ಸಫಾಯಿ ಕರ್ಮಚಾರಿ ಕಾವಲು ಸಮಿತಿಯಿಂದ ಮೈಸೂರು ವಿಭಾಗ ಮಟ್ಟದ ಸಮಾಲೋಚನಾ ಸಭೆ

ರಾಜ್ಯ ಸಫಾಯಿ ಕರ್ಮಚಾರಿ ಮೇಲುಸ್ತುವಾರಿ ಸಮಿತಿ ಸದಸ್ಯರಾದ ಓಬಳೇಶ್ ರವರಿಗೆ ಸನ್ಮಾನ
ಚಾಮರಾಜನಗರ: ಸಫಾಯಿ ಕರ್ಮಚಾರಿ ಕಾವಲು ಸಮಿತಿ ಕರ್ನಾಟಕದ ವತಿಯಿಂದ ಮೈಸೂರು ವಿಭಾಗ ಮಟ್ಟದ ಸಮಾಲೋಚನಾ ಸಭೆಯನ್ನು ನಗರದ ಸಿಡಿಎಸ್ ಭವನದಲ್ಲಿ ಆಯೋಜಿಸಲಾಗಿತ್ತು.

ಸಭೆಯಲ್ಲಿ ಕಾವಲು ಸಮಿತಿಯ ರಾಜ್ಯ ಸಂಚಾಲಕರು ಹಾಗೂ ರಾಜ್ಯ ಸಫಾಯಿ ಕರ್ಮಚಾರಿ ಮೇಲುಸ್ತುವಾರಿ ಸಮಿತಿ ಸದಸ್ಯರಾದ ಓಬಳೇಶ್‍ರವರು ಮಾತನಾಡಿ, ರಾಜ್ಯದಲ್ಲಿ ಸಫಾಯಿ ಕರ್ಮಚಾರಿಗಳ ಹಿತದೃಷ್ಠಿಗಾಗಿ ಮತ್ತು ಅವರ ಅಭಿವೃದ್ಧಿಗಾಗಿ ಸಫಾಯಿ ಕರ್ಮಚಾರಿ ಕಾವಲು ಸಮಿತಿ ಕರ್ನಾಟಕವು ಶ್ರಮಿಸುತ್ತಿದೆ ಎಂದರು.

ಈ ಸಮಿತಿಯನ್ನು ರಾಜ್ಯಾದ್ಯಂತ ವಿಸ್ತರಿಸಬೇಕು ಎಂದ ಅವರು, ಮೈಸೂರು ವಿಭಾಗ ಮಟ್ಟದಲ್ಲಿ ಮೈಸೂರು ಮಂಡ್ಯ ಕೊಡಗು ಚಾಮರಾಜನಗರ ಜಿಲ್ಲೆಯ ಪದಾಧಿಕಾರಿಗಳನ್ನು ಈ ಸಮಿತಿಗೆ ನೇಮಿಸಲಾಯಿತು.

ಈ ಸಂದರ್ಭದಲ್ಲಿ ಕವಿ ಹಾಗೂ ಜಿಲ್ಲಾ ಸಫಾಯಿ ಕರ್ಮಚಾರಿ ವಿಚಕ್ಷಣಾ ಸಮಿತಿ ಸದಸ್ಯ ಸಿ.ಶಂಕರ ಅಂಕನಶೆಟ್ಟಿಪುರ, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಎಸ್.ಕುಮಾರ್, ಬೆಳಗೊಳ ಆರ್ಮುಗಂ ಬಿ.ಆರ್., ಶ್ರೀನಿವಾಸ್, ತಾರಾ ಪಂಡವಪುರ, ರಾಜೇಂದ್ರ.ಎಂ., ಕೊಡಗು ರಂಗಸ್ವಾಮಿ.ಆರ್., ರಂಗಸ್ವಾಮಿ.ಪಿ., ರಾಮಚಂದ್ರಪ್ಪ, ಮುರುಗೇಶ್ ವಿರಾಜಪೇಟೆ, ರಂಗಸ್ವಾಮಿ ಕೂಡುಮಂಗಳೂರು, ಮಹದೇವ್, ಸೋಮ ಕೆ.ಆರ್.ಪೇಟೆ, ನಂಜಪ್ಪ, ಬಸವನಗುಡಿ, ಮುರುಗೇಶ್ ಹುಣಸೂರು ಮತ್ತಿತರರಿದ್ದರು.

Leave a Reply

Your email address will not be published. Required fields are marked *