ಚಾಮರಾಜನಗರ : ಛಲವಾದಿ ಮಹಾಸಭಾದ ನೂತನ ಜಿಲ್ಲಾಧ್ಯಕ್ಷರಾಗಿ ಕುಂಭೇಶ್ವರ ಕಾಲೋನಿಯ ಎನ್.ಕುಮಾರ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ನಗರದ ಪ್ರವಾಸಿಮಂದಿರದಲ್ಲಿ ಛಲವಾದಿ ಮಹಾಸಭಾದ ರಾಜ್ಯ ಉಪಾಧ್ಯಕ್ಷ ಅಣಗಳ್ಳಿ ಬಸವರಾಜು ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ
ಆಯ್ಕೆ ಮಾಡಲಾಯಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಅಣಗಳ್ಳಿ ಬಸವರಾಜು ಮಾತನಾಡಿ ಪ್ರತಿ ಮೂರುವರ್ಷಕ್ಕೊಮ್ಮೆ ಛಲವಾದಿ ಮಹಾಸಭಾದ ಜಿಲ್ಲಾಧ್ಯಕ್ಷರನ್ನು ಆಯ್ಕೆಮಾಡಿಕೊಂಡು ಬರುತ್ತಿದ್ದು ರಾಜ್ಯ ಸಮಿತಿ ಸೂಚನೆಯಂತೆ ಇಂದು ನಡೆದ ಸಭೆಯಲ್ಲಿ ನೂತನ ಜಿಲ್ಲಾಧ್ಯಕ್ಷರಾಗಿ ಎನ್.ಕುಮಾರ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದ್ದು, ರಾಜ್ಯಾಧ್ಯಕ್ಷರಾದ ವಾಣಿ ಕೆ.ಶಿವರಾಂ ಅವರಿಗೆ
ಕಳುಹಿಸಿಕೊಡಲಾಗುತ್ತದೆ. ಅಲ್ಲಿಂದ ನೂತನ ಅಧ್ಯಕ್ಷರ ಆಯ್ಕೆಯ ಅಧಿಕೃತ ಆದೇಶ ಬಂದ ನಂತರ ಜಿಲ್ಲೆ ಮಹಾಸಭಾ ಚಟುವಟಿಕೆ ಆರಂಭವಾಗುತ್ತದೆ ಎಂದರು.
ಸಭೆಯಲ್ಲಿ ಜಿಲ್ಲಾ ಗೌರವಾಧ್ಯಕ್ಷ ರಾಮಸಮುದ್ರ ಶಿವನಂಜಯ್ಯ, ಮಾಜಿ ಅಧ್ಯಕ್ಷ ಕೆ.ಆರ್.ನಾರಾಯಣ್, ಕೋಡಿಉಗನೆ ಎಲ್.ಮಹದೇವಯ್ಯ, ದಡದಹಳ್ಳಿ ಶಂಕರ್, ವಾರ್ಡನ ಮಹಾದೇವಸ್ವಾಮಿ, ತಾ.ಪಂ.ಮಾಜಿ ಸದಸ್ಯ ಮಸಣಾಪುರ ನಾಗರಾಜು, ಹನೂರು ಮಂಟೇಸ್ವಾಮಿ, ಗುಂಡ್ಲುಪೇಟೆ ದೇವರಾಜು, ಪರಮೇಶ್, ಶಿವಪ್ರಸಾದ್, ಅಶೋಕ್, ಚಿದಾನಂದಮೂರ್ತಿ, ನಂದೀಶ್, ಕಿರಣ್, ಯಳಂದೂರು ವೆಂಕಟೇಶ್, ಜಿ.ತಮ್ಮಯ್ಯ, ಚಾಮರಾಜು, ರಂಗಸ್ವಾಮಿ, ಸುನೀಲ್, ನಾಗರಾಜು, ಇತರರು ಭಾಗವಹಿಸಿದ್ದರು.