- ಅಧಿಕಾರಿಗಳೊಂದಿಗೆ ಚರ್ಚಿಸಿ ಅದಷ್ಟು ಬೇಗ ಸಮಸ್ಯೆ ಪರಿಹರಿಸುವೆ
ಚಾಮರಾಜನಗರ : ನಗರದ 10ನೇ ವಾರ್ಡ್‌ನ ಬುದ್ಧನಗರಕ್ಕೆ ನಗರಸಭಾ ಪೌರಾಯುಕ್ತ ಪರಶುರಾಮ ಛಲವಾದಿ ಭೇಟಿ ನೀಡಿ ಪರಿಶೀಲಿಸಿ, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.
ವಾರ್ಡ್‌ನ ಯುವ ಮುಖಂಡ ಭಾನುಪ್ರಕಾಶ್ ವಾರ್ಡ್‌ನಲ್ಲಿ ಕಸವಿಲೇವಾರಿ ಆಗುತ್ತಿಲ್ಲ, ಚರಂಡಿ ಸ್ವಚ್ಚತೆಗೊಳಿಸಿಲ್ಲ. ಒಳಚರಂಡಿ ಮುಚ್ಚಲು ಹಾಕಿಲ್ಲ, ಕುಡಿಯುವ ನೀರಿನ ಸಮಸ್ಯೆ ಇದೆ. ಕೂಡಲೇ ಸರಿಪಡಿಸಿಕೊಡುವಂತೆ ವಾರ್ಡ್‌ಗೆ ಭೇಟಿ ನೀಡಿದ ಪೌರಾಯುಕ್ತರ ಗಮನಕ್ಕೆ ತಂದರು.
ವಾರ್ಡ್‌ನ ಪರಿಶೀಲಿಸಿ, ನಿವಾಸಿಗಳಿಂದ ಆಹವಾಲು ಸ್ವೀಕರಿಸಿದ ಪೌರಾಯುಕ್ತ ಪರಶುರಾಮ ಛಲವಾದಿ ಮಾತನಾಡಿ, ವಾರ್ಡ್ ನಿವಾಸಿಗಳ ದೂರಿನ ಮೇರಿಗೆ ವಾರ್ಡ್ ಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದೇನೆ ಕಸದ ವಿವೇವಾರಿ ಆಗದಿರುವುದು, ಚರಂಡಿ ಸ್ವಚ್ಚತೆ ಮಾಡಿಲ್ಲ. ಒಳಚರಂಡಿ ಮುಚ್ಚಲು ಹಾಕಿಲ್ಲದಿರುವುದನ್ನು ನಾನು ಕಣ್ಣಾರೆ ವೀಕ್ಷಣೆ ಮಾಡಿದ್ದೇನೆ. ನಿವಾಸಿಗಳು ಕೂಡ ತಮ್ಮ ಗಮನಕ್ಕೆ ತಂದಿದ್ದಾರೆ. ಈ ಸಂಬಂಧ ಕಚೇರಿಯಲ್ಲಿ ಅಧಿಕಾರಿಗಳ ಸಭೆ ಕರೆದು ಚರ್ಚಿಸಿ ಆದಷ್ಟು ಬೇಗ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದರು.