ಚಾಮರಾಜನಗರ: ಮೈಸೂರಿನ ನಾಗಮಾರ್ಷಲ್ ಆರ್ಟ್ಸ್ ಅಕಾಡೆಮಿವತಿಯಿಂದ ಮೈಸೂರಿನ ಚಾಮುಂಡೇಶ್ವರಿ ಒಳ ಕ್ರೀಡಾಂಗಣದಲ್ಲಿ ನಡೆದ 20 ನೇ ರಾಷ್ಟ್ರ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ಪಂದ್ಯಾವಳಿಯಲ್ಲಿ ನಗರದ ನಾಗಮಾರ್ಷಲ್ ಆರ್ಟ್ಸ್ ಅಕಾಡೆಮಿ ಕರಾಟೆಪಟುಗಳು
ಭಾಗವಹಿಸಿ ವಿವಿಧ ವಿಭಾಗಗಳಲ್ಲಿ ಸ್ಪರ್ಧಿಸಿ ಉತ್ತಮ ಪ್ರದರ್ಶನ ನೀಡಿ ವಿಜೇತರಾಗಿ ಬಹುಮಾನಗಳನ್ನು ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಕತಾ ಮತ್ತು ಕುಮಿತೆಯ ವಿವಿಧ ವಿಭಾಗಗಳಲ್ಲಿ 17 ಪ್ರಥಮ ಸ್ಥಾನ, 14 ದ್ವಿತೀಯ ಸ್ಥಾ, 21 ತೃತೀಯ ಸ್ಥಾನಗಳನ್ನು ಪಡೆದು ಓವರ್ ಆಲ್ ಚಾಂಪಿಯನ್ ಶಿಪ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ಅಭಿನಂದನೆ: ವಿಜೇತ ಕರಾಟೆ ಪಟುಗಳನ್ನು ಮುಖ್ಯ ಕರಾಟೆ ತರಬೇತುದಾರರು ಹಾಗೂ ವಕೀಲರಾದ ಸೆನ್ಸಾಯ್ ರಾಜೇಂದ್ರ, ತರಬೇತುದಾರರಾದ ಸೆನ್ಸಾಯ್ಗಳಾದ ಯೋಗೀಶ್, ರಮೇಶ್, ಅಬ್ದುಲ್ ಫೈಸಲ್, ಶೇಖರ್ ಅಭಿನಂದಿಸಿದ್ದಾರೆ.