ಒಳ ಮೀಸಲಾತಿ ಅನ್ಯಾಯ ಖಂಡಿಸಿ ಬೃಹತ್ ಪ್ರತಿಭಟನೆ

  • ಬಲಗೈ ಸಮುದಾಯಗಳ ಒಕ್ಕೂಟದ ವತಿಯಿಂದ ಬೃಹತ್ ಮೆರವಣಿಗೆ

ಚಾಮರಾಜನಗರ: ಒಳ ಮೀಸಲಾತಿಯಿಂದ  ಬಲಗೈ ಸಮುದಾಯಕ್ಕೆ  ಆಗಿರುವ ಅನ್ಯಾಯವನ್ನು
ಕೂಡಲೇ ಸರಿಪಡಿಸುವಂತೆ ಆಗ್ರಹಿಸಿ ಗಡಿಕಟ್ಟೆ ಯಜಮಾನರು ಬಲಗೈ ಸಮುದಾಯಗಳ ಒಕ್ಕೂಟ, ಡಾ.ಬಿ.ಆರ್.ಅಂಬೇಡ್ಕರ್ ಮಹಾಸಭಾದ ವತಿಯಿಂದ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
   ನಗರದ ಡಾ.ಬಿ.ಅಂಬೇಡ್ಕರ್ ಭವನದಲ್ಲಿ ಸಮಾವೇಶಗೊಂಡ  ಪ್ರತಿಭಟನಾಕಾರರು ಅಲ್ಲಿಂದ ಮೆರವಣಿಗೆ ಹೊರಟು ಸತ್ತಿರಸ್ತೆ, ಗುಂಡ್ಲುಪೇಟೆ ವೃತ್ತ, ದೊಡ್ಡಂಗಡಿ, ಚಿಕ್ಕಂಗಡಿ ಬೀದಿ, ಸಂತೇಮರಹಳ್ಳಿ ವೃತ್ತ, ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿ ರಸ್ತೆ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಕೆಲ ಪ್ರತಿಭಟನೆ ನಡೆಸಿ ಹೆಚ್ಚುವರಿ ಜಿಲ್ಲಾಧಿಕಾರಿ ಜವರೇಗೌಡ ಅವರ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
  ರಾಜ್ಯ ಸರ್ಕಾರ ಹಾಗೂ ಬಲಗೈ ಸಮುದಾಯದ ಶಾಸಕರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರವು ಒಳ ಮೀಸಲಾತಿಯನ್ನು ತನ್ನ ಪಕ್ಷದ ಪ್ರಣಾಳಿಕೆಯಲ್ಲಿ ಜಾರಿ ಮಾಡಲು ಹೇಳಿರುವ ಕಾರಣಕ್ಕೆ ಜಾರಿ ಮಾಡಲು ಮುಂದಾಗಿರುವುದು ಪರಿಶಿಷ್ಟ ಜಾತಿಯ 101 ಜಾತಿಗೂ ಮಾಡುತ್ತಿರುವ ದ್ರೋಹವಾಗಿದೆ ಆರೋಪಿಸಿದರು.
  ಸಾಮಾಜಿಕ ನ್ಯಾಯದ ಬಗ್ಗೆ ಬಹಳ ಕಾಳಜಿ ಇರುವ ಸರ್ಕಾರ ಎಂದು ಪರಿಶಿಷ್ಟ ಜಾತಿಯ ದೊಡ್ಡ ಸಮುದಾಯು ನಂಬಿದ್ದು ಈ ನಂಬಿಕೆಗೆ ವಿರೋಧವಾಗಿ ಸರ್ಕಾರ ನಡೆದುಕೊಳ್ಳುತ್ತಿದ್ದು ಪರಿಶಿಷ್ಟ ಜಾತಿಯ ಒಳಪಂಗಡದಲ್ಲಿ ದ್ವೇಷ ಬರುವ ರೀತಿಯಲ್ಲಿ ತರಾತುರಿಯಲ್ಲಿ ಒಳಮಿಸಲಾತಿಯನ್ನು ಜಾರಿ ಮಾಡಲು ಹೊರಟಿರುವುದು ಖಂಡನೀಯ ಎಂದರು.
ಕೂಡಲೇ ಅವೈಜ್ಞಾನಿಕವಾಗಿರುವ ಒಳ ಮೀಸಲಾತಿಯನ್ನು ಸರ್ಕಾರವು ಸೂಕ್ಷ್ಮವಾಗಿ ಗಮನಿಸಬೇಕು. ಆ ಮೂಲಕ ನ್ಯಾ.ನಾಗಮೋಹನ್ ದಾಸ್ ಸಮಿತಿ ನೀಡಿರುವ ಒಳ ಮೀಸಲಾತಿಯನ್ನು ರದ್ದು ಪಡಿಸಬೇಕು ಎಂದು ಆಗ್ರಹಿಸಿದರು. ರೋಸ್ಟ‌ರ್ ಬಿಂದುವಿನಲ್ಲಿ ಪರಿಶಿಷ್ಟ ಜಾತಿ ಬಲಗೈ ಸಮುದಾಯವು
9ನೇ ಸ್ಥಾನದಲ್ಲಿ ಇರುವುದನ್ನು ಹಿಂಪಡೆಯಬೇಕು. ಪರಿಶಿಷ್ಟ ಜಾತಿಯ ಜಾತಿ ಪ್ರಮಾಣ ಪತ್ರವನ್ನು ಮೊದಲಿನಂತೆ ನೀಡಬೇಕು. ಒಳ ಮೀಸಲಾತಿಯಲ್ಲಿರುವ ವ್ಯತ್ಯಾಸವನ್ನು ಸರಿಪಡಿಸುವ ತನಕ ಯಾವುದೇ ಸರ್ಕಾರಿ ಹುದ್ದೆಗಳ ನೇಮಕವನ್ನು ಮಾಡಬಾರದು ಎಂದು ಒತ್ತಾಯಿಸಿದರು.
  ಪ್ರತಿಭಟನೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಮಹಾಸಭಾದ ಅಧ್ಯಕ್ಷ ಉಮೇಶ್ ಕುದರ್, ಕಾರ್ಯಾಧ್ಯಕ್ಷ ಸಿ.ಕೆ.ಮಂಜುನಾಥ್, ಗೌರವಾಧ್ಯಕ್ಷ ಸಿ.ಎಂ.ಕೃಷ್ಣಮೂರ್ತಿ, ಸಾಹಿತಿ ಮಂಜು ಕೋಡಿಉಗನೆ, ಮೂಡ್ನಾಕೂಡು ಪ್ರಕಾಶ್, ಎಸ್.ಪಿ.ಮಹೇಶ್, ವಾಸು, ಬಾಬು, ಮಸಣಾಪುರ ನಾಗರಾಜು, ಭಾನುಪ್ರಕಾಶ್, ಕುಮಾರ್, ನವೀನ್ ಮೌರ್ಯ, ಶಿವಮಲ್ಲು, ಆಣಗಳ್ಳಿ ಬಸವರಾಜು, ಆನಂದ್, ರಾಜೇಂದ್ರ, ರಂಗಸ್ವಾಮಿ, ಸಿದ್ದರಾಜು, ಗಡಿಕಟ್ಟೆ ಯಜಮಾನರು, ಬಲಗೈ ಸಮುದಾಯಗಳ ಒಕ್ಕೂಟದ ಪದಾಧಿಕಾರಿಗಳು, ಡಾ.ಬಿ.ಆರ್.ಅಂಬೇಡ್ಕರ್ ಮಹಾಸಭಾದ ಪದಾಧಿಕಾರಿಗಳು, ಜನಾಂಗದ ಮುಖಂಡರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *