- ಚಾಮರಾಜನಗರ ಅಭಿವೃದ್ಧಿಗೆ ಧ್ರುವನಾರಾಯಣ್, ಎಚ್.ಎಸ್.ಮಹದೇವಪ್ರಸಾದ್ , ಕೊಡುಗೆ ಅಪಾರ, ಪುಟ್ಟರಂಗಶೆಟ್ಟಿ ಕೊಡುಗೆ ಶೂನ್ಯ, ವೀರನಪುರದಲ್ಲಿ 5 ಎಕರೆ ಸರ್ಕಾರಿ ಜಮೀನು ಕಬಳಿಸುವ ಹುನ್ನಾರ
ಚಾಮರಾಜನಗರ : ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಅವರು ಸರ್ಕಾರದ ಅನುದಾನ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಬಿಜೆಪಿ ಮುಖಂಡರು, ಕಾಡಾ ಮಾಜಿ ಅಧ್ಯಕ್ಷ ನಿಜಗುಣರಾಜು ಆರೋಪಿಸಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದ ಅವರು ಚಾಮರಾಜನಗರ ವಿಧಾನಸಭಾ ಕ್ಷೇತ್ರದಿಂದ ಸಿ.ಪುಟ್ಟರಂಗಶೆಟ್ಟಿ ಅವರು ಕಳೆದ 20 ವರ್ಷದಿಂದಲ್ಲೂ ಶಾಸಕರಾಗಿ ಆಯ್ಕೆಯಾಗುತ್ತಾ ಬಂದಿದ್ದಾರೆ. ಕಳೆದ 3 ತಿಂಗಳ ಹಿಂದೆ ಸರ್ಕಾರ ಸುಮಾರು ಶಾಸಕರಿಗೆ ತಲಾ 50 ಕೋಟಿ ರೂ. ಅನುದಾನವನ್ನು ಆಯಾಯ ಕ್ಷೇತ್ರದ ಅಭಿವೃದ್ಧಿಗಾಗಿ ನೀಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳುತ್ತಾರೆ ಗುತ್ತಿಗೆಯಲ್ಲಿ ನಾವು ಎಸ್‌ಸಿ, ಎಸ್‌ಟಿ, ಓಬಿಸಿಗಳಿಗೆ ಮೀಸಲಾತಿ ಮಾಡಿದ್ದೇವೆ. ಅವರ ಆರ್ಥಿಕವಾಗಿ ಮೇಲೆ ಬರಬೇಕು ಎಂದು ಹೇಳಿದ್ದಾರೆ. ಅದು ಬಹಳ ಸಂತಸ ವಿಚಾರವಾಗಿದೆ. ಆದರೆ 50 ಕೋಟಿಗಳಲ್ಲಿ ಕೇವಲ 3, 4ಕೋಟಿ ಜಿ.ಪಂ.ಗೆ, 5, 6 ಕೋಟಿಯನ್ನು ಪಿಡಬ್ಲೂಡಿ ಇಲಾಖೆಗೆ ನೀಡಿ ಇನ್ನೂ ಉಳಿದ 40 ಕೋಟಿ ಅನುದಾನವನ್ನು ಕೆ’ಐಆರ್‌ಡಿಎಲ್‌ಗೆ ಕೊಟ್ಟು ಹೊರಗಡೆ ಏಜೆಸ್ಸಿಗಳಿಗೆ ಬೆಂಗಳೂರು, ಯಳಂದೂರು, ನರಸೀಪುರದವರಗೆ ಕೆಲಸ ಕೊಟ್ಟು ಎಲ್ಲೆಂದಿಂದ ಬಂದವರು ಕೆಲಸ ಮಾಡುತ್ತಿದ್ದಾರೆ. ಶಾಸಕರು ಕಮಿಷನ್‌ಗಾಗಿ ಕಾಮಗಾರಿ ಮಾಡಿಸುತಿದ್ದಾರೆ ಎಂದು ದೂರಿದರು.
ಶಾಸಕ ಪುಟ್ಟರಂಗಶೆಟ್ಟಿ ವಿರುದ್ಧ ಕಾಂಗ್ರೆಸ್ಸಿನಲ್ಲಿ ಅಸಾಮಾಧಾನ: ತಾಲೂಕಿನ ವೀರನಪುರ ಕ್ರಾಸ್ ಸಮೀಪದಲ್ಲಿ 23 ಎಕರೆ ಜಮೀನು ಖರೀದಿ ಮಾಡಿದ್ದಾರೆ. ಅದರೊಳಗೆ 5 ಎಕರೆ ಸರ್ಕಾರಿ ಜಾಗವಿದ್ದು ಅದನ್ನು ಕಬಳಿಸುವ ಹುನ್ನಾರ ಮಾಡಿದ್ದಾರೆ. ಅಲ್ಲಿಗೆ 2 ಕೋಟಿ ರೂ. ರಸ್ತೆಗೆ ಹಾಕಿದ್ದಾರೆ. 2 ಕೋಟಿ ರೂ. ಟೆಂಡರ್ ಆಗಿಲ್ಲ. ಪುಟ್ಟರಂಗಶೆಟ್ಟರು ಬೇನಾಮಿ ಗುತ್ತಿಗೆದಾರರಂತೆ ಕೆಲಸ ಮಾಡುತ್ತಿದ್ದಾರೆ. ಇದನ್ನು ಚಾಮರಾಜನಗರ ಕ್ಷೇತ್ರದ ಜನರು ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಹೇಳುತ್ತಿದ್ದಾರೆ ಆದರಿಂದ ನಮಗೂ ತಿಳಿಯಿತು .ಅವರ ವಿರುದ್ಧ ಕಾಂಗ್ರೆಸ್‌ನಲ್ಲಿ ಅಸಮಾಧಾನವಿದೆ ಎಂದರು.
ನಾವು ಸತ್ಯವನ್ನು ಹೇಳಿದರೆ ನಾಳೆ ಒಂದು ಬ್ಯಾಂಡ್‌ಸೆಟ್ ನಂತೆ ಬಂದು ಕೌಂಟರ್ ಕೊಡುತ್ತದೆ. ಇದು ಸಾರ್ವಜನಿಕರ ತೆರಿಗೆ ಹಣವಾಗಿದ್ದು, ನೀವು ಕೂಡ ಇದನ್ನು ಖಂಡಿಸಬೇಕು ಎಂದು ಮನವಿ ಮಾಡಿದರು.
ಚಾಮರಾಜನಗರ ಪಟ್ಟಣ ಪ್ರದೇಶ, ಗ್ರಾಮಾಂತರ ಪ್ರದೇಶದದಲ್ಲಿ ಶುಚಿತ್ವ ಇಲ್ಲದೆ ಕೊಳೆತು ಗಬ್ಬುನಾರುತಿದೆ. ಚಾಮರಾಜನಗರ ಕ್ಷೇತ್ರದ ಜನತೆ ವೋಟ್ ಕೊಟ್ಟು ಗೆಲ್ಲಿಸಿರೋದು ಅಭಿವೃದ್ಧಿ ಮಾಡಲಿ, ಸರ್ಕಾರ ಇತ್ತೀಚಿಗೆ ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗಾಗಿ ಬಿಡುಗಡೆಯಾಗಿರುವ 50 ಕೋಟಿ ರೂ. ಬಗ್ಗೆ ಸರ್ಕಾರ ತನಿಖೆಗೆ ಮಾಡಿಸಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೂಡ್ನಾಕೂಡು ಪ್ರಕಾಶ್, ಗ್ರಾಮಾಂತರ ಮಂಡಲ ಅಧ್ಯಕ್ಷ ಕಾಡಹಳ್ಳಿ ಕುಮಾರ್, ಯುವಮೋರ್ಚಾ ಜಿಲ್ಲಾಧ್ಯಕ್ಷ ಸೂರ್ಯಕುಮಾರ್, ಎಸ್ ಸಿ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮಸಮುದ್ರ ಶಿವಣ್ಣ, ಮುಖಂಡರಾದ ಎಂ.ಎಸ್.ಚಂದ್ರಶೇಖರ್, ನಟರಾಜು, ಗ್ರಾ.ಪಂ.ಮಾಜಿ ಅಧ್ಯಕ್ಷ ನಿಂಗನಾಯಕ, ಯುವ ಮೋರ್ಚಾದ ಟೌನ್ ಅಧ್ಯಕ್ಷ ಪ್ರವೀಣ್‌ನಾಯಕ ಹಾಜರಿದ್ದರು.