೀಡಲು ಮಂಜುನಾಥ ಆಗ್ರಹ

  • ಸಿದ್ದಗಂಗಾ ಶ್ರೀಗಳ ಜನ್ಮ‌ದಿನ: ಇಂಚರ ಗ್ರೂಪ್ ನಿಂದ ದಾಸೋಹ ವ್ಯವಸ್ಥೆ
  • 1500 ಜನರಿಗೆ ತಿಂಡಿ, 3500 ಜನರಿಗೆ ಊಟ ವಿತರಣೆ
  • ಬೆಳಿಗ್ಗೆಯಿಂದ ಸಾಯಂಕಾಲದವರೆಗೂ ಪ್ರಸಾದ ವ್ಯವಸ್ಥೆ, ಪಾನಕ, ಮಜ್ಜಿಗೆ ವಿತರಣೆ

ಚಾಮರಾಜನಗರದ:  ಸಿದ್ದಗಂಗಾ ಡಾ.ಶ್ರೀ ಶಿವಕುಮಾರಸ್ವಾಮಿ ಅವರ 119ನೇ ವರ್ಷದ ಜನ್ಮ ದಿನಾಚರಣೆ ಪ್ರಯುಕ್ತ ಇಂಚರ ಹೋಟೆಲ್‌ ಸಮೂಹದ ಮಾಲೀಕ ಸ್ಟೈಲ್‌ ಮಂಜು ಪ್ರತಿ ವರ್ಷದಂತೆ ಈ ವರ್ಷವೂ ಉಚಿತ ದಾಸೋಹದ ವ್ಯವಸ್ಥೆ ಮಾಡಿದ್ದರು.
   ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಹೋಟೆಲ್‌ ನಲ್ಲಿ ಶ್ರೀಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಷಾರ್ಚನೆ ಮಾಡಲಾಯಿತು. ನಂತರ ಬೆಳಿಗ್ಗೆಯಿಂದ ಸಂಜೆಯವರೆಗೆ ತಿಂಡಿ–ಊಟ  ಹಾಗೂ ಪಾನಕ, ಮಜ್ಜಿಗೆ ವಿತರಿಸಿದರು.
   ಕಾರ್ಯಕ್ರಮದಲ್ಲಿ ಭಾಗವಹಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಜವರೇಗೌಡ ಶ್ರೀಗಳ ಭಾವಚಿತ್ರಕ್ಕೆ ಪುಷ್ಷಾರ್ಚನೆ ಮಾಡಿ,ಮಾತನಾಡಿ, ತ್ರಿವಿಧ ದಾಸೋಹಿ ಡಾ.ಶ್ರೀ ಶಿವಕುಮಾರಸ್ವಾಮೀಜಿಗಳು ಜ್ಞಾನ, ಅಕ್ಷರ, ಅನ್ನ ದಾಸೋಹದ ಮೂಲಕ ನಾಡಿನಾದ್ಯಂದ ಹೆಸರುವಾಸಿಯಾಗಿದ್ದರು. ಅವರು ನಡೆದಾಡುವ ದೇವರು ಎಂದು ಕರೆಸಿಕೊಳ್ಳುತ್ತಿದ್ದರು. ಅವರ 119ನೇ ಜನುಮದಿನದ ಅಂಗವಾಗಿ ಇಂಚರ ಹೋಟೆಲ್‌ ಸಮೂಹದ ಮಾಲೀಕ ಸ್ಟೈಲ್‌ ಮಂಜು ಅವರು ಪ್ರತಿ ವರ್ಷದಂತೆ ಈ ವರ್ಷವೂ ಉಚಿತ ದಾಸೋಹದ ವ್ಯವಸ್ಥೆ ಮಾಡಿರುವುದು ಒಂದು ಪುಣ್ಯದ ಕೆಲಸ.ಈ ಮಹಾತ್ಕಾರ್ಯ ಶ್ಲಾಘನೀಯವಾದದ್ದು ಎಂದರು.
ಇಂಚರ ಹೋಟೆಲ್ ಗ್ರೂಪ್  ಮಾಲೀಕ ಕೆ.ಜಿ.ಮಂಜುನಾಥ ಮಾತನಾಡಿ, ಸ್ವಾಮೀಜಿಯವರ ಹುಟ್ಟುಹಬ್ಬದ ಅಂಗವಾಗಿ ಪ್ರತಿ ವರ್ಷವೂ ಉಚಿತವಾಗಿ ಊಟ, ತಿಂಡಿ ವ್ಯವಸ್ಥೆ ಮಾಡುತ್ತಿದ್ದು, ಆದರಂತೆ  ಈ ಬಾರಿಯು  ಬೆಳಿಗ್ಗೆ ತಿಂಡಿ 1500 ಮಂದಿ ಮಧ್ಯಾಹ್ನ 3500 ಮಂದಿ ಊಟ ವ್ಯವಸ್ಥೆ ಮಾಡಲಾಗಿದೆ. ಇಡೀ ಪ್ರಪಂಚಕ್ಕೆ ದಾಸೋಹ ತತ್ವವನ್ನು ಸಾರಿ ತ್ರಿವಿಧ ದಾಸೋಹದಲ್ಲಿ ಎತ್ತರಕ್ಕೆ ಸಾಗಿ ಪ್ರಕಾಶಿಸಿ, ಆ ಬೆಳಕನ್ನು ಇಡೀ ನಾಡಿಗೆ ಹಂಚಿದ ದಿವ್ಯ ಬೆಳಕು  ಡಾ. ಶ್ರೀ ಶಿವಕುಮಾರ ಮಹಾಸ್ವಾಮೀಜಿ ಅವರಿಗೆ ಕೇಂದ್ರ ಸರ್ಕಾರ ಮರಣೋತ್ತರ ಭಾರತರತ್ನ ಪ್ರಶಸ್ತಿ ನೀಡಬೇಕು ಆಗ್ರಹಿಸಿದರು.
  ಈ ಸಂದರ್ಭದಲ್ಲಿ    ಉಪ ತಹಸೀಲ್ದಾರ್ ರಂಗರಾಜು ಮುಖಂಡರಾದ ಬೇಡಗುಳಿ ವೀರಭದ್ರಸ್ವಾಮಿ, ವನಮೇಟಿ ಸುಂದ್ರಣ್ಣ, ಲಿಂಗರಾಜುಮೂರ್ತಿ, ಯೋಗ ಪ್ರಕಾಶ್, ವಿಶ್ವ, ಶಿವಮಲ್ಲಪ್ಪ,  ಇಂಚರ ಗ್ರೂಪ್ ನ  ಈಶ್ವರ್ ರಕ್ಷಿತ್, ನಾಗರತ್ಮಮ್ಮ, ಉಮಾಮಂಜುನಾಥ್,  ರಾಧಾಕೃಷ್ಣ,  ಕಾರ್ ಸಿದ್ದರಾಜು,  ಅಡುಗೆ ಭಟ್ಟರಾದ
ಹೆಬ್ಬಸೂರ ಶಂಕರ್,ಮಹೇಶ್, ರಾಜು, ಸಿಬ್ಬಂದಿ ವರ್ಗದವರು ಹಾಜರಿದ್ದರು.

Leave a Reply

Your email address will not be published. Required fields are marked *