ಮೈಸೂರು : ನಾಯ್ಡು ನಗರದಲ್ಲಿ ಇರುವ ಶಲೋಮ್ ಮೊಂಟೆಸರಿ ಶಾಲೆಯಲ್ಲಿ ಇತ್ತೀಚೆಗೆ ಶಾಲೆಯಲ್ಲಿ ಛದ್ಮವೇಶ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಶಾಲೆಯ ಪುಟಾಣಿಗಳು ವಿವಿಧ ಬೆಗೆಯ ಛದ್ಮವೇಷವನ್ನು ಧರಿಸಿ ಮಿಂಚಿದರು. ವೇದಿಕೆ ಮೇಲೆ ಹಾಡು, ನೃತ್ಯ, ಪದ್ಯಗಳನ್ನು ಹೇಳುತ್ತ ತಮ್ಮಲ್ಲಿ ಇರುವ ಪ್ರತಿಭೆಗಳನ್ನು ಅನಾವರಣ ಮಾಡಿದರು.
ಶಾಲೆಯ ಪ್ರಾಂಸುಪಾಲರಾದ ಶಶಿಕಲಾ ಅವರು ಮಾತನಾಡಿ, ನಮ್ಮ ಶಾಲೆಯಲ್ಲಿ ಮಕ್ಕಳ ಕಲಿಕೆಗೆ ಪೂರಕವಾದ ವಾತಾವರಣ ನಿರ್ಮಾಣ ಮಾಡಲಾಗಿದೆ. ಆಟದ ಮೂಲಕ ಮಕ್ಕಳಿಗೆ ಪಾಠ ಮಾಡಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಮಕ್ಕಳು ತಮ್ಮ ಪ್ರತಿಭೆಯನ್ನು ಹೊರ ತರುವ ಪ್ರಯತ್ನ ಮಾಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಹ ಶಿಕ್ಷಕರಾದ ನಂದಿನಿ, ಪ್ರೀತಿ, ಪಾಲಕರು ಇದ್ದರು.