ಚಾಮರಾಜನಗರ: ಇತಿಹಾಸ ಪ್ರಸಿದ್ಧವಾಗಿರುವ ಶ್ರೀ ಚಾಮರಾಜೇಶ್ವರ ಉದ್ಯಾನದಲ್ಲಿರುವ ತಾಯಿ ಭುವನೇಶ್ವರಿ ದೇವಸ್ಥಾನ ಅವರಣದಲ್ಲಿ ಗುಂಡ್ಲುಪೇಟೆ, ಪಟ್ಟಣದ ಹೊಸೂರಿನ ಬಾಲಕಿ ಮೋನಿಷಾ.ಎಂ ರಾಷ್ಟ್ರೀಯ ಚಾಂಪಿಯನ್ ವುಶು ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಸಬ್ ಜೂನಿಯರ್ ವುಶು ವಿಭಾಗದಲ್ಲಿ ಚಿನ್ನ ಪಡೆಯುವ ಮೂಲಕ ಕರ್ನಾಟಕದಲ್ಲಿ ಮೊದಲ ಚಾಂಪಿಯನ್ ಆಗಿದ್ದಾರೆ.
ಇವರಿಗೆ ಜೈ ಭುವನೇಶ್ವರಿ ಕನ್ನಡ ಯುವ ವೇದಿಕೆ ವತಿಯಿಂದ ನಡೆದ ಸರಳ ಕಾರ್ಯಕ್ರಮದಲ್ಲಿ ಅಧ್ಯಕ್ಷ ಜಿ,ಬಂಗಾರು, ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾದ ರವಿಚಂದ್ರನ್ ಪ್ರಸಾದ್, ಬರಹಗಾರ ಲಕ್ಷ್ಮಿನರಸಿಂಹ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಾಗೇಂದ್ರ, ಜೆಡಿಎಸ್ ಮುಖಂಡ ಅಲೂರು ಮಲ್ಲು, ಬಿಕೆ ಮಂಜುನಾಥ ಆರಾದ್ರೆ, ವರದನಾಯಕ, ಶ್ಯಾಮ್, ಮಧು, ವೆಂಕಟರಾಮ್, ಸ್ವಾಮಿ 2023 ಸಾಲಿನ ಆದರ್ಶ ಮಹಿಳೆ ಪ್ರಶಸ್ತಿ ವಿಜೇತರಾದ ಪುಷ್ಪಲತಾ ಸುಬ್ರಮಣ್ಯ, ಅನಿತಾ, ಸಂತೋಷ್, ರೇಖಾನಾಗೇಗೌಡ, ಸೇರಿದಂತೆ ಇತರ ಸಂಘ-ಸಂಸ್ಥೆ ಮುಖಂಡರು ಸನ್ಮಾನಿಸಿದರು.
ಗುಂಡ್ಲುಪೇಟೆ ತಾಲೂಕಿನ ಹೊಸೂರು ಗ್ರಾಮದ ಮಧು ಮತ್ತು ನಂದಿನಿ ದಂಪತಿಗಳ ಪುತ್ರಿ ಮೋನಿಷಾ.ಎಂ ಛತ್ತೀಸ್ಟಡದಲ್ಲಿ ನಡೆದ 9ನೇ ವುಶು ಫೆಡರೇಷನ್ ಕಪ್ ರಾಷ್ಟ್ರೀಯ ಚಾಂಪಿಯನ್ ಶಿಪ್ ನಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಸುಮಾರು 25 ವರ್ಷಗಳಲ್ಲಿ ಮೊದಲ ಬಾರಿ ಚಿನ್ನ ಪಡೆದು ಕರ್ನಾಟಕಕ್ಕೆ ಕೀರ್ತಿ ತಂದಿದ್ದಾರೆ.
ಮೊದಲ ಪಂದ್ಯ ಹರಿಯಾಣವನ್ನು 2-1 ಅಂತರದಿಂದ ಸೋಲಿಸಿದ್ದು, ಎರಡನೇ ಪಂದ್ಯ ಒಡಿಶಾವನ್ನು 2-1 ಅಂತರ ಮತ್ತು ಅಂತಿಮ ಪಂದ್ಯ ರಾಜಸ್ಥಾನವನ್ನು 2-0 ಅಂತರದಿಂದ ಮೋನಿಷಾ.ಎಂ ಸೋಲಿಸಿದ್ದಾರೆ. ತನ್ನ ಎಲ್ಲಾ ಪಂದ್ಯಗಳಲ್ಲಿ ಮೋನಿಷಾ ಅಸಾಧಾರಣ ಕೌಶಲ್ಯ, ನಿರ್ಭೀತ ಆಕ್ರಮಣಶೀಲತೆ, ಯುದ್ಧತಂತ್ರದ ಬುದ್ದಿವಂತಿಕೆಯಿಂದ ಗೆಲುವು ಪಡೆದಿದ್ದಾರೆ.
ಸನ್ಮಾನ ಸ್ವೀಕರಿಸಿ ಮಾತನಾಡಿದ ಮೋನಿಷಾ. ನಾನು ಚಿಕ್ಕವಸಿನಲ್ಲಿ ರಾಜಸ್ಥಾನ್ ವಿರುದ್ಧ ವುಶು ಕ್ರೀಡಾಕೂಟದಲ್ಲಿ ಕರ್ನಾಟಕ ಪ್ರತಿನಿಧಿಯಾಗಿ ಜಯಗಳಿಸಿ ಚಿನ್ನದ ಪದಕ ಗಳಿಸಿದ್ದೇನೆ.